ಪ್ರಧಾನಿ ಮೋದಿ ಅವರು ಗಿಟಾರ್ ನುಡಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಲೇಖನದ ಮೂಲಕ ಆ ಫೋಟೋದ ಸತ್ಯವನ್ನು ನೋಡೋಣ.
ಕ್ಲೇಮ್: ಮೋದಿ ಗಿಟಾರ್ ನುಡಿಸುತ್ತಿರುವ ಫೋಟೋ.
ಫ್ಯಾಕ್ಟ್ : ಇದು ನಿಜವಾದ ಫೋಟೋ ಅಲ್ಲ. ಡಿಜಿಟಲ್ ಸೃಷ್ಟಿಕರ್ತ ಇದನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ರಚಿಸಿದ್ದಾರೆ. ಅವರು ಫೋಟೋವನ್ನು ಹಂಚಿಕೊಂಡಿರುವ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಈ ಸೃಷ್ಟಿಕರ್ತನ ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ಫೋಟೋ ಈ ಹಿಂದೆ ವೈರಲ್ ಆಗಿತ್ತು. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪು.
ವೈರಲ್ ಫೋಟೋಗಾಗಿ ರಿವರ್ಸ್ ಇಮೇಜ್ ಸರ್ಚ್ ಮಾಡುವಾಗ, ಶಹೀದ್ ಎಂಬ ಡಿಜಿಟಲ್ ಸೃಷ್ಟಿಕರ್ತನ ಇನ್ಸ್ಟಾಗ್ರಾಮ್ ಪುಟದಲ್ಲಿ ಅದೇ ಫೋಟೋವನ್ನು ಕಂಡುಕೊಂಡಿದ್ದೇವೆ. ಫೋಟೋ ಶೇರ್ ಮಾಡಿರುವ ಪೋಸ್ಟ್ ನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಈ ಫೋಟೋವನ್ನು ರಚಿಸಿರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಬಯೋದಲ್ಲಿ ಸ್ವತಃ ‘‘AI Enthusiast’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಈ ಇನ್‌ಸ್ಟಾಗ್ರಾಮ್ ಪುಟವು ಇದೇ ರೀತಿಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ರಚಿಸಿದ ಅನೇಕ ಸೆಲೆಬ್ರಿಟಿಗಳ ಫೋಟೋಗಳನ್ನು ಸಹ ಹೊಂದಿದೆ. ಮೊನ್ನೆಯಷ್ಟೇ ಈ ಖಾತೆಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಿಂದ ಸೃಷ್ಟಿಸಿದ ಮೋದಿಯವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ನಾವು ವಿವರಣೆಗಾಗಿ ಅವರನ್ನು ಸಂಪರ್ಕಿಸಿದಾಗ ಅವರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚಿನ ದಿನಗಳಲ್ಲಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ರಚಿಸಲಾದ ಫೋಟೋಗಳು ನೈಜ ಫೋಟೋಗಳಂತೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲ್ಪಡುತ್ತವೆ. ಅಂತಹ ಫೋಟೋಗಳ ಬಗ್ಗೆ FACTLY ಲೇಖನವನ್ನು ಇಲ್ಲಿ ನೋಡಬಹುದು.
ಅಂತಿಮವಾಗಿ, ಮೋದಿ ಗಿಟಾರ್ ನುಡಿಸುತ್ತಿರುವ ಈ ಫೋಟೋ ನಿಜವಲ್ಲ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನಿಂದ ರಚಿಸಿದ್ದು.