Fake News - Kannada
 

ಪಾಕಿಸ್ತಾನದ ಸಂಸತ್‌ ನಲ್ಲಿ ಮೋದಿ ಜಿಂದಾಬಾದ್‌ ಎಂದು ಘೋಷಣೆ ಕೂಗಿಲ್ಲ

0

ಉಕ್ರೇನ್‌ನಿಂದ ನಾಗರಿಕರನ್ನು ಸ್ಥಳಾಂತರಿಸುವಲ್ಲಿ ಭಾರತ ಉತ್ತಮ ಸಾಧನೆ ಮತ್ತು ಜವಾಬ್ದಾರಿಯಿಂದ ನಡೆದುಕೊಂಡಿದೆ ಹಾಗೂ  ಪಾಕಿಸ್ತಾನ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವಲ್ಲಿ ವಿಫಲವಾಗಿದೆ ಎಂದು ಹೇಳುತ್ತ ಭಾರತದ ಈ ಸಾಧನೆಯನ್ನು ಮೆಚ್ಚಿ ಪಾಕಿಸ್ತಾನ ಸಂಸತ್ತಿನಲ್ಲಿ ‘ಮೋದಿ ಜಿಂದಾಬಾದ್’ ಘೋಷಣೆಗಳನ್ನು ಘೋಷಣೆಯನ್ನು ಕೂಗಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪಾಕಿಸ್ಥಾನದಲ್ಲಿ ಮೋದಿ ಪರ ಘೋಷಣೆಗಳನ್ನು ನಿಜವಾಗಿಯೂ ಕೂಗಲಾಗಿದೆಯೇ ಎಂದು ಪರಿಶೀಲಿಸೋಣ.

ಪ್ರತಿಪಾದನೆ: ಉಕ್ರೇನ್‌ನಲ್ಲಿ ಭಾರತದ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಶ್ಲಾಘಿಸಿ ಪಾಕಿಸ್ತಾನ ಸಂಸತ್ತಿನಲ್ಲಿ ‘ಮೋದಿ ಜಿಂದಾಬಾದ್’ ಘೋಷಣೆಗಳ ವೀಡಿಯೊ.

ನಿಜಾಂಶ: ಈ ವೀಡಿಯೊ ಹಳೆಯದು. ಇದನ್ನು 26 ಅಕ್ಟೋಬರ್ 2020 ರಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ (ಪಾಕಿಸ್ತಾನ) ತೆಗೆದುಕೊಳ್ಳಲಾಗಿದೆ. ಆದ್ದರಿಂದ, ಇದು ಉಕ್ರೇನ್‌ನಲ್ಲಿನ ಯಾವುದೇ ಇತ್ತೀಚಿನ ಸ್ಥಳಾಂತರಿಸುವ ಪ್ರಯತ್ನಗಳಿಗೆ ಸಂಬಂಧಿಸಿಲ್ಲ. ಅಲ್ಲದೆ, ವೀಡಿಯೊದಲ್ಲಿರುವ ಜನರು ‘ಮೋದಿ ಜಿಂದಾಬಾದ್’ಎಂದು ಘೋಷಣೆ ಕೂಗಿಲ್ಲ ಪಾಕಿಸ್ತಾನದ ಸಂಸತ್‌ನಲ್ಲಿ ಒಂದು ಮಸೂದೆಯ ಬಗ್ಗೆ ಚರ್ಚೆ ನಡೆಯುವ ವೇಳೆ ‘ಮತದಾನ…ಮತದಾನ…”ಎಂದು ಕೂಗುತ್ತಿದ್ದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೈರಲ್‌ ಆಗುತ್ತಿರುವ ಪೋಸ್ಟ್ ನ ವೀಡಿಯೊವನ್ನು ಗೂಗಲ್‌ ಸರ್ಚ್‌ ಮಾಡಲಾಗಿದ್ದು, ವೀಡಿಯೊದ ವಿಸ್ತೃತ ಆವೃತ್ತಿಯು 2020 ರ ಅಕ್ಟೋಬರ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ. “ಶಾ ಮೆಹಮೂದ್ ಖುರೇಷಿ ಫ್ರಾನ್ಸ್ ಇಸ್ಲಾಮೋಫೋಬಿಯಾದ ವಿರುದ್ಧ ಕಠಿಣ ಭಾಷಣ”ಎಂಬ ಶೀರ್ಷಿಕೆಯೊಂದಿಗೆ  YouTube ವೀಡಿಯೊದಲ್ಲಿ ಖುರೇಷಿಯವರು ಪಾಕಿಸ್ತಾನದ ಸಂಸತ್‌ ನಲ್ಲಿ ಸುದೀರ್ಘವಾಗಿ ಮಾತನಾಡಿರುವ ವಿಡಿಯೊ ಇದಾಗಿದೆ. ಆದರೆ ವೈರಲ್ ಪೋಸ್ಟ್‌ ನಲ್ಲಿ ಮಾಡಿದ ವೀಡಿಯೊ ಕ್ಲಿಪ್ ಅನ್ನು 35 ಸೆಕೆಂಡುಗಳ ಅವಧಿಯಲ್ಲಿ ನೋಡಬಹುದು. ಹಾಗಾಗಿ, ಉಕ್ರೇನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳ ಪ್ರಸ್ತುತ ಸ್ಥಳಾಂತರಿಸುವ ಪ್ರಯತ್ನಗಳಿಗೆ ಹಳೆಯ ವೀಡಿಯೊವನ್ನು ಎಡಿಟ್‌ ಮಾಡುವ ಮೂಲಕ ತಪ್ಪಾಗಿ ಲಿಂಕ್ ಮಾಡಲಾಗುತ್ತಿದೆ.

ಫ್ರೆಂಚ್ ವಿಡಂಬನಾತ್ಮಕ ನಿಯತಕಾಲಿಕ ಚಾರ್ಲಿ ಹೆಬ್ಡೊ ನಡೆಸಿದ “ಧರ್ಮನಿಂದೆಯ” ವ್ಯಂಗ್ಯಚಿತ್ರ ಮತ್ತು ಇತ್ತೀಚೆಗೆ ಮಾಡಿದ ಟೀಕೆಗಳ ವಿರುದ್ಧ ಪಾಕ್ ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು. ಈವೇಳೆ ವೋಟಿಂಗ್ ವೋಟಿಂಗ್ (ಮತದಾನ ಮತದಾನ) ಎಂದು ಸದಸ್ಯರು ಕೂಗಿದ್ದಾರೆ ಎಂದು ‘ಡಾನ್ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಮತದಾನ ಎಂದು ಘೋಷಣೆ ಕೂಗುತ್ತಿದ ವಿರೋಧ ಪಕ್ಷದ ಸದಸ್ಯರಿಗೆ ಸ್ಪೀಕರ್ ಅವರು ಸಮಾಧಾನ ಪಡಿಸುತ್ತಿರುವುದನ್ನು ಪೂರ್ಣ ವೀಡಿಯೊದಲ್ಲಿ ಗಮನಿಬಹುದು. “ವೋಟಿಂಗ್ …ಸಬ್ ಕುಚ್ ಹೋಗಾ… ಸಬ್ ರಖೇ ಆಪ್” (ಅನುವಾದ – “ಮತದಾನ…ಎಲ್ಲವೂ ನಡೆಯುತ್ತದೆ…ತಾಳ್ಮೆಯಿಂದಿರಿ”) ಎಂದು ಹೇಳುವುದನ್ನು ಕಾಣಬಹುದು. ಪೋಸ್ಟ್ ಮಾಡಿದ ವೀಡಿಯೊದ ಕುರಿತು ಹೆಚ್ಚಿನ ಮಾಹಿತಿಗಾಗಿ, ರಾಷ್ಟ್ರೀಯ ಅಸೆಂಬ್ಲಿಯ (26 ಅಕ್ಟೋಬರ್ 2020) ಚರ್ಚೆಯ ದಾಖಲೆಯನ್ನು ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಉಕ್ರೇನ್‌ನಲ್ಲಿ ಭಾರತದ ತೆರವು ಪ್ರಯತ್ನಗಳನ್ನು ಶ್ಲಾಘಿಸಿ ಪಾಕಿಸ್ತಾನ ಸಂಸತ್ತಿನಲ್ಲಿ ‘ಮೋದಿ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿಲ್ಲ ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.

Share.

Comments are closed.

scroll