Fake News - Kannada
 

ರಾಮಮಂದಿರದ ಅಧಿಕೃತ 3D ದೃಶ್ಯಾವಳಿಗಳು ಎಂದು ಬೇರೆ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ

0

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ 3ಡಿ ದೃಶ್ಯಾವಳಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಅಯೋಧ್ಯೆ ರಾಮಮಂದಿರದ ಅಧಿಕೃತವಾಗಿ ಬಿಡುಗಡೆಯಾದ 3D ವೀಡಿಯೊ.

ನಿಜಾಂಶ : ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಅಯೋಧ್ಯೆ ರಾಮಮಂದಿರದ ಅಧಿಕೃತವಾಗಿ ಬಿಡುಗಡೆಯಾದ 3D ವೀಡಿಯೊ ಅಲ್ಲ. ಶಿವಾಜಿ ಹೋಮ್ ಡಿಸೈನ್ ತಂಡದ ಅಡಿಯಲ್ಲಿ ಕೆಲಸ ಮಾಡುವ ಡಿಸೈನರ್ ರೋಹಿತ್ ಸಂಖ್ಲಾ ಅವರು ಈ ವೀಡಿಯೊವನ್ನು ರಚಿಸಿದ್ದಾರೆ. ಶಿವಾಜಿ ಹೋಮ್ ಡಿಸೈನ್ ಯೂಟ್ಯೂಬ್ ಚಾನೆಲ್ ಈ ವೀಡಿಯೊವನ್ನು ನವೆಂಬರ್ 2021 ರಲ್ಲಿ ಪ್ರಕಟಿಸಿತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಫೆಬ್ರವರಿ 2022 ರಲ್ಲಿ ಅಯೋಧ್ಯೆ ರಾಮಮಂದಿರದ 3D ವೀಡಿಯೊವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಎರಡೂ ವೀಡಿಯೊಗಳು ವಿಭಿನ್ನವಾಗಿವೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ಸರ್ಚ್ ಮಾಡಿದಾಗ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಅಯೋಧ್ಯೆ ರಾಮಮಂದಿರದ ಅಧಿಕೃತವಾಗಿ ಬಿಡುಗಡೆಯಾದ 3D ವೀಡಿಯೊ ಲಭ್ಯವಾಗಿದೆ . ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು 13 ಫೆಬ್ರವರಿ 2022 ರಂದು ಈ 3D ವೀಡಿಯೊವನ್ನು ಟ್ವೀಟ್ ಮಾಡಿದೆ. ಆದರೆ ಅಧಿಕೃತವಾಗಿ ಬಿಡುಗಡೆಯಾದ 3D ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳು ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊಕ್ಕಿಂತ ಭಿನ್ನವಾಗಿವೆ.

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಗೂಗಲ್ ರಿವರ್ಸ್‍ ಇಮೇಜ್ ಸರ್ಚ್ ಮಾಡಿದಾಗ, ‘ಶಿವಾಜಿ ಹೋಮ್ ಡಿಸೈನ್’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ರೀತಿಯ ದೃಶ್ಯಗಳೊಂದಿಗೆ ವೀಡಿಯೊವನ್ನುಅಪ್‍ಲೋಡ್‍ ಮಾಡಿರುವುದು ಕಂಡುಬಂದಿದೆ.. ‘ಶಿವಾಜಿ ಹೋಮ್ ಡಿಸೈನ್’ ಯೂಟ್ಯೂಬ್ ಚಾನೆಲ್ ಈ ವೀಡಿಯೊವನ್ನು 03 ನವೆಂಬರ್ 2021 ರಂದು “ಭವ್ಯ ಅಯೋಧ್ಯೆ ರಾಮಮಂದಿರ 3D ಅನಿಮೇಷನ್ 3d ವಾಕ್ ಥ್ರೂ” ಶೀರ್ಷಿಕೆಯೊಂದಿಗೆ ಪ್ರಕಟಿಸಿದೆ. 3ಡಿ ವಿಡಿಯೋವನ್ನು ರೋಹಿತ್ ಸಂಖ್ಲಾ ಎಂಬ ಡಿಸೈನರ್ ರಚಿಸಿದ್ದಾರೆ ಎಂದು ವಿಡಿಯೋ ವಿವರಣೆಯಲ್ಲಿ ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಯೂಟ್ಯೂಬ್ ಚಾನಲ್ ವೊಂದು ಅಪ್ ಲೋಡ್ ಮಾಡಲಾಗಿರುವ ದೃಶ್ಯಾವಳಿಗಳನ್ನು ಅಯೋಧ್ಯೆ ರಾಮಮಂದಿರದ ಅಧಿಕೃತವಾಗಿ ಬಿಡುಗಡೆಯಾದ 3D ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.

Share.

Comments are closed.

scroll