Fake News - Kannada
 

ಇದು ಜಮ್ಮುನಿನ ರಾಷ್ಟ್ರೀಯ ಹೆದ್ದಾರಿ 44 ಅಲ್ಲ, ಬದಲಾಗಿ ಚೈನಾದ ಎಕ್ಸ್ಪ್ರೆಸ್ ವೇ

0

ಪರ್ವತಗಳ ನಡುವೆ ಹೊಳೆಗಳ ಮೇಲೆ ನಿರ್ಮಿಸಲಾದ ಎತ್ತರದ ರಸ್ತೆಯನ್ನು ಚಿತ್ರಿಸುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದು ಭಾರತದ ಜಮ್ಮು ರಾಷ್ಟ್ರೀಯ ಹೆದ್ದಾರಿ 44 ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ. ಹಾಗಾದರೆ ಈ  ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಭಾರತದ ಜಮ್ಮು ರಾಷ್ಟ್ರೀಯ ಹೆದ್ದಾರಿ 44 ರ ಚಿತ್ರ.

ಫ್ಯಾಕ್ಟ್:  ವಾಯವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿರುವ G75 ಲ್ಯಾನ್‌ಝೌ-ಹೈಕೌ ಎಕ್ಸ್‌ಪ್ರೆಸ್‌ವೇನ ಭಾಗವಾಗಿರುವ ವೈಯುವಾನ್-ವುಡು ಎಕ್ಸ್‌ಪ್ರೆಸ್‌ವೇ ವಿಸ್ತರಣೆಯನ್ನು ಚಿತ್ರ ತೋರಿಸುತ್ತದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್  ತಪ್ಪಾಗಿದೆ.

ವೈರಲ್ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಚೀನಾ ಮೂಲದ ಸುದ್ದಿ ವೆಬ್‌ಸೈಟ್ ಕೈಕ್ಸಿನ್ ಗ್ಲೋಬಲ್‌ನಲ್ಲಿ ಅದೇ ಚಿತ್ರವನ್ನು ಒಳಗೊಂಡಿರುವ ಲೇಖನವನ್ನು ನಾವು ಕಂಡುಹಿಡಿದಿದ್ದೇವೆ. ಈ ಲೇಖಾನದಲ್ಲಿನ ಫೋಟೋ ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿ ನೆಲೆಗೊಂಡಿರುವ G75 ಲ್ಯಾನ್‌ಝೌ-ಹೈಕೌ ಎಕ್ಸ್‌ಪ್ರೆಸ್‌ವೇನ ಭಾಗವಾಗಿರುವ ವೈಯುವಾನ್-ವುಡು ಎಕ್ಸ್‌ಪ್ರೆಸ್‌ವೇನ ಒಂದು ವಿಭಾಗವೆಂದು ಉಲ್ಲೇಖಿಸುತ್ತದೆ.

ಚೀನಾ ಸರ್ಕಾರದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಎಕ್ಸ್‌ಪ್ರೆಸ್‌ವೇಯ ಲಾಂಗ್ನಾನ್ ವಿಭಾಗವನ್ನು 2020 ರಲ್ಲಿ ಪ್ರಾಯೋಗಿಕ ಕಾರ್ಯಾಚರಣೆಗಳಿಗಾಗಿ ತೆರೆಯಲಾಗಿದೆ.

ಇದನ್ನು ಗಮನದಲ್ಲಿಟ್ಟುಕೊಂಡು, ನಾವು ಗೂಗಲ್ ಅರ್ಥ್‌ನಲ್ಲಿ ಹುಡುಕಾಟ ನಡೆಸಿದ್ದೇವೆ ಮತ್ತು ಈ ಫೋಟೋ ವೀಯುವಾನ್-ವುಡು ಎಕ್ಸ್‌ಪ್ರೆಸ್‌ವೇಯ ಒಂದು ಭಾಗವನ್ನು ತೋರಿಸುತ್ತದೆ, ನಿರ್ದಿಷ್ಟವಾಗಿ ಗನ್ಸು ಪ್ರಾಂತ್ಯದ ಲಿಯಾಂಘೆಕೌ ಎಂಬ ದೂರದ ಹಳ್ಳಿಯ ಮೂಲಕ ಇದು ಹಾದುಹೋಗುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಚೀನಾದ ಎಕ್ಸ್‌ಪ್ರೆಸ್‌ವೇಯ ಸಂಬಂಧವಿಲ್ಲದ ಚಿತ್ರವನ್ನು ಭಾರತದ ಜಮ್ಮು ರಾಷ್ಟ್ರೀಯ ಹೆದ್ದಾರಿ 44 ರ ಚಿತ್ರದಂತೆ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll