Fake News - Kannada
 

ನರೇಂದ್ರ ಮೋದಿ ಅವರು ಟ್ಯಾಕ್ಸಿಯಲ್ಲಿ ತೆರಳಿ ಪೋಪ್‌ ಫ್ರಾನ್ಸಿಸ್‌ ರವರನ್ನು ಭೇಟಿಯಾಗಿರುವ ಚಿತ್ರಗಳು ಎಡಿಟ್ ಮಾಡಿದವುಗಳಾಗಿವೆ

0

ಪ್ರಧಾನಿ ನರೇಂದ್ರ ಮೋದಿ ಅವರು ಟ್ಯಾಕ್ಸಿಯಲ್ಲಿ ತೆರಳಿ ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳುವ ಪೋಸ್ಟ್‌ ಹಾಗೂ ಚಿತ್ರಗಳ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. G20 ಶೃಂಗಸಭೆಯಲ್ಲಿ ಭಾಗವಹಿಸಲು ರೋಮ್‌ಗೆ ತೆರಳಿದ್ದ ನರೇಂದ್ರ ಮೋದಿ ಅವರು 30 ಅಕ್ಟೋಬರ್‌ 2021ರಂದು ವ್ಯಾಟಿಕನ್‌ನಲ್ಲಿ ಪೋಪ್‌ ಫ್ರಾನ್ಸಿಸ್‌ ಭೇಟಿಯಾಗಿದ್ದರು. ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೇ ಸತ್ಯವೇ ಎಂಬುದನ್ನು ನಾವು ಪರಿಶೀಲಿಸೋಣ.

ಪ್ರತಿಪಾದನೆ: ಪ್ರಧಾನಿ ಮೋದಿ ಅವರು ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿ ಮಾಡಲು ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ ಚಿತ್ರಗಳು.

ನಿಜಾಂಶ: ಪ್ರಧಾನಿ ಮೋದಿ ಪೋಪ್‌ ಫ್ರಾನ್ಸಿಸ್‌ ಅವರನ್ನು ಟ್ಯಾಕ್ಸಿಯಲ್ಲಿ ಬಂದು ಭೇಟಿ ಮಾಡಿದರು ಎಂದು ಕಾಣುವಂತೆ ಚಿತ್ರಗಳನ್ನು ಮಾರ್ಫ್‌ (ಎಡಿಟ್) ಮಾಡಲಾಗಿದೆ. ಚಿತ್ರದ ಮೇಲಿನ ಟ್ಯಾಕ್ಸಿ ನಾಮಫಲಕವನ್ನು ಸ್ಪಷ್ಟವಾಗಿ ಕಾಣಬಹುದಾಗಿದ್ದು ನಾಮಫಲಕವನ್ನು ಮೂಲ ಚಿತ್ರದ ಮೇಲೆ ಮಾರ್ಫ್‌ ಮಾಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು G20 ಶೃಂಗಸಭೆಗಾಗಿ ರೋಮ್‌ನಲ್ಲಿದ್ದರು. ಅವರು ಪೋಪ್ ಫ್ರಾನ್ಸಿಸ್ ಅವರನ್ನು 30 ಅಕ್ಟೋಬರ್ 2021 ರಂದು ವ್ಯಾಟಿಕನ್‌ನಲ್ಲಿ ಭೇಟಿಯಾದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಹಕ್ಕು ತಪ್ಪಾಗಿದೆ.

ಚಿತ್ರಗಳನ್ನು ರಿವರ್ಸ್‌ ಇಮೇಜ್‌ ಮಾಡಿ ಹುಡುಕಿದಾಗ, ಒಂದೇ ರೀತಿಯ ಚಿತ್ರಗಳು ಎಎನ್‌ಐ ಟ್ವಿಟ್‌ನಲ್ಲಿ ಕಂಡುಬಂದವು. ಪ್ರಧಾನಿ ನರೇಂದ್ರ ಮೋದಿ ಅವರು ಪೋಪ್‌ ಫ್ರಾನ್ಸಿಸ್‌ ಅವರನ್ನು ಭೇಟಿ ಮಾಡಿದ್ದರ ಭಾಗವಾಗಿ ಚಿತ್ರಗಳನ್ನು ಕ್ಲಿಕ್‌ ಮಾಡಲಾಗಿದೆ ಎಂದು ಟ್ವಿಟ್‌ಗಳು ದೃಢಪಡಿಸಿವೆ. ಆದರೆ ಪೋಸ್ಟ್ ಗಳಲ್ಲಿರುವ ಚಿತ್ರಗಳು ಒಂದೇ ಆಗಿಲ್ಲ. ಎಎನ್‌ಐ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವೀಡಿಯೋ ಕೂಡ ದೊರೆತಿದ್ದು, ಪೋಸ್ಟ್‌ನಲ್ಲಿರುವ ಚಿತ್ರಗಳು ವೀಡಿಯೋದಲ್ಲಿನ ಫ್ರೇಮ್‌ಗಳಿಗಿಂತ ಭಿನ್ನವಾಗಿವೆ.

ಚಿತ್ರದ ಮೇಲಿನ ಟ್ಯಾಕ್ಸಿ ನಾಮಫಲಕವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಎಎನ್‌ಐನ ಮೂಲ ಚಿತ್ರದ ಮೇಲೆ ಈ ನಾಮಫಲಕವನ್ನು ಮಾರ್ಫ್‌ ಮಾಡಿರುವುದು ಗೋಚರಿಸುತ್ತದೆ. ಉಳಿದ ಚಿತ್ರಗಳೊಂದಿಗೆ ಹೋಲಿಸಿದಾಗ ಕಾರಿನ ಮೇಲಿರುವ ‘ಟ್ಯಾಕ್ಸಿ’ ಪ್ಲೇಟ್‌ ಹೆಚ್ಚು ಹೊಳೆಯುವುದು ಕಾಣುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು G20 ಶೃಂಗಸಭೆಗಾಗಿ ರೋಮ್‌ನಲ್ಲಿದ್ದರು.  ಪೋಪ್ ಫ್ರಾನ್ಸಿಸ್ ಅವರನ್ನು 30 ಅಕ್ಟೋಬರ್ 2021 ರಂದು ವ್ಯಾಟಿಕನ್‌ನಲ್ಲಿ ಭೇಟಿಯಾದ ಮೋದಿ, ಭಾರತಕ್ಕೆ ಭೇಟಿ ನೀಡುವಂತೆ ಪೋಪ್ ಫ್ರಾನ್ಸಿಸ್ ಅವರನ್ನು  ಆಹ್ವಾನಿಸಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿ ಅವರು ಟ್ಯಾಕ್ಸಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡುತ್ತಿರುವ ಚಿತ್ರಗಳನ್ನು ಎಡಿಟ್ ಮಾಡಲಾಗಿದೆ.

Share.

About Author

Comments are closed.

scroll