ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯ ನಡುವೆ (ಇಲ್ಲಿ, ಇಲ್ಲಿ), ಜನರು ರಸ್ತೆಯಲ್ಲಿ ಮಂಡಿಯೂರಿ ನಮಾಜ್ (ಪ್ರಾರ್ಥನೆ) ಮಾಡುತ್ತಿರುವಂತೆ ತೋರಿಸುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಬಾಂಗ್ಲಾದೇಶದ ಹಿಂದೂಗಳನ್ನು ಒತ್ತೆಯಾಳಾಗಿ ಇರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳ್ಳಲು ಹೇಳಿದ್ದಾರೆ ಎಂದು ಕ್ಲೇಮ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಕೆಲ ವ್ಯಕ್ತಿಗಳು ಪ್ರಾರ್ಥನೆ ಸಲ್ಲಿಸುತ್ತಿರುವವರ ಸುತ್ತಲೂ ಕೋಲು ಹಿಡಿದು ನಿಂತಿರುವಂತೆ ವೀಡಿಯೊ ತೋರಿಸುತ್ತದೆ. ಹಾಗಾದರೆ ಈ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: 2024 ರ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಯ ಮದ್ಯೆ ಅಲ್ಲಿನ ಹಿಂದೂಗಳನ್ನು ಒತ್ತೆಯಾಳಾಗಿ ಇರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳ್ಳುವ ದೃಶ್ಯಗಳನ್ನು ತೋರಿಸುವ ವೀಡಿಯೊ.
ಫ್ಯಾಕ್ಟ್: ಕೋಟಾ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಬಾಂಗ್ಲಾದೇಶದ ಢಾಕಾದ ರಸ್ತೆಯೊಂದರಲ್ಲಿ ಪ್ರತಿಭಟನಾಕಾರರು ನಮಾಜ್ ಮಾಡುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ. ವರದಿಗಳ ಪ್ರಕಾರ, ಜುಲೈ 16, 2024 ರಂದು, ವಿವಿಧ ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಬಾಂಗ್ಲಾದೇಶದ ಮೀಸಲಾತಿ ವ್ಯವಸ್ಥೆಯ ವಿರುದ್ಧ ಢಾಕಾದ ಬಶುಂಧರಾ ಗೇಟ್‌ನ ಮುಂದೆ ರಸ್ತೆಯನ್ನು ತಡೆದು ಪ್ರತಿಭಟಿಸಿದರು. ಈ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಸ್ತೆಯಲ್ಲಿ ಝುಹರ್ ನಮಾಜ್ (ಮಧ್ಯಾಹ್ನ ಎರಡನೇ ಪ್ರಾರ್ಥನೆ) ಸಲ್ಲಿಸಿದರು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಜುಲೈ 2024 ರಲ್ಲಿ ಕೋಟಾ ವಿರೋಧಿ ಚಳುವಳಿಯಾಗಿ ಪ್ರಾರಂಭವಾದ ಮಾರಣಾಂತಿಕ ಪ್ರತಿಭಟನೆಗಳಿಗೆ ಬಾಂಗ್ಲಾದೇಶ ಸಾಕ್ಷಿಯಾಗಿದೆ. ಇತ್ತೀಚಿಗೆ, ಈ ಸಾಮೂಹಿಕ ಪ್ರತಿಭಟನೆಗಳು ಸರ್ಕಾರದ ವಿರೋಧಿ ದಂಗೆಯಾಗಿ ವಿಕಸನಗೊಂಡಿವೆ. ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪರಾರಿಯಾದಾಗ ಪರಿಸ್ಥಿತಿ ಮತ್ತಷ್ಟು ದ್ವಿಗುಣವಾಗಿತ್ತು. ಪ್ರತಿಭಟನಾಕಾರರು ಢಾಕಾದಲ್ಲಿನ ಪ್ರಧಾನಿಯ ಅಧಿಕೃತ ನಿವಾಸವನ್ನು ಬಲವಂತವಾಗಿ ಪ್ರವೇಶಿಸಿ, ಲೂಟಿ ಮಾಡಿ, ಧ್ವಂಸಗೊಳಿಸಿದರು (ಇಲ್ಲಿ ಮತ್ತು ಇಲ್ಲಿ).
ಅಲ್ಲಿನ ಕೆಲ ಮೊಬ್ಸ್ ಗುಂಪುಗಳು ಅಲ್ಪಸಂಖ್ಯಾತರ ಮನೆಗಳು ಮತ್ತು ವ್ಯವಹಾರಗಳ ಮೇಲೆ ದಾಳಿ ಮಾಡಿದೆ ಎಂದು ರೆಪೋರ್ಟ್ಗಳು ಹೇಳುತ್ತಿವೆ. ಅದರಲ್ಲೂ ವಿಶೇಷವಾಗಿ ಹಿಂದೂಗಳ ಬೆಲೆಬಾಳುವ ವಸ್ತುಗಳನ್ನು (ಇಲ್ಲಿ). ಹಿಂದೂಗಾಲ ಮನೆ ಮತ್ತು ದೇವಾಲಯಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದ ವರದಿಗಳೂ ಇವೆ (ಇಲ್ಲಿ).
ಇತ್ತೀಚಿನ ವರದಿಗಳ ಪ್ರಕಾರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ 09 ಆಗಸ್ಟ್ 2024 ಮತ್ತು ದೇಶದ ಇತರ ಭಾಗಗಳಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ 05 ಆಗಸ್ಟ್ 2024 ರಂದು ತೊರೆದು ಪಲಾಯನ ಮಾಡಿದ ನಂತರ ಅಲ್ಪಸಂಖ್ಯಾತ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂಸಾಚಾರದ ವಿರುದ್ಧ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ).
ಈ ವೈರಲ್ ವೀಡಿಯೊದ ಕುರಿತು ಹೆಚ್ಚಿನಮಾಹಿತಿಯನ್ನು ಪಡೆಯಲು, ನಾವು ಈ ಫೂಟೇಜ್ ನಲ್ಲಿನ ಕೆಲ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು 16 ಜುಲೈ 2024 ರಂದು ‘SOMOY TV ಬುಲೆಟಿನ್’ ಎಂಬ ಬಾಂಗ್ಲಾದೇಶದ ಮಾಧ್ಯಮ YouTube ನಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊದ ಮುಂದಿನ ವರ್ಷನ್ ಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೊದ ಕ್ಯಾಪ್ಶನ್ ನಲ್ಲಿ ಬಾಂಗ್ಲಾದೇಶದ ಢಾಕಾದ ಬಶುಂಧರಾದಲ್ಲಿ ಪ್ರತಿಭಟನಾ ನಿರತರಾದ ವಿದ್ಯಾರ್ಥಿಗಳು ತಮ್ಮ ಝುಹ್ರ್ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗಿದೆ (ಮುಸಲ್ಮಾನರ ದೈನಂದಿನ ಐದು ಪ್ರಾರ್ಥನೆಗಳಲ್ಲಿ ಒಂದಾದ ಪ್ರಾರ್ಥನೆ). ಝುರ್ ನಮಾಜ್ ಮಧ್ಯಾಹ್ನದ ಎರಡನೇ ಪ್ರಾರ್ಥನೆಯಾಗಿದ್ದು, ಬಾಂಗ್ಲಾದೇಶದ ಢಾಕಾದಲ್ಲಿ 16 ಜುಲೈ 2024 ರಂದು ಮೀಸಲಾತಿ ಆಂದೋಲನದ ಸಮಯದಲ್ಲಿ ವಿದ್ಯಾರ್ಥಿಗಳು ರಸ್ತೆಗಳಲ್ಲಿ ಝುಹ್ರ್ ನಮಾಜ್ ನೀಡುತ್ತಿರುವುದನ್ನು ದೃಶ್ಯಗಳು ತೋರಿಸುತ್ತವೆ ಎಂದು ಹೇಳುವ ಇದೇ ರೀತಿಯ ವೀಡಿಯೊಗಳನ್ನು ಇಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ಇಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನೋಡಬಹುದು.
ಸಂಬಂಧಿತ ಕೀವರ್ಡ್ ಹುಡುಕಾಟವು 16 ಜುಲೈ 2024 ರಂದು ಪ್ರಕಟವಾದ ವೈರಲ್ ವೀಡಿಯೊದ ಕೀಫ್ರೇಮ್ ಅನ್ನು ಒಳಗೊಂಡಿರುವ ಈ SomoyNews TV ರೆಪೋರ್ಟ್ಗೆ ನಮ್ಮನ್ನು ಕರೆದೊಯ್ಯಿತು. ವರದಿಯ ಪ್ರಕಾರ, ವಿವಿಧ ಖಾಸಗಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು 16 ಜುಲೈ 2024 ರಂದು ಬಾಂಗ್ಲಾದ ರಾಜಧಾನಿ ಢಾಕಾದ ಬಶುಂಧರಾ ಗೇಟ್‌ನ ಮುಂದೆ ರಸ್ತೆಯನ್ನು ತಡೆದು ಪ್ರತಿಭಟಿಸಿದರು. ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದ ನಂತರ, ಕೆಲವು ವಿದ್ಯಾರ್ಥಿಗಳು ಸಾಲಾಗಿ ಕುಳಿತು ಝುಹರ್ ನಮಾಜ್ ಮಾಡಿದರು, ಆದರೆ ಅಲ್ಲೇ ಇದ್ದ ಇನ್ನುಳಿದ ಕೆಲ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರೆಸಿದರು.
ಢಾಕಾ ಪ್ರೆಸ್, ಪ್ರೊಬಶಿರ್ದಿಗಂತ ಮತ್ತು ಬಾಂಗ್ಲಾದೇಶ ಮೊಮೆಂಟ್ಸ್ ವರದಿಗಳ ಪ್ರಕಾರ 16 ಜುಲೈ 2024ರ ವೈರಲ್ ವೀಡಿಯೊದಲ್ಲಿನ ದೃಶ್ಯಗಳು 16 ಜುಲೈ 2024 ರಂದು ಢಾಕಾದ ಬಶುಂಧರಾ ಗೇಟ್‌ನಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜುಹ್ರ್ ನಮಾಜ್ (ಪ್ರಾರ್ಥನೆ) ಸಲ್ಲಿಸುವುದನ್ನು ತೋರಿಸುತ್ತದೆ ಎಂದು ಖಚಿತಪಡಿಸಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ರಸ್ತೆಯೊಂದರಲ್ಲಿ ಪ್ರತಿಭಟನಾಕಾರರು ನಮಾಜ್ ಮಾಡುವ ವೀಡಿಯೊವನ್ನು ಕೋಮುವಾದದ ಸುಳ್ಳು ಆರೋಪದೊಂದಿಗೆ ಶೇರ್ ಮಾಡಲಾಗಿದೆ.