ನೈಸ್ ದಾಳಿಕೋರನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ನೈಸ್ ದಾಳಿಕೋರನನ್ನು ಪೊಲೀಸರು ಬಂಧಿಸುವ ವಿಡಿಯೋ.
ನಿಜಾಂಶ: ಈ ವಿಡಿಯೋವು ಫ್ರಾನ್ಸ್‌ನ ಗ್ರೆನೋಬಲ್‌ನಲ್ಲಿ ನಡೆದ 2019 ರ ಘಟನೆಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಚಾಕುಗಳನ್ನು ಹೊದಿರುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೀಡಿಯೊಗೂ ಇತ್ತೀಚೆಗೆ ಫ್ರಾನ್ಸ್‌ನ ನೈಸ್‌ನಲ್ಲಿ ನಡೆದ ಚಾಕು ದಾಳಿಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿನ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ, 2019ರ ಸುದ್ದಿ ಲೇಖನವೊಂದು ದೊರೆತಿದ್ದು, ಸುದ್ದಿಯಲ್ಲಿ ಇದೇ ರೀತಿಯ ವೀಡಿಯೊವನ್ನು ತೋರಿಸಲಾಗಿದೆ. ಸುದ್ದಿ ಲೇಖನದ ಪ್ರಕಾರ, ಎರಡೂ ಕೈಗಳಲ್ಲಿ ಚಾಕುಗಳನ್ನು ಹೊಂದಿದ್ದ ವ್ಯಕ್ತಿಯನ್ನು ಫ್ರಾನ್ಸ್‌ನ ಗ್ರೆನೋಬಲ್ ನಿಲ್ದಾಣದ ಮುಂದೆ ಬಂಧಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿರುವ ವೀಡಿಯೊ ಇತ್ತೀಚೆಗೆ ಫ್ರಾನ್ಸ್‌ನ ನೈಸ್‌ನಲ್ಲಿ ನಡೆದ ದಾಳಿಯ ಅರೋಪಿಯ ಬಂಧನದಲ್ಲ ಎಂದು ಸಾಬೀತುಪಡಿಸುತ್ತದೆ.
ಫ್ರಾನ್ಸ್‌ನ ನೈಸ್‌ನಲ್ಲಿರುವ ನಾರ್ಟೆ-ಡ್ಯಾಮ್ ಚರ್ಚ್‌ನಲ್ಲಿ ಇತ್ತೀಚೆಗೆ ಮೂರು ಜನರು ಸಾವನ್ನಪ್ಪಿದ ಚಾಕು ದಾಳಿಯ ಹಿನ್ನೆಲೆಯಲ್ಲಿ, ಈ ರೀತಿಯ ವಿಡಿಯೋಗಳು ಮತ್ತು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಚಾಕುಗಳನ್ನು ಬ್ರ್ಯಾಂಡಿಂಗ್ ಮಾಡಿದ್ದಕ್ಕಾಗಿ ಫ್ರಾನ್ಸ್‌ನ ಗ್ರೆನೋಬಲ್‌ನಲ್ಲಿ ಪೊಲೀಸರು ಬಂಧಿಸಿದ ವ್ಯಕ್ತಿಯ 2019 ರ ವೀಡಿಯೊವನ್ನು ನೈಸ್‌ನಲ್ಲಿ ಇತ್ತೀಚಿನ ಚಾಕು ದಾಳಿಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.