ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕೆರೆಬಿಲ್ಚಿ ಎಂಬ ಹಳ್ಳಿಯಲ್ಲಿ ಒಬ್ಬನೇ ಒಬ್ಬ ಹಿಂದೂ ಇಲ್ಲ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದು ಎಷ್ಟರಮಟ್ಟಿಗೆ ಸತ್ಯ ಎಂಬುದನ್ನು ಈ ಲೇಖನದ ಮೂಲಕ ನೋಡೋಣ.
ಕ್ಲೇಮ್ : ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕೆರೆಬಿಳಚಿ ಗ್ರಾಮದಲ್ಲಿ ಹಿಂದೂಗಳೇ ಇಲ್ಲ, ಆ ಗ್ರಾಮದ ಎಲ್ಲ ಜನರು ಮುಸ್ಲಿಮರು.
ಫ್ಯಾಕ್ಟ್ : 2024 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಭಾರತದ ಚುನಾವಣಾ ಆಯೋಗವು ಕರ್ನಾಟಕದ ಕೆರೆಬಿಳಚಿ ಗ್ರಾಮ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ತಮ್ಮ ವೆಬ್‌ಸೈಟ್‌ನಲ್ಲಿ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿಡೇ. ಇದರ ಪ್ರಕಾರ ದಾವಣಗೆರೆ ಜಿಲ್ಲೆಯ ಕೆರೆಬಿಲ್ಚಿ ಗ್ರಾಮವು ಬಹುಸಂಖ್ಯಾ ಮುಸ್ಲಿಮರನ್ನು ಹೊಂದಿದೆ ಎಂಬುದು ಸ್ಪಷ್ಟವಾಗಿದೆ. ಹಾಗೆಯೇ ಇತರ ಧರ್ಮದವರು ಇದ್ದು, ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ತಿಳಿದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಹೇಳಿರುವುದು ತಪ್ಪಾಗಿದೆ.
2011 ರ ಭಾರತದ ಅಧಿಕೃತ ಜನಗಣತಿಯ ಪ್ರಕಾರ, ಕೆರೆಬಿಲ್ಚಿ ಗ್ರಾಮದ ಜನಸಂಖ್ಯೆ 9754 ಆಗಿದೆ. ಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಕೆರೆಬಿಳಚಿ ಗ್ರಾಮದಲ್ಲಿ ಹಿಂದೂಗಳಿದ್ದಾರೆಯೇ ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಲು ನಾವು ಮೊದಲು ಇತ್ತೀಚಿನ 2024 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಮತದಾರರ ಪಟ್ಟಿಗಳನ್ನು ಪರಿಶೀಲಿಸಿದ್ದೇವೆ ಮತ್ತು ಅದರಲ್ಲಿ ಮುಸ್ಲಿಮೇತರರ ಹೆಸರುಗಳೂ ಕೂಡ ಕಂಡುಬಂದಿವೆ.
ಅಲ್ಲದೆ, ಕರ್ನಾಟಕ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಾವು ಕೆರೆಬಿಲ್ಚ ಗ್ರಾಮದ ಪಡಿತರ ಚೀಟಿಗಳ (ರೇಷನ್ ಕಾರ್ಡ್‌ಗಳು) ವಿವರಗಳನ್ನು ಪರಿಶೀಲಿಸಿದಾಗ, ಅಲ್ಲಿ ಮುಸ್ಲಿಮೇತರ (ಹಿಂದೂಗಳು) ಹೆಸರುಗಳೂ ಕೂಡ ಕಂಡುಬಂದಿವೆ.
ತದನಂತರ ಈ ಜಿಲ್ಲೆಯ ಚನ್ನಗಿರಿಯಲ್ಲಿರುವ ಕೆರೆಬಿಲ್ಚಿ ಗ್ರಾಮಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ನೀಡಲಾದ ಜಾಬ್ ಕಾರ್ಡ್‌ಗಳನ್ನು (ಆರ್ಕೈವ್ ಮಾಡಿದ ಲಿಂಕ್) ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅವರ ವೆಬ್‌ಸೈಟ್‌ನಲ್ಲಿಹಂಚಿಕೊಂಡಿದೆ. ಇಲ್ಲಿ ಮುಸ್ಲಿಂಮರು ಸೇರಿದಂತೆ ಇತರ ಜಾತಿ-ಧರ್ಮದವರು ಇರುವುದನ್ನುಗಮನಿಸಿದೆವು (ಆರ್ಕೈವ್ ಮಾಡಿದ ಲಿಂಕ್). ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು ಮುಸಲ್ಮಾನರು ಎಂಬುದನ್ನು ಕಂಡುಕೊಂಡಿದ್ದೇವೆ.
ಒಟ್ಟಾರೆಯಾಗಿ ಹೇಳುವುದಾದರೆ, ದಾವಣಗೆರೆ ಜಿಲ್ಲೆಯ ಕೆರೆಬಿಲ್ಚಿ ಗ್ರಾಮದಲ್ಲಿ ಮುಸ್ಲಿಮರು ಮಾತ್ರವಲ್ಲ ಇತರ ಧರ್ಮದವರು ಇದ್ದಾರೆ ಎಂಬುವುದು ಸ್ಪಷ್ಟವಾಗಿದೆ.