Fake News - Kannada
 

ಪಂಜಾಬ್ ಸಿಎಂ ಮದ್ಯ ಸೇವಿಸಿದ್ದಾರೆ ಎಂದು ‘ದಿ ಜರ್ಮನ್ ಟೈಮ್ಸ್’ನ ಸುದ್ದಿಯನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ

0

ಪಂಜಾಬ್ ಮುಖ್ಯಮಂತ್ರಿ ಭಗವತ್ ಮಾನ್ ಅವರು ಮದ್ಯಪಾನ ಮಾಡಿದ್ದಕ್ಕಾಗಿ ಜರ್ಮಿನಿಯ ಲುಫ್ಥಾನ್ಸ್‌ನ ಫ್ರಾಂಕ್‌ಫೋರ್ಟ್-ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ಹೇಳುವ ‘ದಿ ಜರ್ಮನ್ ಟೈಮ್ಸ್’ ಪತ್ರಿಕೆ ರೀತಿಯ ಲೇಖನದ ಫೋಟೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಪಾನಮತ್ತರಾಗಿದ್ದಕ್ಕಾಗಿ ಭಾಗವತ್ ಮಾನ್ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು ಎಂದು ಈ ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ. ಮತ್ತು ಸಿಎಂರವರ ಬ್ಯಾಗುಗಳನ್ನು ಕೆಳಗಿಳಿಸಲು ನಾಲ್ಕು ಗಂಟೆಗಳಿಗೂ ಹೆಚ್ಚು ವಿಳಂಬವಾಯಿತು ಎಂದು ಆರೋಪಿಸಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ‘ದಿ ಜರ್ಮನ್ ಟೈಮ್ಸ್’ ಲೇಖನವು ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಕುಡಿದಿದ್ದಕ್ಕಾಗಿ ಲುಫ್ಥಾನ್ಸದ ಫ್ರಾಂಕ್‌ಫೋರ್ಟ್-ದೆಹಲಿ ವಿಮಾನದಿಂದ ಕೆಳಗಿಳಿಸಿದ ಸುದ್ದಿಯನ್ನು ವರದಿ ಮಾಡಿದೆ.

ಸತ್ಯಾಂಶ : ಭಗವಂತ್ ಮಾನ್ ಅವರ ಸುದ್ದಿ ಕ್ಲಿಪ್‌ಅನ್ನು ‘@BeingBHK’ ಎಂಬ ವಿಡಂಬನೆ ಮತ್ತು ಮೀಮ್ ಮಾಡುವವರಿಂದ ರಚಿಸಲ್ಪಟ್ಟಿದೆ. 18 ಸೆಪ್ಟೆಂಬರ್ 2022 ರಂದು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಕೊನೆಯ ಕ್ಷಣದಲ್ಲಿ ಭಗವಂತ್ ಮಾನ್ ಅವರು ದೆಹಲಿಗೆ ಹಿಂದಿರುಗುವ ಪ್ರಯಾಣವನ್ನು ಮರು ನಿಗದಿಪಡಿಸಿದರು. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಭಗವತ್ ಮಾನ್ ಅವರು ಅಸ್ವಸ್ಥರಾಗಿದ್ದ ಕಾರಣ ಪ್ರಯಾಣ ಮುಂದೂಡಿದರೆಂದು ಹೇಳಿದರೆ, ಕೆಲವು ಅನಾಮಧೇಯ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಭಗವಂತ್ ಮಾನ್ ಅವರನ್ನು ಹೋಲುವ ವ್ಯಕ್ತಿಯನ್ನು ಲುಫ್ಥಾನ್ಸದ ವಿಮಾನದಿಂದ ಇಳಿಸಲಾಯಿತು ಎಂದು ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ. ತಮ್ಮ ಫ್ರಾಂಕ್‌ಫರ್ಟ್-ದೆಹಲಿ ವಿಮಾನದ ವಿಳಂಬಕ್ಕೆ ಹವಾಮಾನ ಬದಲಾವಣೆ ಕಾರಣ ಎಂದು ಲುಫ್ಥಾನ್ಸ ಟ್ವೀಟ್ ಮೂಲಕ ಹೇಳಿದೆ. ಜರ್ಮನಿಯಿಂದ ಭಗವಂತ್ ಮನ್ ಅವರು ತಡವಾಗಿ ಬರಲು ನಿಖರವಾದ ಕಾರಣಗಳನ್ನು ನಾವು ಖಚಿತಪಡಿಸಲು ಸಾಧ್ಯವಾಗದಿದ್ದರೂ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಸುದ್ದಿ ಕ್ಲಿಪ್ಪಿಂಗ್ ವಿಡಂಬನೆಯಾಗಿದೆ ಮತ್ತು ಅದನ್ನು ‘ದಿ ಜರ್ಮನ್ ಟೈಮ್ಸ್’ ಪ್ರಕಟಿಸಿಲ್ಲ ಎಂದು ಖಚಿತಪಡಿಸಬಹುದು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

‘ದಿ ಜರ್ಮನ್ ಟೈಮ್ಸ್’ ಅಂತಹ ಯಾವುದೇ ಸುದ್ದಿಯನ್ನು ಪ್ರಕಟಿಸಿದೆಯೇ ಎಂದು ಪರಿಶೀಲಿಸಲು ನಾವು ಸರ್ಚ್ ಮಾಡಿದಾಗ, ‘ದಿ ಜರ್ಮನ್ ಟೈಮ್ಸ್’ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಲೇಖನ ಲಭ್ಯವಾಗಿಲ್ಲ. ವೈರಲ್ ಕ್ಲಿಪ್ಪಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಭಗವಂತ್ ಮಾನ್ ಅವರ ಫೋಟೋದ ಕೆಳಗೆ “ಈ ಲೇಖನ ವಿಡಂಬನೆಗಾಗಿ ಎಂದು ಹೇಳುವ ವಿವರಣೆಯನ್ನು ನೋಡಬಹುದು. ಹೆಚ್ಚಿನ ಮೂಲಗಳನ್ನು ಹುಡುಕುವಾಗ, ಅದೇ ಬಳಕೆದಾರಹೆಸರು (@BeingBHK) ಹೊಂದಿರುವ Twitter ಹ್ಯಾಂಡಲ್ ಅನ್ನು ನಾವು ಕಂಡುಕೊಂಡಿದ್ದೇವೆ, ಅದು ಬಯೋ ವಿಭಾಗದಲ್ಲಿ ಮೆಮೆ, ಕಾರ್ಟೂನ್ ಮತ್ತು ವಿಡಂಬನಕಾರ ಎಂದು ವಿವರಿಸುತ್ತದೆ. ‘@BeingBHK’ ಈ ಸುದ್ದಿ ಕ್ಲಿಪಿಂಗ್ ಅನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿಯೂ ಹಂಚಿಕೊಂಡಿದ್ದಾರೆ

ಫ್ರಾಂಕ್‌ಫರ್ಟ್‌ನಿಂದ ಹೊರಡುವಾಗ ಭಗವಂತ್‌ ಮಾನ್‌ರವರು ಅಸ್ವಸ್ಥರಾಗಿದ್ದರು. ಆ ಕಾರಣದಿಂದ ಅವರು ಬರುವಿಕೆ ತಡವಾಗಿದೆ ಎಂದು ಆಪ್ ವಕ್ತಾರರು ಹೇಳಿದರು:

ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಲುಫ್ಥಾನ್ಸ ಟ್ವೀಟ್ ಮೂಲಕ, “ಫ್ರಾಂಕ್‌ಫರ್ಟ್‌ನಿಂದ ದೆಹಲಿಗೆ ಬರುವ ನಮ್ಮ ವಿಮಾನವು ಹವಾಮಾನ ಬದಲಾವಣೆಯಿಂದಾಗಿ ಮೂಲತಃ ಯೋಜಿಸಿದ್ದಕ್ಕಿಂತ ತಡವಾಗಿ ಹೊರಟಿತು ” ಎಂದು ಹೇಳಿದೆ. ಲುಫ್ಥಾನ್ಸ್ ಭಗವಂತ್ ಮಾನ್ ಮದ್ಯಪಾನದ ಸ್ಥಿತಿಯಲ್ಲಿರುವುದನ್ನು ದೃಢೀಕರಿಸುವ ಯಾವುದೇ ಹೇಳಿಕೆಯನ್ನು ನೀಡಲಿಲ್ಲ. ಲುಫ್ಥಾನ್ಸದ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡ AAP ಪಂಜಾಬ್‌ನ ಮುಖ್ಯ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್, ಮಾನ್ ಕುಡಿದಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಆದಾಗ್ಯೂ, ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಭಗವಂತ್ ಮಾನ್ ಅವರನ್ನು ಕೆಳಗಿಳಿಸಿರುವ ಆರೋಪದ ಬಗ್ಗೆ ವಿವರವಾದ ವರದಿಯನ್ನು ಕೇಳಿದ್ದಾರೆ. ಭಗವಂತ್ ಮಾನ್ ಅವರು ಜರ್ಮನಿಯಿಂದ ಹಿಂದಿರುಗುವ ಪ್ರವಾಸವನ್ನು ಮರುಹೊಂದಿಸಲು ನಮಗೆ ನಿಖರವಾದ ಕಾರಣಗಳನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಸುದ್ದಿ ಕ್ಲಿಪ್ಪಿಂಗ್ ವಿಡಂಬನಾತ್ಮಕ ಲೇಖನ ಎಂದು ಖಚಿತಪಡಿಸಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಪಾನಮತ್ತರಾಗಿದ್ದ ಕಾರಣಕ್ಕೆ ಭಗವತ್ ಮಾನ್ ಅವರನ್ನು ವಿಮಾನದಿಂದ ಕೆಳಗಿಳಿಸಿದ್ದಾರೆ ಎಂದು ವರದಿ ಮಾಡುವ ‘ದಿ ಜರ್ಮನ್ ಟೈಮ್ಸ್’ ಸುದ್ದಿ ಕ್ಲಿಪ್ಪಿಂಗ್ ‘@BeingBHK’ ಎಂಬ ವಿಡಂಬನೆ ಮತ್ತು ಮೀಮ್ ಮಾಡುವವರಿಂದ ರಚಿಸಲ್ಪಟ್ಟಿದೆ. ಹಾಗಾಗಿ ಫೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll