ಗಾಝಾ ನಗರದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ತೀನಿ ಮಗುವಿನ ಚಿತ್ರವಂದು ಹೇಳಿಕೊಳ್ಳುವ ಚಿತ್ರವೊಂದನ್ನು ಸಾಮಾಜಿಕ ಜಾಲತಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರದಲ್ಲಿರುವ ಪುಟ್ಟ ಹೆಣ್ಣು ಮಗುವಿನ ಮುಖವು ಕೆಂಪು ಕಲೆಗಳಿಂದ ತುಂಬಿದೆ. ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಸಂಘರ್ಷದ ಹಿನ್ನೆಲೆಯಲ್ಲಿ, ಈ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದಲ್ಲಿ ಚಿತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಗಾಝಾ ನಗರದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಫ್ಯಾಲೆಸ್ತೀನಿಯನ್ ಹೆಣ್ಣು ಮಗುವಿನ ಚಿತ್ರ.
ಸತ್ಯಾಂಶ: ಪೋಸ್ಟ್‌ನಲ್ಲಿರುವ ಫೋಟೋ ಅಮೆರಿಕದ ರಾಕ್‌ಫೋರ್ಡ್ ನಗರದ ‘ಬಿಯಾಂಕಾ’ ಎಂಬ ಪುಟ್ಟ ಹುಡುಗಿಯ ಚಿತ್ರವಾಗಿದೆ. ಬಿಯಾಂಕಾ ಮೂರು ತಿಂಗಳ ಮಗುವಾಗಿದ್ದಾಗ ಪೋರ್ಟ್ ವೈನ್ ಸ್ಟ್ರೈನ್ ಮತ್ತು ಸ್ಟರ್ಜ್-ವೆಬರ್ ಸಿಂಡ್ರೋಮ್ ಎಂಬ ಕಾಯಿಲೆಯಲ್ಲಿ ಬಳಲುತ್ತಿದ್ದದ್ದನ್ನು ಗುರುತಿಸಲಾಯಿತು. ಬಿಯಾಂಕಾ ಪೋಷಕರು ಮಗುವಿನ ಮೇಲೆ ಪಲ್ಸ್ ಡೈ ಲೇಸರ್ ಚಿಕಿತ್ಸೆಯನ್ನು ಪ್ರಾರಂಭಿಸಿದ್ದರು. ಇದು ಮುಖದ ಅರ್ಧ ಭಾಗದಷ್ಟು ಇರುವ ಕಲೆ ಗುಣವಾತ್ತದೆ ಎಂದು ಆಶಿಸಿದರು. ಈ ಲೇಸರ್ ಚಿಕಿತ್ಸೆಯು ಮೊದಲ ಎರಡು ವಾರಗಳಲ್ಲಿ ಬಿಯಾಂಕಾ ಮುಖದಲ್ಲಿ ಕೆಂಪು ಕಲೆಗಳನ್ನು ಉಂಟುಮಾಡಿದೆ, ಅದು ‘ಸುಟ್ಟ ಗಾಯದಂತೆ’ಕಾಣುತ್ತದೆ. ಈ ಚಿತ್ರಕ್ಕೂ, ಇಸ್ರೇಲ್ ಮತ್ತು ಫ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಇರುವ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾರಿದಾಗ, ಇದೇ ರೀತಿಯ ಚಿತ್ರವು ಏಪ್ರಿಲ್ 2019 ರಲ್ಲಿ ‘ಕ್ಯಾಟರ್ಸ್’ ಸುದ್ದಿ ಸಂಸ್ಥೆ ಪ್ರಕಟಿಸಿದ ಲೇಖನದಲ್ಲಿ ಪ್ರಕಟಿಸಲಾಗಿದೆ. ಈ ಲೇಖನದಲ್ಲಿ ಈ ಹೆಣ್ಣು ಮಗುವು ಅಮೆರಿಕದ ರಾಕ್‌ಫೋರ್ಡ್ ನಗರದ ಪುಟ್ಟ ಹುಡುಗಿ ಬಿಯಾಂಕಾ ಎಂದು ಉಲ್ಲೇಖಿಸಲಾಗಿದೆ. ಆ ಲೇಖನದ ಪ್ರಕಾರ, ಬಿಯಾಂಕಾಗೆ ಮೂರು ತಿಂಗಳ ಮಗುವಾಗಿದ್ದಾಗ ಪೋರ್ಟ್ ವೈನ್ ಸ್ಟ್ರೈನ್ ಮತ್ತು ಸ್ಟರ್ಜ್-ವೆಬರ್ ಸಿಂಡ್ರೋಮ್ ಖಾಯಿಲೆ ಇದೆ ಎಂದು ಗುರುತಿಸಲಾಯಿತು. ಮಗುವಿನ ಮುಖದ ಅರ್ಧದಷ್ಟು ಭಾಗವನ್ನು ಒಳಗೊಂಡಿರುವ ಕಳೆ ಸ್ಟರ್ಜ್-ವೆಬರ್ ಸಿಂಡ್ರೋಮ್ ಕಾರಣ. ಇದರಿಂದ ಖಾಯಿಲೆ ಬೀಳುವುದು, ಗ್ಲುಕೋಮಾ ಮತ್ತು ಬೆಳವಣಿಗೆಯ ಕುಂಠಿತವಾಗುತ್ತದೆ.
ಮಗುವಿನ ಮುಖದ ಅರ್ಧದಷ್ಟು ಇರುವ ಕಲೆಗಳನ್ನು ಗುಣವಾಗುತ್ತದೆ ಎಂದು ಆಶಿಸಿ, ಬಿಯಾಂಕಾ ಪೋಷಕರಾದ ಡೀನಾ ಲ್ಯಾಟಿನೋ ಮತ್ತು ಬ್ರಾಂಡನ್ ಮಗುವಿನ ಮೇಲೆ ಪಲ್ಸ್ ಡೈ ಲೇಸರ್ ಚಿಕಿತ್ಸೆಯನ್ನು ಪ್ರಾರಂಭಿಸಿದ್ದಾರೆ. ಈ ಲೇಸರ್ ಚಿಕಿತ್ಸೆಯ ಆರಂಭಿಕ ಹಂತಗಳು ಬಿಯಾಂಕಾ ಮುಖದಲ್ಲಿ ಕೆಂಪು ಕಲೆಗಳನ್ನು ಉಂಟುಮಾಡಿದೆ. ಡೀನಾ ಅವರ ಮಗುವಿನ ಮುಖವನ್ನು ಟೀಕಿಸಿ ಅಪರಿಚಿತರಿಂದ ಹಲವಾರು ನಿಂದನೀಯ ಮಾತುಗಳನ್ನು ಎದುರಿಸಿದ್ದಾರೆಂದು ವರದಿಯಾಗಿದೆ. ಅಪರಿಚಿತರಿಂದ ನಿಂದನೀಯ ಮಾತುಗಳನ್ನು ಎದುರಿಸಲು, ಡೀನಾ ತನ್ನ ಮಗುವಾದ ಬಿಯಾಂಕಾಗೆ ‘ಪೋಲ್ಕಾ ಡಾಟ್ ಕ್ಯೂಟಿ’ಎಂದು ಹೆಸರನ್ನು ಇಟ್ಟಿದ್ದಾರೆ. ಆದಾಗ್ಯೂ, ಚಿಕಿತ್ಸೆಯ ಎರಡು ವಾರಗಳ ನಂತರ ಬಿಯಾಂಕಾ ಮುಖದ ಈ ಕೆಂಪು ಕಲೆಗಳು ಮಾಯವಾಗಿದೆ.
ಬಿಯಾಂಕಾ ಮುಖದ ಮೇಲಿನ ಚಿಕಿತ್ಸೆಯ ಬಗೆಗಿನ ವರದಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಎಲ್ಲಾ ಸಾಕ್ಷ್ಯಗಳಿಂದ, ಪೋಸ್ಟ್‌ನಲ್ಲಿ ಹಂಚಲಾದ ಚಿತ್ರವು ಪೋರ್ಟ್ ವೈನ್ ಸ್ಟ್ರೈನ್ ಮತ್ತು ಸ್ಟರ್ಜ್-ವೆಬರ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಅಮೆರಿಕದ ಹೆಣ್ಣು ಮಗುವಿಗೆ ಸಂಬಂಧಿಸಿದೆ ಎಂದು ತೀರ್ಮಾನಿಸಬಹುದು.
‘ಬಿಬಿಸಿ ನ್ಯೂಸ್’ ಇತ್ತೀಚೆಗೆ ಪ್ರಕಟಿಸಿದ ಲೇಖನವೊಂದರ ಪ್ರಕಾರ, ಗಾಝಾದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 63 ಮಕ್ಕಳು ಸೇರಿದಂತೆ ಕನಿಷ್ಠ 219 ಜನರು ಸಾವನ್ನಪ್ಪಿದ್ದಾರೆ. ಆದರೆ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಚಿತ್ರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಫ್ಯಾಲೆಸ್ತೀನಿ ಹೆಣ್ಣುಮಗುವಿನ ಚಿತ್ರವೆಂದು ಅಮೆರಿಕದ ಮಗುವಿನ ಸಂಬಂಧವಿಲ್ಲದ ಹಳೆಯ ಫೋಟೋವನ್ನು ಹಂಚಿಕೊಳ್ಳಲಾಗಿದೆ.