ಉಕ್ರೇನ್ ಮೇಲೆ ನಡೆಯುತ್ತಿರುವ ರಷ್ಯಾದ ಮಿಲಿಟರಿ ದಾಳಿಯ ಹಿನ್ನೆಲೆಯಲ್ಲಿ, ಕುತುಬ್ ಮಿನಾರ್ ಮೇಲೆ ರಷ್ಯಾ ರಾಷ್ಟ್ರ ಧ್ವಜದ ಲೇಸರ್ ಬೆಳಕಿನ ದೀಪವನ್ನು ಬೆಳಗಿಸಲಾಗಿದೆ ಎಂದು ರಷ್ಯಾದ ದ್ವಜದ ಫೋಟೋಗಳನ್ನು ಹಂಚಿಕೊಳ್ಳುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಪ್ರತಿಪಾದನೆ: ಕುತುಬ್ ಮಿನಾರ್‌ನ ಮೇಲೆ ರಷ್ಯಾದ ರಾಷ್ಟ್ರೀಯ ಧ್ವಜದ ಲೇಸರ್ ಬೆಳಕಿನ ದೀಪವನ್ನು ಬಣ್ಣಗಳಲ್ಲಿ ಅಲಂಕರಿಸಲಾಗಿದೆ.
ನಿಜಾಂಶ: ಕುತುಬ್ ಮಿನಾರ್ ಅನ್ನು ‘ಆಜಾದಿ ಕಾ ಅಮೃತ್ ಮಹೋತ್ಸವ’ ಮತ್ತು ‘ಜನ್ ಔಷಧಿ’ ಎಂಬ ವಿಷಯದ ಮೇಲೆ ಜನೌಷಧಿ ದಿವಸ್’ ಗೌರವಾರ್ಥವಾಗಿ ಅಲಂಕರಿಸಲಾಗಿತ್ತು. ಕುತುಬ್ ಮಿನಾರ್‌ನ ಫೋಟೋಗಳು ‘ಆಜಾದಿ ಕಾ ಅಮೃತ್ ಮಹೋತ್ಸವ’ ಮತ್ತು ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ’ ಎಂದು ಸ್ಪಷ್ಟವಾಗಿ ಹೇಳುತ್ತವೆ. ಅಲ್ಲಿ ಬೆಳಗಿಸಲಾಗಿರುವ ದೀಪದ ಅಲಂಕಾರಕ್ಕೂ ರಷ್ಯಾ ದ್ವಜಕ್ಕೂ ಯಾವುದೇ ಸಂಬಂಧವಿಲ್ಲ. ರಷ್ಯಾವನ್ನು ಬೆಂಬಲಿಸಲು ಅದನ್ನು ಅಲಂಕರಿಸಲಾಗಿದೆ ಎಂಬ ಹೇಳಿಕೆಯನ್ನು ಪಿಐಬಿ ನಿರಾಕರಿಸಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮೂಲಕ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
ಚೀನಾದ ಪ್ರಮುಖ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ಮಾರ್ಚ್ 07 ರಂದು ಪ್ರಕಟಿಸಿದ ಲೇಖನದ ಪ್ರಕಾರ ಭಾರತ ಸರ್ಕಾರವು ಕುತುಬ್ ಮಿನಾರ್ ಅನ್ನು ರಷ್ಯಾದ ರಾಷ್ಟ್ರೀಯ ಧ್ವಜದ ಬಣ್ಣಗಳಲ್ಲಿ ಬೆಳಗಿಸಲಾಗಿದೆ ಎಂದು ಚೀನಾ ನ್ಯೂಸ್ ಏಜೆನ್ಸಿ ಈ ಸುದ್ದಿಯನ್ನು ಪ್ರಕಟಿಸುತ್ತಿದ್ದಂತೆ, ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ವಾಸ್ತವವಾಗಿ ಕುತುಬ್ ಮಿನಾರ್‌ನ ಬಣ್ಣಗಳು ರಷ್ಯಾದ ರಾಷ್ಟ್ರೀಯ ಧ್ವಜದ ಬಣ್ಣಗಳಿಗೆ ಹೋಲುತ್ತವೆಯಾದರೂ, ಕುತುಬ್ ಮಿನಾರ್ ಅನ್ನು ಜನ ಔಷಧ ದಿನದ ಗೌರವಾರ್ಥವಾಗಿ ಆ ಬಣ್ಣಗಳಲ್ಲಿ ಅಲಂಕರಿಸಲಾಗಿತ್ತು ಮತ್ತು ರಷ್ಯಾವನ್ನು ಬೆಂಬಲಿಸುವುದಕ್ಕಾಗಿ ಅಲ್ಲ. ಪೋಸ್ಟ್‌ನಲ್ಲಿ ಹಂಚಿಕೊಂಡ ಫೋಟೋಗಳಲ್ಲಿ, ‘ಆಜಾದಿ ಕಾ ಅಮೃತ್ ಮಹೋತ್ಸವ’ ಮತ್ತು ‘ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆ’ ಎಂಬ ಪದಗಳೊಂದಿಗೆ ಕುತುಬ್ ಮಿನಾರ್ ಅನ್ನು ನೀವು ಸ್ಪಷ್ಟವಾಗಿ ನೋಡಬಹುದು.

ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳನ್ನು ನೀಡಲು ಕೇಂದ್ರ ಸರ್ಕಾರ ‘ಪ್ರಧಾನಿ ಭಾರತೀಯ ಜನೌಷಧ ಯೋಜನೆ’ ಎಂಬ ಯೋಜನೆ ಆರಂಭಿಸಿದೆ. ಜನೌಷಧಿಯ ಪ್ರಯೋಜನಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್ 07 ರಂದು ‘ಜನೌಷಧಿ ದಿವಸ್’ ಆಚರಿಸಲು ನಿರ್ಧರಿಸಲಾಗಿದೆ. ಈ ವರ್ಷ ಮಾರ್ಚ್ 01 ರಿಂದ ಮಾರ್ಚ್ 07 ರವರೆಗೆ ಆಚರಣೆಗಳು ನಡೆದಿತ್ತು. ಇದರ ಭಾಗವಾಗಿ, ಕುತುಬ್ ಮಿನಾರ್ ಅನ್ನು ‘ಆಜಾದಿ ಕಾ ಅಮೃತ್ ಮಹೋತ್ಸವ’ ಮತ್ತು ‘ಜನ್ ಔಷಧಿ’ ಘೋಷಣೆಯೊಂದಿಗೆ ಅಲಂಕರಿಸಲಾಗಿತ್ತು.
ಕುತುಬ್ ಮಿನಾರ್ ಅನ್ನು ಅಲಂಕರಿಸಿದ ಫೋಟೋಗಳನ್ನು ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಮತ್ತು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಜನೌಷಧಿ ದಿನದ ಅಂಗವಾಗಿ ರಷ್ಯಾವನ್ನು ಬೆಂಬಲಿಸಿ ಕುತುಬ್ ಮಿನಾರ್‌ನ ಫೋಟೋಗಳನ್ನು ಅಲಂಕರಿಸಲಾಗಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಹಂಚಿಕೊಳ್ಳಲಾಗುತ್ತಿದೆ ಎಂದು ಪಿಐಬಿ ಹೇಳಿದೆ. ಇದೇ ವಿಷಯವನ್ನು ಸರ್ಕಾರಿ ಫ್ಯಾಕ್ಟ್‌ಚೆಕ್ ಸಂಸ್ಥೆ ಪಿಐಬಿ ದೃಢಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಕುತುಬ್ ಮಿನಾರ್ ಅನ್ನು ಜನೌಷಧಿ ದಿನದ ಗೌರವಾರ್ಥವಾಗಿ ಅಲಂಕರಿಸಲಾಯಿತು, ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿರುವ ಪೋಸ್ಟ್‌ನಂತೆ ರಷ್ಯಾದ ಬೆಂಬಲಕ್ಕಾಗಿ ಅಲ್ಲ ಎಂದು ಫ್ಯಾಕ್ಟ್‌ಚೆಕ್ ಮೂಲಕ ಖಚಿತವಾಗಿದೆ.