Fake News - Kannada
 

ಪ್ರಧಾನಿ ಮೋದಿಯವರ ಮುಖವನ್ನು ಚಿತ್ರಿಸುವ ಮರಗಳನ್ನು ಹೊಂದಿರುವ ಚಿತ್ರವು AI- ರಚಿತವಾಗಿದೆ

0

ಸಣ್ಣ ದ್ವೀಪದ ನಡುವೆ ಸೂರ್ಯಾಸ್ತದ ಸಮಯದಲ್ಲಿ ಆಕಾಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಖವನ್ನು ತೆಂಗಿನ ಮರಗಳ ನಡುವೆ ತೋರಿಸುವ ಚಿತ್ರವನ್ನು ಗೋಕರ್ಣದ ಬಳಿ ಫ್ರೆಂಚ್ ಪ್ರವಾಸಿಗರು ಕ್ಲಿಕ್ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾದರೆ  ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.

ಕ್ಲೇಮ್ : ಗೋಕರ್ಣದಲ್ಲಿ ಫ್ರೆಂಚ್ ಫೋಟೋಗ್ರಾಫರ್ ಒಬ್ಬರು ಪ್ರಧಾನಿ ಮೋದಿಯವರ ಮುಖವನ್ನು ಹೋಲುವ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ.

ಫ್ಯಾಕ್ಟ್ : ಮಾಧವ್ ಕೊಹ್ಲಿ ಎಂಬ ಕಲಾವಿದರಿಂದ AI-ಚಾಲಿತ ಸಾಧನಗಳನ್ನು ಬಳಸಿ ಚಿತ್ರವನ್ನು ಮಾಡಲಾಗಿದೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋದ ಹಿಮ್ಮುಖ ಚಿತ್ರ ಹುಡುಕಾಟದಲ್ಲಿ, ಅದೇ ಚಿತ್ರದ ಕುರಿತು ಮಿಂಟ್ ಮತ್ತು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ಲೇಖನಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಚಿತ್ರವನ್ನು ಮಾಧವ್ ಕೊಹ್ಲಿ ಅವರು AI ಪರಿಕರಗಳನ್ನು ಬಳಸಿ ರಚಿಸಿದ್ದಾರೆ ಮತ್ತು ಇದನ್ನು ‘X’ ನಲ್ಲಿ ಹಂಚಿಕೊಳ್ಳಲಾಗಿದೆ.

ಮೇಲಿನ ಮಾಹಿತಿಯನ್ನು ಆಧರಿಸಿದ ನಂತರದ ಇದು ನಮ್ಮನ್ನು ಮಾಧವ್ ಕೊಹ್ಲಿಯ ‘X’ ಪುಟವನ್ನು ತೋರಿಸಿತು.  ಅಲ್ಲಿ ಚಿತ್ರವು ‘ಡು ಯು ಸೀ ಹಿಮ್ ಟೂ? ನೀವೂ ಅವರನ್ನು ಕಂಡಿರಾ? ‘ ಎಂಬ ಶೀರ್ಷಿಕೆಯೊಂದಿಗೆ ಕಂಡುಬಂದಿದೆ, ಅಲ್ಲದೆ, ಚಿತ್ರವನ್ನು  AI ಪ್ಲಾಟ್‌ಫಾರ್ಮ್ ಅನ್ನು ಬಳಸಿ ರಚಿಸಲಾಗಿದೆ ಎಂದು ಕಲಾವಿದರು ಕಾಮೆಂಟ್‌ಗಳಲ್ಲಿ ಉಲ್ಲೇಖಿಸಿದ್ದಾರೆ.

ಪುಟದಲ್ಲಿ ಪ್ರಕಟಿಸಲಾದ  AI- ರಚಿತ ಚಿತ್ರಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರ ಮುಖವನ್ನು ಚಿತ್ರಿಸುವ ಮರಗಳನ್ನು ಹೊಂದಿರುವ ಚಿತ್ರವು AI- ರಚಿತವಾಗಿದೆ.

Share.

Comments are closed.

scroll