ಡಿಸೆಂಬರ್ 2024 ರಲ್ಲಿ ಫಿಲಂ ಇಂಡಸ್ಟ್ರಿ, ಭಾರತೀಯ ನಟ ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಿತು (ಇಲ್ಲಿ ಮತ್ತು ಇಲ್ಲಿ). ಈ ಸಂದರ್ಭದಲ್ಲಿ, ರಾಜ್ ಕಪೂರ್ ಅವರಿಗೆ ಗೌರವ ಸಲ್ಲಿಸಲು ಪ್ರಧಾನಿ ಮೋದಿ ರೆಕಾರ್ಡ್ ಮಾಡಿದ್ದಾರೆ ಎನ್ನಲಾದ ಕವರ್ ಸಾಂಗ್ (ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಹಾಡು 1951 ರ ಚಲನಚಿತ್ರ ಅನಾರಿಯ ‘ಕಿಸಿ ಕಿ ಮುಸ್ಕುರಾಹತೋನ್ ಪೆ’ ಆಗಿದ್ದು, ಇದನ್ನು ಮೂಲತಃ ಗಾಯಕ ಮುಖೇಶ್ ಹಾಡಿದ್ದರು. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವದಂದು ಪ್ರಧಾನಿ ಮೋದಿ ಅವರು ‘ಕಿಸಿ ಕಿ ಮುಸ್ಕುರಾಹತೋಂ ಪೆ’ ಹಾಡಿನ ಈ ಕವರ್ ಹಾಡನ್ನು ರೆಕಾರ್ಡ್ ಮಾಡಿದ್ದಾರೆ.
ಫ್ಯಾಕ್ಟ್: ಇದು AI ಬಳಸಿಕೊಂಡು ರಚಿಸಲಾದ ಹಾಡಾಗಿದೆ. ಪ್ರಧಾನಿ ಮೋದಿ ಅವರು ತಮ್ಮ ಅಫೀಷಿಯಲ್ ಸಾಮಾಜಿಕ ಮಾಧ್ಯಮ ಅಥವಾ ಇತರ ಅಫೀಷಿಯಲ್ ಗವರ್ನಮೆಂಟ್ ಕಮ್ಯುನಿಕೇಷನ್ ಚಾನೆಲ್ (ಸರ್ಕಾರಿ ಸಂವಹನ ಚಾನೆಲ್)ಗಳಲ್ಲಿ ಅಂತಹ ಯಾವುದೇ ಹಾಡನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ವೈರಲ್ ಆಗಿರುವ ಈ ಕ್ಲೇಮ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ನಾವು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಾಡನ್ನು ತಮ್ಮ ಅಫೀಷಿಯಲ್ ಸಾಮಾಜಿಕ ಮಾಧ್ಯಮ ಅಕೌಂಟ್ ನಲ್ಲಿ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಪೋಸ್ಟ್ ಮಾಡಿದ್ದಾರೆಯೇ ಎಂದು ನಾವು ಮೊದಲು ಪರಿಶೀಲಿಸಿದ್ದೇವೆ. ಆದರೆ, ಇದರ ಬಗ್ಗೆ ನಮಗೆ ಯಾವುದೇ ಮಾಹಿತಿಗಳು ಸಿಗಲಿಲ್ಲ. ಅವರು ಈ ಹಾಡನ್ನು ರೆಕಾರ್ಡ್ ಮಾಡಿರುವ ಬಗ್ಗೆ ಯಾವುದೇ ಮಾಧ್ಯಮ ವರದಿಗಳು ಅಥವಾ ಮಾಹಿತಿಯೂ ನಮಗೆ ಕಂಡುಬಂದಿಲ್ಲ (ಇಲ್ಲಿ ಮತ್ತು ಇಲ್ಲಿ).
ವೈರಲ್ ಆಗಿರುವ ವೀಡಿಯೊದ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಯೂಟ್ಯೂಬ್ ನಲ್ಲಿ ಅದೇ ರೀತಿಯ ವಿಭಿನ್ನ ವಿಧದ ಹಾಡನ್ನು ಕಂಡುಕೊಂಡಿದ್ದೇವೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಈ ಯೂಟ್ಯೂಬ್ ವೀಡಿಯೊಗಳಲ್ಲಿ ಒಂದರಲ್ಲಿ, ಈ ಹಾಡಿನ ಚಿಕ್ಕ ವರ್ಷನ್ ಹಾಡನ್ನು AI ಕವರ್ ಎಂದು ಉಲ್ಲೇಖಿಸಲಾಗಿದೆ.
ಅಂದರೆ ಇದನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನು ಬಳಸಿ ರಚಿಸಲಾಗಿದೆ. ‘ಮೋದಿ ಮ್ಯೂಸಿಕ್ ಪ್ರೊಡಕ್ಷನ್ಸ್’ ಎಂಬ ಈ ಯೂಟ್ಯೂಬ್ ಚಾನೆಲ್ ಪ್ರಧಾನಿ ನರೇಂದ್ರ ಮೋದಿಯವರ ಇಂತಹ ಅನೇಕ AI ಕವರ್ ಹಾಡುಗಳನ್ನು ಒಳಗೊಂಡಿದೆ.

ಇದಲ್ಲದೆ, ಇದನ್ನು ಪರಿಶೀಲಿಸಲು ನಾವು AI ವಿಷಯವನ್ನು ಪತ್ತೆ ಹಚ್ಚುವ ಟ್ರೂ ಮೀಡಿಯಾ ಮೂಲಕ ಆಡಿಯೊವನ್ನು ರನ್ ಮಾಡಿದ್ದೇವೆ. ಈ ಮೂಲಕ ಆಡಿಯೊ ಫೈಲ್ ‘substantial evidence of manipulation’ ಗೆ ಒಳಗಾಗಿದೆ ಎಂದು ಕಂಡುಹಿಡಿದಿದೆ.

ಈ ಮಾಹಿತಿಯು ವೈರಲ್ ವೀಡಿಯೊದಲ್ಲಿ ಪ್ರಧಾನಿ ಮೋದಿ ಹಾಡನ್ನು ರೆಕಾರ್ಡ್ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದಲ್ಲದೆ, ಈ ಸಂಶೋಧನೆಯ ಸಮಯದಲ್ಲಿ, ಪ್ರಧಾನಿ ಮೋದಿ ರಾಜ್ ಕಪೂರ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ‘X’ ಪೋಸ್ಟ್ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಜ್ ಕಪೂರ್ ಅವರನ್ನು ಸ್ಮರಿಸಲು ಪ್ರಧಾನಿ ಮೋದಿ ಅವರು AI- ರಚಿತವಾದ ಆಡಿಯೊವನ್ನು ಮೋದಿ ಹಾಡಿದ್ದು ಎಂದು ತಪ್ಪಾಗಿ ಶೇರ್ ಮಾಡಲಾಗಿದೆ.