ಬುರ್ಜ್ ಖಲೀಫ ಕಟ್ಟಡದಲ್ಲಿ ಇಸ್ರೇಲ್ ಬಾವುಟದ ಚಿತ್ರದ ಬೆಳಕಿನ ಪ್ರದರ್ಶನ ಕಾಣುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ಸಂಬಂಧವನ್ನು ಸೂಚಿಸುತ್ತದೆ ಎಂದು ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.
ಪ್ರತಿಪಾದನೆ: ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ಒಪ್ಪಂದದ ಹಿನ್ನಲೆಯಲ್ಲಿ ಬುರ್ಜ್ ಖಲೀಫ ಕಟ್ಟಡದ ಮೇಲೆ ಇಸ್ರೇಲ್ ಬಾವುಟದ ಬೆಳಕಿನ ಪ್ರದರ್ಶನ ನಡೆದಿದೆ.
ನಿಜಾಂಶ: ಈ ಕುರಿತು ಯಾವುದೇ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ. ಅಲ್ಲದೇ ಬುರ್ಜ್ ಖಲೀಫದ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿಯೂ ಇಸ್ರೇಲ್ ಬಾವುಟದ ಬೆಳಕಿನ ಪ್ರದರ್ಶನ ಅದರ ಕಟ್ಟಡದ ಮೇಲೆ ನಡೆದ ವಿಡಿಯೋ ಅಥವ ಫೋಟೋವನ್ನು ಪೋಸ್ಟ್ ಮಾಡಿಲ್ಲ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.
ಪ್ರತಿ ಬಾರಿಯೂ ಬುರ್ಜ್ ಖಲೀಫ ಕಟ್ಟಡದಲ್ಲಿ ಯಾವುದೇ ಚಿತ್ರದ ಬೆಳಕಿನ ಪ್ರದರ್ಶನಗಳು ನಡೆದಾಗ ಅದನ್ನು ಅದರ ಅಧಿಕೃತ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ನಾವು ಈ ಇಸ್ರೇಲ್ ಬಾವುಟದ ಚಿತ್ರದ ಕೀವರ್ಡ್ ಬಳಸಿ ಆ ಸಾಮಾಜಿಕ ಮಾಧ್ಯಮಗಳ ಅಕೌಂಟ್ ಗಳಲ್ಲಿ ಹುಡುಕಿದಾಗ ಯಾವುದೇ ಚಿತ್ರ ಅಥವಾ ವಿಡಿಯೋ ಕಂಡುಬಂದಿಲ್ಲ. ಈ ಕುರಿತು ಯಾವುದೇ ಸುದ್ದಿ ವರದಿಗಳು ಕೂಡ ಲಭ್ಯವಿಲ್ಲ. ಭಾರತ ಮತ್ತು ಪಾಕಿಸ್ತಾನದ ಸ್ವಂತಂತ್ರ ದಿನಾಚರಣೆಗಳಂದು ಬುರ್ಜ್ ಖಲೀಫದಲ್ಲಿ ಭಾರತದ ತ್ರಿವರ್ಣ ಧ್ವಜ ಮತ್ತು ಪಾಕಿಸ್ತಾನದ ಬಾವುಟದ ಬೆಳಕಿನ ಪ್ರದರ್ಶನ ನಡೆದಿದೆ. ಹಾಗಾಗಿ ಇಸ್ರೇಲ್ ಬಾವುಟದ ಚಿತ್ರ ಫೋಟೊಶಾಪ್ ಮಾಡಿರುವುದು ಎಂದು ಹೇಳಬಹುದು.
ಯಾಂಡೆಕ್ಸ್ ನಲ್ಲಿ ಚಿತ್ರವನ್ನು ರಿವರ್ಸ್ ಸರ್ಚ್ ಮೂಲಕ ಹುಡುಕಿದಾಗ ಪೋಸ್ಟ್ ನಲ್ಲಿ ಹಂಚಲಾಗಿರುವ ಬುರ್ಜ್ ಖಲೀಫದ ಚಿತ್ರ ಕಂಡುಬಂದಿದೆ. ಆದರೆ ಅದರಲ್ಲಿ ಇಸ್ರೇಲಿ ಬಾವುಟ ಇಲ್ಲ. ಅದೇ ಚಿತ್ರವನ್ನು ಬಳಸಿ ಫೋಟೊಶಾಪ್ ನಂತಹ ಆಪ್ ಬಳಸಿ ಇಸ್ರೆಲ್ ಬಾವುಟವನ್ನು ಸೇರಿಸಲಾಗಿದೆ.
13 ಆಗಸ್ಟ್ 2020 ರಂದು ಯುಎಇ-ಇಸ್ರೇಲ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಪೋಸ್ಟ್ ಗಳು ಹಂಚಿಕೆಯಾಗುತ್ತಿವೆ.
ಒಟ್ಟಿನಲ್ಲಿ, ಎಡಿಟ್ ಮಾಡಲಾದ ಚಿತ್ರವನ್ನು ಬುರ್ಜ್ ಖಲೀಫದಲ್ಲಿ ಇಸ್ರೇಲ್ ಬಾವುಟದ ಬೆಳಕಿನ ಪ್ರದರ್ಶನ ಎಂದು ಹಂಚಿಕೊಳ್ಳಲಾಗಿದೆ.