Fake News - Kannada
 

ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಜಾಗದಲ್ಲಿ ಯಾವುದೇ ಟೈಮ್ ಕ್ಯಾಪ್ಸುಲ್ ಹೂಳಲಾಗಿಲ್ಲ

0

ರಾಮಮಂದಿರದ ನಿರ್ಮಾಣದ ನಿವೇಶನದ ಜಾಗದಲ್ಲಿ 2 ಸಾವಿರ ಅಡಿ ಕೆಳಗೆಟೈಮ್ ಕ್ಯಾಪ್ಸುಲ್ ಅಳಲಾಗಿದೆ. ಅದು ರಾಮಮಂದಿರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಯನ್ನೂ ಒಳಗೊಂಡಿರುತ್ತದೆ. ಅಲ್ಲದೇ ಅದನ್ನು 2957 ನೇ ಇಸವಿಗೆ ಮುಂಚೆ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂಬ ಸಂದೇಶವುಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಸ್ಥಳದಲ್ಲಿ 2000 ಅಡಿ ಕೆಳಗೆ ಟೈಮ್ ಕ್ಯಾಪ್ಸುಲ್ ಹೂಳಲಾಗಿದೆ.

ನಿಜಾಂಶ: ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ರವರ ಟ್ವೀಟ್ ಪ್ರಕಾರ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಜಾಗದಲ್ಲಿ ಯಾವುದೇ ಟೈಮ್ ಕ್ಯಾಪ್ಸುಲ್ ಹೂಳಲಾಗಿಲ್ಲ. ಅಲ್ಲದೇ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಚಿತ್ರವು ಅಮೆರಿಕದ ಪ್ರತಿಷ್ಠಿತ ಎಂಐಟಿ ವಿಶ್ವವಿದ್ಯಾಲಯದಲ್ಲಿ ಹೊಸಕಟ್ಟಡಕ್ಕೆ ಅಡಿಪಾಯ ಹಾಕುವಾಗ 2015 ರಲ್ಲಿ ಪತ್ತೆಯಾದ ಟೈಮ್ ಕ್ಯಾಪ್ಸುಲ್ ನ ಚಿತ್ರವಾಗಿದೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಟೈಮ್ ಕ್ಯಾಪ್ಸುಲ್  ಕುರಿತು ಹೆಚ್ಚಿನ ಮಾಹಿತಿಗೆ ಹುಡಕಾಟ ನಡೆಸಿದಾಗ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ರವರ ಟ್ವೀಟ್ ಕಂಡುಬಂದಿದೆ. ಅದರಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಸ್ಥಳದಲ್ಲಿ 2000 ಅಡಿ ಕೆಳಗೆ ಟೈಮ್ ಕ್ಯಾಪ್ಸುಲ್ ಹೂಳಲಾಗಿದೆ ಎಂಬುದು ಸುಳ್ಳುಸುದ್ದಿ ಎಂದು ತಿಳಿಸಿದ್ದಾರೆ. ಇದನ್ನೆಲ್ಲ ನಂಬಬೇಡಿ ಎಂದು ಅವರು ಸಲಹೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಲೇಖನ ಇಲ್ಲಿದೆ.

ಇನ್ನು ಪೋಸ್ಟ್‌ ನಲ್ಲಿನ ಟೈಮ್ ಕ್ಯಾಪ್ಸುಲ್  ಕುರಿತುಕ ಗೂಗಲ್‌ ನಲ್ಲಿ ರಿವರ್ಸ್‌ ಸರ್ಚ್ ಮಾಡಿದಾಗ 2015 ರಲ್ಲಿಅಮೆರಿಕದ ಪ್ರತಿಷ್ಠಿತ ಎಂಐಟಿ ವಿಶ್ವವಿದ್ಯಾಲಯದಲ್ಲಿ ಹೊಸಕಟ್ಟಡಕ್ಕೆ ಅಡಿಪಾಯ ಹಾಕುವಾಗ ಟೈಮ್ ಕ್ಯಾಪ್ಸುಲ್ ಒಂದು ಪತ್ತೆಯಾಗಿದೆ. ಟೈಮ್ ಕ್ಯಾಪ್ಸುಲ್ ಮೇಲೆ ಕ್ರಿ.ಶ 2957ರವರೆ ದಯವಿಟ್ಟು ತೆರೆಯಬೇಡಿ ಎಂದು ಬರೆಯಲಾಗಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಇಲ್ಲಿದೆ.

ಈ ಚಿತ್ರವನ್ನು ತೋರಿಸಿ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಸ್ಥಳದಲ್ಲಿ 2000 ಅಡಿ ಕೆಳಗೆ ಟೈಮ್ ಕ್ಯಾಪ್ಸುಲ್  ಹೂಳಲಾಗಿದೆ, ಅದನ್ನು 2957ಕ್ಕೆ ಮುಂಚೆ ಯಾವುದೇ ಕಾರಣಕ್ಕೂ ತೆರೆಯುವಂತಿಲ್ಲ ಎಂಬ ಸುಳ್ಳು ಸುದ್ದಿಯನ್ನು ಹರಡಲಾಗಿದೆ. ಹಾಗಾಗಿ ಈ ಟೈಮ್ ಕ್ಯಾಪ್ಸುಲ್ ನ ಚಿತ್ರಕ್ಕೂ ರಾಮಮಂದಿರಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಮತ್ತೊಬ್ಬ ಸದಸ್ಯರಾದ ಕಾಮೇಶ್ವರ್ ಚೌಪಲ್‌ ರವರು ಜುಲೈ 27ರಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ,  ರಾಮಮಂದಿರದ ನಿರ್ಮಾಣದ ನಿವೇಶನದ ಜಾಗದಲ್ಲಿ 2 ಸಾವಿರ ಅಡಿ ಕೆಳಗೆ ಟೈಮ್ ಕ್ಯಾಪ್ಸುಲ್ ಹೂಳಲಾಗುತ್ತದೆ ಎಂದು ಹೇಳಿದ್ದರು. ಅದರ ಸುದ್ದಿ ಮತ್ತು ವಿಡಿಯೋ ಇಲ್ಲಿ ನೋಡಬಹುದು. ಹಿನ್ನೆಲೆಯಲ್ಲಿ ಮೇಲಿನ ಮಂಡನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ನಾವೀಗ ವಿವರಿಸಿರುವಂತೆ  ಆ ಹೇಳಿಕೆ ಮತ್ತು ವಿಡಿಯೋವನ್ನು ಟ್ರಸ್ಟ್ನ ಅಧಿಕೃತ ಟ್ವಿಟ್ಟರ್ಹ್ಯಾಂಡಲ್ನಿಂದ ತೆಗೆದುಹಾಕಲಾಗಿದೆ.

ಒಟ್ಟಿನಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣ ಜಾಗದ ಅಡಿಯಲ್ಲಿ ಯಾವುದೇ ಟೈಮ್ ಕ್ಯಾಪ್ಸುಲ್ ಹೂಳಲಾಗಿಲ್ಲ ಎಂದು ಖಚಿತವಾಗಿ ಹೇಳಬಹುದಾಗಿದೆ.

Share.

About Author

Comments are closed.

scroll