Fake News - Kannada
 

ಮಹಾಭಾರತದ ಕುರಿತು ರಾಹುಲ್ ಗಾಂಧಿ ಮಾಡಿರುವ ಈ ಟ್ವೀಟ್ ಅನ್ನು ಎಡಿಟ್‌ ಮಾಡಿ ಹಂಚಿಕೊಳ್ಳಲಾಗಿದೆ

0

ಕಾಂಗ್ರೆಸ್‌‌‌‌ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿರುವ ಟ್ವೀಟ್‌ ಒಂದರ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಹಿಂದೂಗಳ ಪವಿತ್ರ ಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣದ ಬಗ್ಗೆ ಅವರು ತಪ್ಪು ತಪ್ಪಾಗಿ ಬರೆದಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಹೀಗಾಗಿ ಅವರಿಗೆ ಗ್ರಂಥಗಳ ಬಗ್ಗೆ ಜ್ಞಾನದ ಕೊರೆತೆಯಿದೆ ಎಂದು ಸಾಮಾಜಿಕ ಜಾಲತಾಣಗಳ ಪೋಸ್ಟ್‌ ಪ್ರತಿಪಾದಿಸುತ್ತಿದೆ. ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಚಿತ್ರದಲ್ಲಿ ಅವರು, ಅರ್ಜುನನಿಗೆ ಕೃಷ್ಣನ ಬದಲಾಗಿ ಭಗವಾನ್ ರಾಮ ಮಾರ್ಗದರ್ಶಿ ಎಂದು ಹೇಳಿದ್ದಾರೆ ಮತ್ತು ಪಾಂಡವರಾದ ಯುಧೀಷ್ಠಿರ, ಲಕ್ಷ್ಮಣ, ಅರ್ಜುನ, ಗಣೇಶ ಮತ್ತು ಶತ್ರುಘ್ನ ಸಿನ್ಹಾ ಒಟ್ಟು ಸೇರಿ ರಾವಣನನ್ನು ಕೊಂಡಿದ್ದಾರೆ ಎಂದು ಬರೆಯಲಾಗಿದೆ. ಅಲ್ಲದೆ, ರಾಹುಲ್ ಗಾಂಧಿ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಈ ಟ್ವೀಟ್‌‌ ಕಾಂಗ್ರೆಸ್ ಪಕ್ಷವನ್ನು ಪಾಂಡವರಿಗೆ ಮತ್ತು ಬಿಜೆಪಿ ನಾಯಕರನ್ನು ಕೌರವರಿಗೆ ಹೋಲಿಸಿದೆ. ಈ ಪೋಸ್ಟ್ ನಿಜವೆ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ರಾಹುಲ್ ಗಾಂಧಿ ಮಹಾಭಾರತದ ಪಾತ್ರಗಳ ಬಗ್ಗೆ ತಪ್ಪಾಗಿ ಟ್ವೀಟ್ ಮಾಡಿದ್ದಾರೆ.

ವಾಸ್ತವ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಟ್ವೀಟ್ ಎಡಿಟ್‌ ಮಾಡಿರುವ ಚಿತ್ರವಾಗಿದೆ. ರಾಹುಲ್ ಗಾಂಧಿ ತಮ್ಮ ಟ್ವಿಟರ್ ಖಾತೆಯಲ್ಲಿ ಅಂತಹ ಯಾವುದೇ ಟ್ವೀಟ್ ಮಾಡಿಲ್ಲ. ರಾಹುಲ್ ಗಾಂಧಿ ಅವರು 2018 ರಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನು ಪಾಂಡವರಿಗೆ ಮತ್ತು ಬಿಜೆಪಿ ನಾಯಕರನ್ನು ಕೌರವರಿಗೆ ಹೋಲಿಸಿದ್ದಾರೆ. ಆದರೆ ಅವರು ಎಂದಿಗೂ ಟ್ವೀಟ್‌ನಲ್ಲಿ ಆರೋಪಿಸಿದಂತಹ ಹೇಳಿಕೆಗಳನ್ನು ಮಾಡಲಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಆರೋಪಿತ ಟ್ವೀಟ್ ಅನ್ನು ಎಚ್ಚರಿಕೆಯಿಂದ ಗಮನಿಸಿದಾಗ, 19 ಮಾರ್ಚ್ 2018 ರಂದು ಟ್ವೀಟ್ ಮಾಡಲಾಗಿದೆ ಎಂದು ನಾವು ಕಾಣಬಹುದಾಗಿದೆ. ಟ್ವಿಟರ್ ಅಡ್ವಾನ್ಸ್‌‌ ಸರ್ಚ್ ಬಳಸಿಕೊಂಡು ರಾಹುಲ್ ಗಾಂಧಿ ಅಂತಹ ಯಾವುದೇ ಟ್ವೀಟ್ ಅನ್ನು  2018 ರ ಮಾರ್ಚ್ 19 ರಂದು ಮಾಡಿದ್ದಾರೆಯೇ ಎಂದು ಪರಿಶೀಲಿಸಿದಾಗ ನಮಗೆ ಅವರ ಅಧಿಕೃತ ಖಾತೆಯಲ್ಲಿ ಯಾವುದೇ ಟ್ವೀಟ್‌ ಸಿಕ್ಕಿಲ್ಲ. ಒಂದು ವೇಳೆ ರಾಹುಲ್ ಗಾಂಧಿ ಇಂತಹ ಟ್ವೀಟ್ ಮಾಡಿದ್ದರೆ, ಹಲವಾರು ಸುದ್ದಿ ವೆಬ್‌ಸೈಟ್‌ಗಳು ಈ ಮಾಹಿತಿಯನ್ನು ವರದಿ ಮಾಡುವ ಲೇಖನಗಳನ್ನು ಪ್ರಕಟಿಸಿರುತ್ತಿದ್ದವು. ಆದರೆ ಈ ಮಾಹಿತಿಯ ಬಗ್ಗೆ ವರದಿ ಮಾಡಿರುವ ಒಂದೇ ಒಂದು ಸುದ್ದಿಯನ್ನು ನಮಗೆ ಕಂಡುಕೊಳ್ಳಲಾಗಿಲ್ಲ.

ರಾಹುಲ್ ಗಾಂಧಿಯವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಮಾಡಿದ ಸಾಮಾನ್ಯ ಟ್ವೀಟ್ ಅನ್ನು ಸ್ಕ್ರೀನ್‌ಶಾಟ್‌ನಲ್ಲಿರುವ ಟ್ವೀಟ್‌ನೊಂದಿಗೆ ಹೋಲಿಸಿದಾಗ, ಈ ಎರಡೂ ಟ್ವೀಟ್‌ಗಳಲ್ಲಿ ನಮಗೆ ಹಲವು ವ್ಯತ್ಯಾಸಗಳನ್ನು ಗಮನಿಸಬಹುದು. ಪೋಸ್ಟ್‌ನಲ್ಲಿ ಹಂಚಿಕೊಂಡ ಟ್ವೀಟ್‌ಗೆ ರಾಹುಲ್ ಗಾಂಧಿಯವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಂತೆ ಯಾವುದೇ ಅಧಿಕೃತ ನೀಲಿ ಟಿಕ್ ಮಾರ್ಕ್ ಇಲ್ಲ. ಅಲ್ಲದೆ, ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಆರೋಪಿತ ಟ್ವೀಟ್ ಅನ್ನು ಟ್ವೀಟ್ ಮಾಡಿದ ಡಿವೈಸ್‌‌‌ನ ಹೆಸರು ಕಾಣುವುದಿಲ್ಲ. ಸಾಮಾನ್ಯವಾಗಿ ಯಾವುದೇ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದಾಗ ಅವರು ಟ್ವೀಟ್‌ ಮಾಡಿರುವ ಡಿವೈಸ್‌‌ ಅನ್ನು ಟ್ವೀಟ್ ಪ್ರದರ್ಶಿಸುತ್ತದೆ.

2018 ರ ಕಾಂಗ್ರೆಸ್ ಪ್ಲೀನರಿ ಮತ್ತು ಕರ್ನಾಟಕ ಚುನಾವಣಾ ಸಭೆಗಳಲ್ಲಿ, ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಪಾಂಡವರಿಗೆ ಮತ್ತು ಬಿಜೆಪಿ ನಾಯಕರನ್ನು ಮಹಾಭಾರತದ ಕೌರವರಿಗೆ ಹೋಲಿಸಿದ್ದರು. ಆದರೆ ಟ್ವೀಟ್ ಸ್ಕ್ರೀನ್‌ಶಾಟ್‌ನಲ್ಲಿ ಆರೋಪಿಸಿದ ರೀತಿಯಲ್ಲಿ ರಾಹುಲ್ ಗಾಂಧಿ ಎಂದಿಗೂ ಹೇಳಿಕೆ ನೀಡಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾಭಾರತದ ಕುರಿತು ರಾಹುಲ್ ಗಾಂಧಿಯವರ ಉದ್ದೇಶಿತ ಟ್ವೀಟ್‌ನ ಚಿತ್ರವು ಎಡಿಟ್‌ ಮಾಡಿರುವುದಾಗಿದೆ.

Share.

About Author

Comments are closed.

scroll