“ಗರ್ಭಿಣಿ ಮಹಿಳೆಗೆ ತನ್ನ ಲಗೇಜ್ ಕೊಂಡೊಯ್ಯುವಾಗ ತೊಂದರೆಯಾಗಿದ್ದರೆ, ಯಾರು ಸಹಾಯ ಮಾಡಬಹುದು? ಭಾರತೀಯ ಸೇನೆಯ ಸೈನಿಕರು ಅವರಿಗೆ ಸಹಾಯ ಮಾಡುತ್ತಾರೆ ಮತ್ತು ಅವರ ಲಗೇಜ್ ಅನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಂಡು ಹೋಗಲು ನೆರವಾಗುತ್ತಾರೆ” ಎಂದು ವೀಡಿಯೊವನ್ನು ಹಂಚಿಕೊಳ್ಳುವ ಪೋಸ್ಟ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಲೇಖನದ ಮೂಲಕ ಆ ವೀಡಿಯೊದ ಅಸಲಿಯತ್ತನ್ನು ಪರಿಶೀಲಿಸೋಣ.
ಪ್ರತಿಪಾದನೆ: ಗರ್ಭಿಣಿ ಮಹಿಳೆಯೊಬ್ಬರು ಕಷ್ಟದಲ್ಲಿದ್ದಾಗ, ಯಾರೂ ಅವರಿಗೆ ಸಹಾಯ ಮಾಡದೇ ಇದ್ದಾಗ, ಭಾರತೀಯ ಸೇನೆಯ ಸೈನಿಕರು ಮಹಿಳೆಗೆ ಸಹಾಯ ಮಾಡುತ್ತಿರುವ ವಿಡಿಯೋ.
ನಿಜಾಂಶ: ಈ ವೀಡಿಯೊದಲ್ಲಿನ ದೃಶ್ಯಗಳು ನಿಜವಾಗಿಯೂ ಘಟನೆಗೆ ಸಂಬಂಧಿಸಿಲ್ಲ. ಇದು ಸ್ಕ್ರಿಪ್ಟೆಡ್ (ಪೂರ್ವಯೋಜಿತ) ಕಿರುಚಿತ್ರದ ವೀಡಿಯೊ ತುಣುಕಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಲಾದ ಪ್ರತಿಪಾದನೆ ತಪ್ಪಾಗಿದೆ.
ವೈರಲ್ ವೀಡಿಯೊದಲ್ಲಿನ ದೃಶ್ಯಗಳು ನಿಜವಾಗಿಯೂ ನಡೆದ ಘಟನೆಗೆ ಸಂಬಂಧಿಸಿಲ್ಲ. ಇದು ಸ್ಕ್ರಿಪ್ಟ್ ಮಾಡಿದ (ಪೂರ್ವಯೋಜಿತ ವೀಡಿಯೊವಾಗಿದೆ. ಪ್ರಮುಖ ನಟಿ ಪ್ರಿಯಾ ಕಳೆದ ವರ್ಷ ಜನವರಿಯಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಇದೇ ವೀಡಿಯೊದ ಪೂರ್ಣ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪ್ರಿಯಾ ಅವರು ಈ ವಿಡಿಯೋವನ್ನು ಶೇರ್ ಮಾಡಿರುವ ಪೋಸ್ಟ್‌ನಲ್ಲಿ, ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಮತ್ತು ಜಾಗೃತಿಗಾಗಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ವೀಡಿಯೊದ ಕೊನೆಯಲ್ಲಿ ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊವಾಗಿದೆ, ಈ ವೀಡಿಯೊವನ್ನು ಜಾಗೃತಿ ಮೂಡಿಸಲು ಚಿತ್ರೀಕರಿಸಲಾಗಿದೆ ಎಂದು ಸ್ಪಷ್ಟವಾಗಿ ಬರೆದಿರುವುದೂ ಕೂಡ ಕಂಡುಬಂದಿದೆ.
ಇತ್ತೀಚಿನ ದಿನಗಳಲ್ಲಿ, ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇಂತಹ ಜಾಗೃತಿ ವೀಡಿಯೊಗಳನ್ನು ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೂ ಕೆಲವರು ಈ ವೀಡಿಯೊಗಳು ಹೇಳಿಕೆ ಮತ್ತು ಉದ್ದೇಶವಿರುವ ಭಾಗವನ್ನು ತೆಗೆದು ಪೋಸ್ಟ್ ಮಾಡುತ್ತಾರೆ. ಹೀಗಾಗಿ, ಇತರರು ಇಂತಹ ವೀಡಿಯೊಗಳನ್ನು ನೈಜ ಘಟನೆಗಳೆಂದು ಹಂಚಿಕೊಳ್ಳುತ್ತಾರೆ. ಮಾತ್ರವಲ್ಲದೆ, ಅನ್ಯ ಧರ್ಮದ ಮೇಲೆ ಧಾರ್ಮಿಕ ಆರೋಪಗಳನ್ನೂ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಅಂತಹ ಕೆಲವು ವೀಡಿಯೋಗಳ ಬಗ್ಗೆ FACTLY ಬರೆದಿರುವ ಫ್ಯಾಕ್ಟ್ ಚೆಕ್ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ, ಭಾರತೀಯ ಸೈನಿಕರು ಗರ್ಭಿಣಿ ಮಹಿಳೆಗೆ ಸಹಾಯ ಮಾಡುವ ದೃಶ್ಯಗಳು ನಿಜವಲ್ಲ, ಇದು ಸ್ಕ್ರಿಪ್ಟೆಡ್ ಕಿರುಚಿತ್ರ.