Fake News - Kannada
 

ಗುಜರಾತ್‌ನಲ್ಲಿ ಅಪ್ರಾಪ್ತ ಬುಡಕಟ್ಟು ಬಾಲಕಿಯನ್ನು ಥಳಿಸುವ ವಿಡಿಯೋವನ್ನು ಸುಳ್ಳು ವ್ಯಾಖ್ಯಾನದೊಂದಿಗೆ ಹಂಚಿಕೊಳ್ಳಲಾಗಿದೆ

0

ಜನರ ಗುಂಪೊಂದು ಬಾಲಕಿಗೆ ಥಳಿಸುವ ವಿಡಿಯೋವೊಂದು ’ಉತ್ತರಪ್ರದೇಶದಲ್ಲಿ ಮೇಲ್ಜಾತಿಯವರಿಗೆ ಸೇರಿದ ಬಾವಿಯಿಂದ ನೀರು ತುಂಬಿಸಿಕೊಂಡ ಕಾರಣಕ್ಕೆ ದಲಿತ ಬಾಲಕಿಯ ಮೇಲೆ ಹಲ್ಲೆ’ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

“ಕುಡಿಯುವ ನೀರು ತೆಗೆದುಕೊಂಡ ಕಾರಣಕ್ಕೆ ಈ ರೀತಿಯ ಹಿಂಸೆ ಮಾಡುವ ಅವಿವೇಕಿಗಳನ್ನು ಮಟ್ಟಹಾಕಲು ಈಕೆಯೂ ಒಬ್ಬ ಫೂಲನ್ ದೇವಿ ಆಗಲಾರಳೇ? ಯೋಗಿಯ ರಾಜ್ಯದಲ್ಲಿ ದಲಿತ ಮಹಿಳೆಯೊಬ್ಬಳು ಮೇಲ್ಜಾತಿಯ ಮನೆಯಲ್ಲಿನ ಬಾವಿಯಿಂದ ನೀರು ತೆಗೆದ ಪರಿಣಾಮವಾಗಿ ಕೋಮುವಾದಿಗಳು ಮಾಡಿದ ಅವಸ್ಥೆ ನೋಡಿ” ಎಂದು ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಪ್ರತಿಪಾದಿಸಿರುವುದು ನಿಜವೇ ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಉತ್ತರಪ್ರದೇಶದಲ್ಲಿ ಮೇಲ್ಜಾತಿಯವರಿಗೆ ಸೇರಿದ ಬಾವಿಯಿಂದ ನೀರು ತುಂಬಿಸಿಕೊಂಡ ಕಾರಣಕ್ಕೆ ದಲಿತ ಬಾಲಕಿ ಮೇಲೆ ಹಲ್ಲೆ.

ನಿಜಾಂಶ: ಈ ಘಟನೆಯು ಗುಜರಾತ್ ನಲ್ಲಿ ನಡೆದಿದೆಯೇ ಹೊರತು ಉತ್ತರಪ್ರದೇಶದಲ್ಲಲ್ಲ. ಗುಜರಾತ್ ನ ಛೋಟಾ ಉಡೇಪುರ್ ಜಿಲ್ಲೆಯ ಆದಿವಾಸಿ ಬಾಲಕಿಯು ಅದೇ ಊರಿನ ಯುವಕನೊಂದಿಗೆ ಓಡಿಹೋಗಿದ್ದಳು ಎಂಬ ಕಾರಣಕ್ಕೆ ಆಕೆಯ ಸಂಬಂಧಿಕರು ಅಮಾನವೀಯವಾಗಿ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ ಛೋಟಾ ಉಡೇಪುರ್ ನ ಪೊಲೀಸರು ಘಟನೆಯಲ್ಲಿ ಭಾಗಿಯಾದ ಮೂರು ಜನರ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಹಾಗಾಗಿ ಪೋಸ್ಟ್ ಪ್ರತಿಪಾದಿಸಿರುವುದು ತಪ್ಪಾಗಿದೆ.

ವಿಡಿಯೋದ ಸ್ಕ್ರೀನ್ ಶಾಟ್ ಗಳನ್ನು  ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಹುಡುಕಿದಾಗ ಹಲವಾರು ವರದಿಗಳು ಸಿಕ್ಕಿವೆ. ಅದರಂತೆ ಈ ಘಟನೆಯು ಗುಜರಾತ್ ನಲ್ಲಿ ಸಂಭವಿಸಿದೆಯೇ ಹೊರತು ಉತ್ತರಪ್ರದೇಶದಲ್ಲಲ್ಲ ಎಂದು ತಿಳಿಯುತ್ತದೆ. ಗುಜರಾತ್ ನ ಛೋಟಾ ಉಡೇಪುರ್ ಜಿಲ್ಲೆಯ  ಆದಿವಾಸಿ ಬಾಲಕಿಯು ಅದೇ ಊರಿನ ಯುವಕನೊಂದಿಗೆ ಓಡಿಹೋಗಿದ್ದಳು ಎಂಬ ಕಾರಣಕ್ಕೆ ಆಕೆಯ ಸಂಬಂಧಿಕರು ಅಮಾನವೀಯವಾಗಿ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ನಂತರ ಛೋಟಾ ಉಡೇಪುರ್ ನ ಪೊಲೀಸರು ಘಟನೆಯಲ್ಲಿ ಭಾಗಿಯಾದ ಮೂರು ಜನರ ಮೇಲೆ ಎಫ್.ಐ.ಆರ್ ದಾಖಲಿಸಿದ್ದಾರೆ. ಆಕೆಯ ಸಂಬಂಧಿಕರು ತಮ್ಮ ಕುಟುಂಬಕ್ಕೆ ಅಗೌರವ ತಂದಳು ಎಂಬ ಕಾರಣಕ್ಕೆ ಬಾಲಕಿಯನ್ನು ಹೀನಾಯವಾಗಿ ಸಾರ್ವಜನಿಕವಾಗಿ ಥಳಿಸಿದ್ದಾರೆ ಎಂದು ಈ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಿನಲ್ಲಿ ಅಪ್ರಾಪ್ತ ಬಾಲಕಿ ಹುಡುಗನೊಂದಿಗೆ ಓಡಿಹೋದ ಕಾರಣಕ್ಕೆ ಕ್ರೂರವಾಗಿ ಥಳಿಸಲ್ಪಡುವ ವಿಡಿಯೋವು ದಲಿತ ಬಾಲಕಿ ಮೇಲ್ಜಾತಿಯವರಿಗೆ ಸೇರಿದ ಬಾವಿಯಿಂದ ನೀರು ಸೇದಿದ ಕಾರಣಕ್ಕೆ ಹಲ್ಲೆ ಎಂದು ತಪ್ಪಾಗಿ ಹಂಚಿಕೆಯಾಗಿದೆ.

Share.

About Author

Comments are closed.

scroll