Fake News - Kannada
 

ಈ ಚಿತ್ರದಲ್ಲಿರುವ ಶಿವಲಿಂಗ ಅಯೋಧ್ಯೆಯಲ್ಲಿ ಪತ್ತೆಯಾಗಿಲ್ಲ

0

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಉತ್ಖನನ ನಡೆಸುವಾಗ ಶಿವಲಿಂಗ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶಿವಲಿಂಗವೊಂದರ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ ನಲ್ಲಿ ಪ್ರತಿಪಾದಿಸಿರುವ ಸಂಗತಿಯ ಸತ್ಯಾಂಶವನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಉತ್ಖನನ ನಡೆಸುವಾಗ ಶಿವಲಿಂಗ ಪತ್ತೆಯಾಗಿದೆ ಎಂಬ ಚಿತ್ರ.

ನಿಜಾಂಶ: ಅಯೋಧ್ಯ ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ಉತ್ಖನನ ನಡೆಸಿದಾಗ ಪ್ರಾಚೀನ ದೇವಾಲಯದ ಕಂಬಗಳು, ದೇವತೆಗಳ ವಿಗ್ರಹಗಳು ಮತ್ತು ಶಿವಲಿಂಗಗಳ ಅವಶೇಷಗಳು ಪತ್ತೆಯಾಗಿವೆ. ಆದರೆ ಚಿತ್ರದಲ್ಲಿನ ಶಿವಲಿಂಗ ಆ ಉತ್ಖನನದ ಸಮಯದಲ್ಲಿ ಕಂಡುಬಂದದ್ದಲ್ಲ. ಚಿತ್ರದಲ್ಲಿರುವ ಶಿವಲಿಂಗವು ಫರೂಖಾಬಾದ್ (ಉತ್ತರ ಪ್ರದೇಶ)ನ ದೇವಾಲಯಕ್ಕೆ ಸಂಬಂಧಿಸಿದೆ ಮತ್ತು ಇದರ ಬಗೆಗಿನ ಮಾಹಿತಿಯನ್ನು 2016ರಲ್ಲಿ ಪ್ರಕಟವಾದ ಲೇಖನದಲ್ಲಿ ಕಾಣಬಹುದು. ಆದ್ದರಿಂದ, ಪೋಸ್ಟ್‌ ನಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿ ದಿಕ್ಕುತಪ್ಪಿಸುವಂತದ್ದು.

ಪೋಸ್ಟ್‌ ನಲ್ಲಿರುವ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಇಂಜಿನ್‌ ಮೂಲಕ ಪರಿಶೀಲಿಸಿದಾಗ, ಅದು 2016 ರಲ್ಲಿ ಪ್ರಕಟವಾದ ‘ಅಮರ್ ಉಜಲಾ’ ಲೇಖನದಲ್ಲಿ ಕಂಡುಬಂದಿದೆ. ಈ ಲೇಖನದ ಪ್ರಕಾರ, ಚಿತ್ರದಲ್ಲಿರುವ ಶಿವಲಿಂಗದ ಚಿತ್ರವು  ಫಾರೂಖಾಬಾದ್ (ಉತ್ತರ ಪ್ರದೇಶ) ದೇವಾಲಯಕ್ಕೆ ಸಂಬಂಧಿಸಿದ್ದು.

ಅಯೋಧ್ಯಯ ರಾಮ ಮಂದಿರ ನಿರ್ಮಾಣ ಸ್ಥಳದಲ್ಲಿ ಇತ್ತೀಚೆಗೆ ನಡೆದ ಉತ್ಖನನದ ಸಂದರ್ಭದಲ್ಲಿ ಪ್ರಾಚೀನ ದೇವಾಲಯಗಳ ಕಂಬಗಳು, ದೇವತೆಗಳ ವಿಗ್ರಹಗಳು ಮತ್ತು ಶಿವಲಿಂಗಗಳ ಅವಶೇಷಗಳು ಕಂಡುಬಂದಿವೆ ಎಂಬುದು ನಿಜ. ಈ ಬಗ್ಗೆ ವಿವಿಧ ಪತ್ರಿಕೆಗಳು ಪ್ರಕಟಿಸಿದ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಚಿತ್ರದಲ್ಲಿರುವ ಶಿವಲಿಂಗವನ್ನು, ರಾಮ ಮಂದಿರ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲಿ ಇತ್ತೀಚೆಗೆ ನಡೆದ ಉತ್ಖನನದ ಸಮಯದಲ್ಲಿ ಸಿಕ್ಕಿದ್ದಲ್ಲ.

Share.

About Author

Comments are closed.

scroll