Fake News - Kannada
 

ಸೂರ್ಯೋದಯದ ಈ ಫೋಟೋಗಳು ಒರಿಸ್ಸಾದ (ಭಾರತ) ಕೊನಾರ್ಕ್ ದೇವಸ್ಥಾನಕ್ಕೆ ಸಂಬಂಧಿಸಿದವಲ್ಲ

0

ಒರಿಸ್ಸಾದ  ಕೊನಾರ್ಕ್ ದೇವಸ್ಥಾನದಲ್ಲಿ ಸೂರ್ಯೋದಯವನ್ನು ತೋರಿಸುತ್ತಾರೆ ಎಂಬ ಶೀರ್ಷಿಕೆಯೊಂದಿಗೆ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೆ ಎಂಬುದನ್ನು ಪರಿಶೀಲಿಸೋಣ ಬನ್ನಿ.

ಪೋಸ್ಟ್ನನಲ್ಲಿ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು
ಪೋಸ್ಟ್ನನಲ್ಲಿ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಮಂಡನೆ: ಸೂರ್ಯೋದಯದ ಫೋಟೋಗಳನ್ನು ಒರಿಸ್ಸಾದ ಕೊನಾರ್ಕ್ ದೇವಾಲಯದಲ್ಲಿ ಸೆರೆಹಿಡಿಯಲಾಗಿದೆ.

ನಿಜಾಂಶ: ಫೋಟೋಗಳಲ್ಲಿ ಒಂದನ್ನು ಕಾಂಬೋಡಿಯಾದ ಅಂಗ್ಕೋರ್‍ ವಾಟ್ ದೇವಸ್ಥಾನದಲ್ಲಿ ತೆಗೆಯಲಾಗಿದ್ದರೆ, ಉಳಿದ ಎರಡು ಫೋಟೋಗಳನ್ನು ಥೈಲ್ಯಾಂಡ್‌ನ ಫನೋಮ್ ರಂಗ್ ದೇವಸ್ಥಾನದಲ್ಲಿ ಸೆರೆಹಿಡಿಯಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಂಡಿಸಿರುವ ಮಾಹಿತಿ ತಪ್ಪಾಗಿದೆ.

ಫೋಟೋ 1:

ಗೂಗಲ್ ರಿವರ್ಸ್ ಇಮೇಜ್ ಮೂಲಕ ಈ ಫೋಟೋವನ್ನುಹುಡುಕಿದಾಗ, ಅದೇ ಫೋಟೋವನ್ನು ಟ್ರಾವೆಲ್‌ ವೆಬ್‌ಸೈಟ್‌ ಒಂದರಲ್ಲಿ ’ಅಂಗ್ಕೋರ್‍ ವಾಟ್ ಸೂರ್ಯೋದಯ’ ಎಂಬ ವಿವರಣೆಯೊಂದಿಗೆ ಪ್ರಕಟಿಸಿರುವ ಮಾಹಿತಿ ದೊರಕಿತು. ’ಅಂಗ್ಕೋರ್‍ ವಾಟ್’ ಕೀವರ್ಡ್‌ಗಳೊಂದಿಗೆ ಹುಡುಕಿದಾಗ, ‘ಗೆಟ್ಟಿ ಇಮೇಜಸ್’ ವೆಬ್‌ಸೈಟ್‌ ನಲ್ಲಿ ‘ಅಂಗ್ಕೋರ್‍ ವಾಟ್’ ದೇವಾಲಯದ ರೀತಿಯ ಫೋಟೋಗಳು ಕಂಡುಬಂದವು. ಎರಡೂ ಫೋಟೋಗಳಲ್ಲಿ ಅನೇಕ ಹೋಲಿಕೆಗಳನ್ನು ಕಾಣಬಹುದು.

ಅಲ್ಲದೆ, ಗೂಗಲ್ ಸ್ಟ್ರೀಟ್  ವ್ಯೂನಲ್ಲಿ ದೇವಾಲಯದ ಸಂಕೀರ್ಣದ ಪೂರ್ವಕ್ಕೆ ಮುಖಮಾಡಿ, ಅಂಗ್ಕೋರ್‍ ವಾಟ್ ದೇವಾಲಯದ ಅದೇ ನೋಟವನ್ನು ಕಾಣಬಹುದು.

ಫೋಟೋ 2:

’ಶಟರ್ ಸ್ಟಾಕ್’ ವೆಬ್‌ಸೈಟ್‌ ನಲ್ಲಿ ಇದೇ ರೀತಿಯ ಫೋಟೋ ಕಂಡುಬಂದಿದೆ. ‘ಪ್ರವೇಶ ದ್ವಾರದ ಬಾಗಿಲಿನ ಮೂಲಕ ಸೂರ್ಯನ ಬೆಳಕಿನಿಂದ ಹೊಳೆಯುವ ಪ್ರಸತ್ ಫನೋಮ್ ರಂಗ್ ಐತಿಹಾಸಿಕ ಉದ್ಯಾನ, ಪ್ರಾಚೀನ ಖಮೇರ್ ದೇವಸ್ಥಾನದಕ್ಕೆ ಅದ್ಭುತ ಪ್ರವಾಸಿಗರ ಭೇಟಿ’ ಎಂಬ ವಿವರಣೆ ಅದರಲ್ಲಿದೆ. ಮತ್ತೆ ಇಲ್ಲಿಯೂ ಸಹ ಎರಡು ಚಿತ್ರಗಳ ನಡುವೆ ಸಾಮ್ಯತೆಯನ್ನು ಕಾಣಬಹುದು.

ಅಲ್ಲದೆ, ಥಾಯ್ಲೆಂಡ್‌ನ ಫನೋಮ್ ರಂಗ್ ದೇವಾಲಯದ ಪ್ರವೇಶ ದ್ವಾರದಲ್ಲಿ ಈ ಫೋಟೋ ತೆಗೆಯಲಾಗಿದೆ ಎಂದು ಗೂಗಲ್ ಸ್ಟ್ರೀಟ್ ವ್ಯೂ ಖಚಿತಪಡಿಸುತ್ತದೆ. ‘ಬ್ಯಾಂಕಾಕ್ ಪೋಸ್ಟ್’ನ ಲೇಖನದಲ್ಲಿ, ‘ಮಾರ್ಚ್ 31 ರಿಂದ ಏಪ್ರಿಲ್ 2 ರವರೆಗೆ, ಫನೋಮ್ ರಂಗ್ ಐತಿಹಾಸಿಕ ಉದ್ಯಾನ ಉತ್ಸವವು ಬುರಿ ರಾಮ್ ಪ್ರಾಂತ್ಯದ ಫನೋಮ್ ರಂಗ್ ಐತಿಹಾಸಿಕ ಉದ್ಯಾನವನದಲ್ಲಿ ನಡೆಯಲಿದ್ದು, ಗರ್ಭಗುಡಿಯ ಎಲ್ಲಾ 15 ಬಾಗಿಲುಗಳ ಮೂಲಕ, ಉದಯಿಸುತ್ತಿರುವ ಸೂರ್ಯನ ಕಿರಣಗಳನ್ನು ನೋಡಲು ಪ್ರವಾಸಿಗರಿಗೆ ವರ್ಷಕ್ಕೊಮ್ಮೆ ಅವಕಾಶ ನೀಡುತ್ತದೆ’ ಎಂದು ಉಲ್ಲೇಖಿಸಲಾಗಿದೆ.

ಫೋಟೋ 3:

ಈ ಫೋಟೋ ಸಹ ಥೈಲ್ಯಾಂಡ್‌ನ ಫನೋಮ್ ರಂಗ್ ದೇವಸ್ಥಾನಕ್ಕೆ ಸಂಬಂಧಿಸಿದೆ. ಫನೋಮ್ ರಂಗ್ ದೇವಾಲಯದ ಬ್ಲಾಗ್ ಲೇಖನದಲ್ಲಿ ಇದೇ ರೀತಿಯ ಫೋಟೋವನ್ನು ಕಾಣಬಹುದು. ದೇವಾಲಯದಲ್ಲಿ ಅನೇಕ ಬಾಗಿಲುಗಳಿದ್ದು, ಬಾಗಿಲುಗಳ ವಿನ್ಯಾಸದಲ್ಲಿನ ಸಾಮ್ಯತೆಗಳನ್ನು ಎರಡೂ ಫೋಟೋಗಳಲ್ಲಿ ಕಾಣಬಹುದು.

ಫನೋಮ್ ರಂಗ್ ದೇವಸ್ಥಾನದಲ್ಲಿನ ಇದೇ ರೀತಿಯ ಬಾಗಿಲುಗಳನ್ನು ಗೂಗಲ್ ಸ್ಟ್ರೀಟ್ ವ್ಯೂನಲ್ಲಿ  ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್ ಮಾಡಲಾದ ಯಾವುದೇ ಫೋಟೋಗಳು ಒರಿಸ್ಸಾದ (ಭಾರತ) ಕೊನಾರ್ಕ್ ದೇವಸ್ಥಾನಕ್ಕೆ ಸಂಬಂಧಿಸಿಲ್ಲ.

Share.

Comments are closed.

scroll