Fake News - Kannada
 

ರೈತರ ಹೋರಾಟದಲ್ಲಿ ನಕಲಿ ಸಿಖ್‌ನನ್ನು ಪೊಲೀಸರು ಹಿಡಿದಿದ್ದಾರೆ ಎಂದು ಹಳೆಯ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

0

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪೊಲೀಸರು ನಕಲಿ ಸಿಖ್‌ನನ್ನು ಹಿಡಿದಿದ್ದಾರೆ ಎಂಬ ಹೇಳಿಕೆಯೊಂದಿಗೆ, “ಸಿಖ್ ವ್ಯಕ್ತಿಯೊಬ್ಬನ ಪೇಟವನ್ನು ಪೊಲೀಸರು ಬಲವಂತವಾಗಿ ತೆಗೆಯುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಲೇಖನದ ಮೂಲಕ ಪೋಸ್ಟ್‌ನಲ್ಲಿ ಮಾಡಿದ ಹಕ್ಕನ್ನು ಪರಿಶೀಲಿಸೋಣ.

ಈ ಪೋಸ್ಟ್‌ನ ಆರ್ಕೈವ್ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ: ರೈತರ ಹೋರಾಟದಲ್ಲಿ ನಕಲಿ ಸಿಖ್‌ನನ್ನು ಪೊಲೀಸರು ಹಿಡಿದಿದ್ದಾರೆ.

ಸತ್ಯಾಂಶ: 2011 ರಲ್ಲಿ ಜಿಲ್ಲಾ ಪರಿಷತ್ ಪಶುವೈದ್ಯಕೀಯ ನೌಕರರು ತಮ್ಮ ಉದ್ಯೋಗಗಳನ್ನು ವ್ಯವಸ್ಥಿತಗೊಳಿಸುವಂತೆ ಒತ್ತಾಯಿಸುತ್ತಿರುವ ಘಟನೆಯನ್ನು ವೀಡಿಯೊದಲ್ಲಿ ಕಾಣಬಹುದು. ಪ್ರತಿಭಟನೆಯ ಸಮಯದಲ್ಲಿ, ಒಂದೆರಡು ಪೊಲೀಸರು ಸಿಖ್ ಪ್ರತಿಭಟನಾಕಾರರ ಪೇಟವನ್ನು ಬಲವಂತವಾಗಿ ತೆಗೆದಿದ್ದರು. ಈ ಘಟನೆಯನ್ನು ವರದಿ ಮಾಡಿದ ಹಲವು ಲೇಖನಗಳನ್ನು ಕಾಣಬಹುದು. ಹಾಗಾಗಿ ಈ ಘಟನೆಗೂ, ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಹಕ್ಕು ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳ ಮೂಲಕ ರಿವರ್ಸ್‌ ಇಮೇಜ್ ಹುಡುಕಾಟ ನಡೆಸಿದಾಗ, 2011 ರ ಯೂಟ್ಯೂಬ್ ವೀಡಿಯೊ ಪತ್ತೆಯಾಯಿತು. ಆ ವೀಡಿಯೋದಲ್ಲಿಯೂ ಈ ಪೋಸ್ಟ್‌ನಲ್ಲಿರುವ ದೃಶ್ಯಗಳನ್ನು ಕಾಣಬಹುದು. ವೀಡಿಯೋದ ಶೀರ್ಷಿಕೆಯಲ್ಲಿ “ಪಂಜಾಬ್ ಪೊಲೀಸ್ ಅಧಿಕಾರಿಯಿಂದ ಟರ್ಬನ್‌ಗೆ ಅವಮಾನ (ಸಿಖ್ ಸಂಕೇತ) @ಮೊಹಾಲಿ ಕ್ರೀಡಾಂಗಣ” ಎಂದು ಬರೆದಿದೆ.

ಈ ಯೂಟ್ಯೂಬ್ ವೀಡಿಯೊದಿಂದ ಕ್ಯೂ ತೆಗೆದುಕೊಂಡು, ಸಂಬಂಧಿತ ಕೀವರ್ಡ್ಸ್‌ಗಳೊಂದಿಗೆ ಗೂಗಲ್ ಹುಡುಕಾಟ ನಡೆಸಿದಾಗ, ಈ ಘಟನೆಯನ್ನು ವರದಿ ಮಾಡಿದ ಕೆಲವು ಸುದ್ದಿ ಲೇಖನಗಳು ಕಂಡುಬಂದವು. ಇದರಲ್ಲಿನ ಒಂದು ಲೇಖನದ ಪ್ರಕಾರ, “ತಮ್ಮ ಉದ್ಯೋಗಗಳನ್ನು ವ್ಯವಸ್ಥಿತಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಪರಿಷತ್ ಪಶುವೈದ್ಯಕೀಯ ನೌಕರರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ, ಇಬ್ಬರು ಪೊಲೀಸರು ಪ್ರತಿಭಟನಾಕಾರನೊಬ್ಬನ ಪೇಟವನ್ನು ಬಲವಂತವಾಗಿ ತೆಗೆದುಹಾಕಿದ್ದಾರೆ” ಎಂದು ವರದಿಯಾಗಿದೆ. ಮತ್ತೊಂದು ಲೇಖನದ ಪ್ರಕಾರ, “ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ” ಎಂದು ವರದಿಯಾಗಿದೆ.

ಈ ಎಲ್ಲಾ ವರದಿಗಳಿಂದ ವೀಡಿಯೊದಲ್ಲಿರುವ ವ್ಯಕ್ತಿ ನಿಜಕ್ಕೂ ಸಿಖ್ ಎಂದು ನಾವು ತೀರ್ಮಾನಿಸಬಹುದು. ಜೊತೆಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೂ ವೀಡಿಯೊಗೂ ಯಾವುದೇ ಸಂಬಂಧವಿಲ್ಲ.

ಇದೇ ವೀಡಿಯೊವನ್ನು ಸಿಎಎ ಪ್ರತಿಭಟನೆಗಳಿಗೆ ಲಿಂಕ್ ಮಾಡುವ ಮೂಲಕ ವೈರಲ್ ಆಗಿತ್ತು. ಆಗ ಫ್ಯಾಕ್ಟ್ಲಿ ಈ ಪ್ರತಿಪಾದನೆಯನ್ನು ತಪ್ಪೆಂದು ನಿರೂಪಿಸಿತ್ತು. ಆ ಫ್ಯಾಕ್ಟ್-ಚೆಕ್ ಲೇಖನವನ್ನು ಇಲ್ಲಿ ಓದಬಹುದು.

ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಈ ರೀತಿಯ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದಾರಿತಪ್ಪಿಸುವ ಪ್ರತಿಪಾದನೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll