Fake News - Kannada
 

ಅಸೆಂಬ್ಲಿ ಚುನಾವಣೆಗೂ ಮುನ್ನವೇ ಸ್ಮೃತಿ ಇರಾನಿ ಬೆಂಗಾವಲು ವಾಹನಕ್ಕೆ ತಡೆ ಎಂದು 2020ರ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

0

ಉತ್ತರ ಪ್ರದೇಶದಲ್ಲಿ ಸ್ಮೃತಿ ಇರಾನಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ ಎಂಬ ವ್ಯಂಗ್ಯ ವಿವರಣೆಯೊಂದಿಗೆ ಜನರ ಗುಂಪೊಂದು ಸ್ಮೃತಿ ಇರಾನಿ ಅವರ ಬೆಂಗಾವಲು ವಾಹನವನ್ನು ತಡೆದಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನವೇ ತಡೆಯಲಾಗಿದೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಅಸೆಂಬ್ಲಿ ಚುನಾವಣೆಗೆ ಮುನ್ನ ಯುಪಿಯಲ್ಲಿ ಸ್ಮೃತಿ ಇರಾನಿ ಅವರ ಬೆಂಗಾವಲು ವಾಹನವನ್ನು ಜನರು ತಡೆಯುವ ಇತ್ತೀಚಿನ ವೀಡಿಯೊ.

ನಿಜಾಂಶ: ಈ ಘಟನೆಯು 2020 ರಲ್ಲಿ ನಡೆದಿದೆ. ಹತ್ರಾಸ್ ಅತ್ಯಾಚಾರ ಘಟನೆಯ ವೇಳೆ ಪ್ರತಿಭಟಿಸಿದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ವಾರಣಾಸಿಯಲ್ಲಿ ಸ್ಮೃತಿ ಇರಾನಿ ಅವರ ಬೆಂಗಾವಲು ವಾಹನವನ್ನು ತಡೆದರು ಎಂದು ಹಲವಾರು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಹಾಗಾಗಿ ಈ ವೀಡಿಯೊ ಇತ್ತೀಚಿನದಲ್ಲ ಎಂದು ಖಚಿತವಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯು ತಪ್ಪಾಗಿದೆ.

ವಿಡಿಯೊದ ಸ್ಕ್ರೀನ್‌ಶಾಟ್ ತೆಗೆದು ಗೂಗಲ್ ರಿವರ್ಸ್‌ ಇಮೇಜ್ ಸರ್ಚ್ ಮಾಡಲಾಗಿದ್ದು ವೈರಲ್ ವಿಡಿಯೊವನ್ನ ಹೋಲುವ ಹಲವು ವಿಡಿಯೊಗಳು ಲಭ್ಯವಾಗಿವೆ. ಅವು 2020ರಲ್ಲಿ ಅಪ್‌ಲೋಡ್ ಮಾಡಲಾಗಿದ್ದು ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಇತ್ತಿಚೆಗೆ ನಡೆದ ಘಟನೆಯದಲ್ಲ.

ಈ ಘಟನೆಯು ಅಕ್ಟೋಬರ್ 2020 ರಲ್ಲಿ ಸಂಭವಿಸಿದಾಗ, ಇದನ್ನು ಅನೇಕ ಸುದ್ದಿ ಸಂಸ್ಥೆಗಳು ವ್ಯಾಪಕವಾಗಿ ವರದಿ ಮಾಡಿದೆ. ಆ ಕೆಲವು ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು. ಆ ವರದಿಗಳ ಪ್ರಕಾರ, ಹತ್ರಾಸ್ ಅತ್ಯಾಚಾರ ಘಟನೆಯ ವಿರುದ್ಧ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರ ಗುಂಪು ವಾರಣಾಸಿಯಲ್ಲಿ ಸ್ಮೃತಿ ಇರಾನಿ ಅವರ ಬೆಂಗಾವಲು ವಾಹನವನ್ನು ತಡೆದರು. ಘಟನೆಯ ಫೋಟೋಗಳನ್ನು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, 2020 ರ ಹಳೆಯ ವೀಡಿಯೊವನ್ನು ಉತ್ತರ ಪ್ರದೇಶದಲ್ಲಿ ಅಸೆಂಬ್ಲಿ ಚುನಾವಣೆಗೆ ಮುನ್ನ ಯುಪಿಯಲ್ಲಿ ಸ್ಮೃತಿ ಇರಾನಿ ಅವರ ಬೆಂಗಾವಲು ವಾಹನವನ್ನು ಜನರು ತಡೆಯುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll