Fake News - Kannada
 

ಟೊಕಿಯೋ 2020ರ ಒಲಂಪಿಕ್ಸ್‌ಗಾಗಿ ಸಿದ್ಧಪಡಿಸಿದ ಪಟಾಕಿ ಪ್ರದರ್ಶನವೆಂದು ಸಂಬಂಧವಿಲ್ಲದ ಡಿಜಿಟಲ್ ಸಿಮ್ಯುಲೇಶನ್ ವಿಡಿಯೋ ಹಂಚಿಕೊಳ್ಳಲಾಗಿದೆ

0

ಜಪಾನ್‌ ನ ಮೌಂಟ್ ಫ್ಯುಜಿ ಬಳಿ 2020 ರ ಒಲಿಂಪಿಕ್ ಕ್ಕ್ರೀಡಾ ಕೂಟಕ್ಕಾಗಿ ಸಿದ್ಧಪಡಿಸಿದ ಪಟಾಕಿ ಪ್ರದರ್ಶನವನ್ನು ಜಪಾನ್  ಆಯೋಜಿಸಿದೆ ಎಂದು ಪಟಾಕಿ ಸಿಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 2020 ರ ‘ಟೋಕಿಯೋ 2020’ ಒಲಿಂಪಿಕ್ಸ್ ಕ್ರೀಡಾಕೂಟ ‘ಟೋಕಿಯೋದಲ್ಲಿ 24 ಜುಲೈ 2020 ರಂದು  ಪ್ರಾರಂಭವಾಗಬೇಕಿತ್ತು. COVID-19 ಸಾಂಕ್ರಾಮಿದ ಕಾರಣ ಅದನ್ನು 2021 ಕ್ಕೆ ಮುಂದೂಡಲಾಗಿದೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ನೋಡೋಣ ಬನ್ನಿ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಜಪಾನ್‌ ನ ಮೌಂಟ್ ಫ್ಯುಜಿ ಬಳಿ 2020 ರ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಸಿದ್ಧಪಡಿಸಿದ ಪಟಾಕಿ ಪ್ರದರ್ಶನದ ವಿಡಿಯೋ.

ನಿಜಾಂಶ: ವಿಡಿಯೋದಲ್ಲಿರುವ ಪಟಾಕಿ ಸಿಡಿಸುವ ದೃಷ್ಯಗಳನ್ನು ‘hiramu55bocabaca’ ಎಂಬ ಯೂಟ್ಯೂಬ್ ಚಾನೆಲ್ ಬಳಕೆದಾರ ತಂತ್ರಜ್ಞಾನದ ಮೂಲಕ ಸಿಮ್ಯುಲೇಟ್ ಮಾಡಿರುವಂತದ್ದು. ಅವರು ‘FWsim’ ಫೈರ್ ವರ್ಕ್ಸ್ ಸಿಮ್ಯುಲೇಟರ್ ವೆಬ್‌ಸೈಟ್‌ನಲ್ಲಿ ಸರಣಿ ಪಟಾಕಿ ಸಿಡಿಸುವ ವಿಡಿಯೊ ತಯಾರಿಸಿ 2015ರಲ್ಲಿ ತಮ್ಮ ಯೂಟ್ಯೂಬ್‌ ಚಾನೆಲ್ ಗೆ ಅಪ್‌ ಲೋಡ್ ಮಾಡಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ವಿಡಿಯೋದ ಸ್ಕ್ರೀನ್‌ ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ ಅದೇ ರೀತಿಯ ವಿಡಿಯೋಗಳನ್ನು ‘hiramu55bocabaca’ ಎಂಬ ಯೂಟ್ಯೂಬ್ ಚಾನೆಲ್‌ ನಲ್ಲಿ 2015ರ ಡಿಸೆಂಬರ್ 1 ರಂದು ಪೋಸ್ಟ್ ಮಾಡಿರುವದು ಕಂಡುಬಂದಿದೆ. ಅದಕ್ಕೆ ‘FWsim Mount Fuji synchronized fireworks show2’ ಎಂಬ ಶೀರ್ಷಿಕೆ ನೀಡಲಾಗಿದೆ. ‘FWsim’ಎಂಬುದು ಪಟಾಕಿ ಸಿಡಿಸುವಿಕೆಯನ್ನು ಅದ್ಭುತವಾಗಿ ಜೋಡಿಸಿ ವಿಡಿಯೋಗಳನ್ನು ಸೃಷ್ಟಿಸುವ ಜಾಲತಾಣವಾಗಿದೆ. ಇದೇ ರೀತಿಯ ಶೀರ್ಷಿಕೆಯೊಂದಿಗೆ ಪಟಾಕಿ ಸಿಡಿಸುವ ವಿಡಿಯೋಗಳು ‘gfycat’ ಎಂಬ ವೆಬ್‌ ಸೈಟ್‌ ನಲ್ಲಿಯೂ ಸಹ ಕಂಡುಬಂದಿವೆ. ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ‘hiramu55bocabaca’ ಚಾನೆಲ್‌ಗೆ ಕ್ರೆಡಿಟ್ ಕೊಟ್ಟು ಆ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

‘ಟೊಕಿಯೋ 2020’ ಒಲಂಪಿಕ್ಸ್ ಕ್ರೀಡಾಕೂಟವು 2020ರ ಜುಲೈ 24 ರಿಂದ ಪ್ರಾರಂಭವಾಗಬೇಕಿತ್ತು. ಆದರೆ ಕೋವಿಡ್ -19 ಸಾಂಕ್ರಾಮಿಕದ ಕಾರಣದಿಂದ ಕ್ರೀಡಾಕೂಟವನ್ನು 2021ಕ್ಕೆ ಮುಂದೂಡಲಾಗಿದೆ. ಕ್ರೀಡಾಕೂಟ ಆರಂಭವಾಗಬೇಕಿದ್ದ 2020ರ ಜುಲೈ 24ರಂದು ಆ ದಿನದ ನೆನೆಪಿಗಾಗಿ ಜಪಾನ್‌ ನ ಹಲವು ನಗರಗಳಲ್ಲಿ ಪಟಾಕಿಗಳನ್ನು ಸಿಡಿಸುವ ಪ್ರದರ್ಶನ ಏರ್ಪಡಿಸಲಾಗಿತ್ತು. ಅದಕ್ಕೆ ಸಂಬಂಧಿಸಿದ ಲೇಖನ ಮತ್ತು ವಿಡಿಯೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದಾಗಿದೆ.

ಒಟ್ಟಿನಲ್ಲಿ, ಟೊಕಿಯೋ 2020ರ ಒಲಂಪಿಕ್ಸ್‌ ಗಾಗಿ ಸಿದ್ದಪಡಿಸಿದ ಪಟಾಕಿ ಪ್ರದರ್ಶನವೆಂದು ಸಂಬಂಧವಿಲ್ಲದ ಸಿಮ್ಯುಲೇಟೆಡ್ ವಿಡಿಯೋ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll