Fake News - Kannada
 

‘ಜೈಲಿನಲ್ಲಿದ್ದ ಮಹಿಳೆ ಬನಾರಸ್ (ವಾರಣಾಸಿ) ನ ಬಂಧನ ಕೇಂದ್ರದಲ್ಲಿ ಬೇಲಿ ಮೂಲಕ ಮಗುವಿಗೆ ಹಾಲುಣಿಸುತ್ತಾಳೆ’ ಎಂದು ಹಳೆಯ ಚಿತ್ರವನ್ನು ಹಂಚಿಕೊಳ್ಳಲಾಗಿದೆ

0

ಜೈಲಿನಲ್ಲಿದ್ದ ಮಹಿಳೆಯೊಬ್ಬಳು ಬನಾರಸ್ (ವಾರಣಾಸಿ) ನ ಬಂಧನ ಕೇಂದ್ರವೊಂದರಲ್ಲಿ ಬೇಲಿಯ ಮೂಲಕ ಮಗುವಿಗೆ ಹಾಲುಣಿಸುತ್ತಿದ್ದಾಳೆ ಎಂಬ ಹೇಳಿಕೆಯೊಂದಿಗೆ ಫೋಟೋದೊಂದಿಗಿನ ಸ್ಕ್ರೀನ್ಶಾಟ್ ಅನ್ನು ಫೇಸ್ಬುಕ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಪೋಸ್ಟ್ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆಯಲ್ಲಿ: ಎನ್ಆರ್ಸಿ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಜೈಲಿನಲ್ಲಿದ್ದ ಮಹಿಳೆಯೊಬ್ಬಳು ಬನಾರಸ್ (ವಾರಣಾಸಿ) ನ ಬಂಧನ ಕೇಂದ್ರವೊಂದರಲ್ಲಿ ಬೇಲಿಯ ಮೂಲಕ ಮಗುವಿಗೆ ಹಾಲುಣಿಸುತ್ತಿದ್ದ ಮಹಿಳೆಯೊಬ್ಬಳ ಚಿತ್ರ .

ಸತ್ಯ: ಜನವರಿ 2013 ರಿಂದ ಈ ಚಿತ್ರವು ಅಂತರ್ಜಾಲದಲ್ಲಿದೆ. ಆದ್ದರಿಂದ, ಇದು ಯಾವುದೇ ರೀತಿಯಲ್ಲಿ ಎನ್ಆರ್ಸಿಗೆ ಸಂಪರ್ಕ ಹೊಂದಿಲ್ಲ. ಆದ್ದರಿಂದ, ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿರುವ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ತಂತ್ರಕ್ಕೆ ಒಳಪಡಿಸಿದಾಗ, ಅದೇ ಚಿತ್ರವನ್ನು ಹೊಂದಿರುವ ಫೇಸ್‌ಬುಕ್ ಪೋಸ್ಟ್ ಕಂಡುಬಂದಿದೆ. ಈ ಪೋಸ್ಟ್ ಅನ್ನು ಮೇ 2013 ರಲ್ಲಿ ವಿಭಿನ್ನ ಪ್ರತಿಪಾದನೆವೊಂದಿಗೆ  ಪೋಸ್ಟ್‌ಮಾಡಲಾಗಿದೆ. ಆ ಪೋಸ್ಟ್‌ನ ಕಾಮೆಂಟ್‌ಗಳ ವಿಭಾಗದಲ್ಲಿ, ಬಳಕೆದಾರರು ಸುದ್ದಿ ವೆಬ್‌ಸೈಟ್‌ನ ಲೇಖನವನ್ನು ಪೋಸ್ಟ್ ಮಾಡಿದ್ದಾರೆ. ಈ ಲೇಖನವನ್ನು ಜನವರಿ 13, 2013 ರಂದು ಪ್ರಕಟಿಸಲಾಯಿತು, ಮತ್ತು ಲೇಖನದ ಮಾಹಿತಿಯು ಚಿತ್ರವು ಅರ್ಜೆಂಟೀನಾದಿಂದ ಬಂದಿದೆ ಎಂದು ಸೂಚಿಸುತ್ತದೆ. ಚಿತ್ರವು ಅರ್ಜೆಂಟೀನಾದಿಂದ ಬಂದಿದೆಯೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ‘FACTLY’ ಗೆ ಸಾಧ್ಯವಾಗಲಿಲ್ಲ, ಏಕೆಂದರೆ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೆ, ಈ ಚಿತ್ರವು 2013 ರಿಂದ ಚಲಾವಣೆಯಲ್ಲಿರುವ ಕಾರಣ, ಭಾರತದಲ್ಲಿ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಪ್ರತಿಭಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತೀರ್ಮಾನಿಸಬಹುದು.

ತೀರ್ಮಾನಕ್ಕೆ, ಜನವರಿ 2013 ರಿಂದ ಈ ಚಿತ್ರವು ಅಂತರ್ಜಾಲದಲ್ಲಿದೆ. ಆದ್ದರಿಂದ, ಇದು ಯಾವುದೇ ರೀತಿಯಲ್ಲಿ ಎನ್ಆರ್ಸಿಗೆ ವಿರುದ್ಧ ಪ್ರತಿಭಟನೆಗೂ ಇದಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ .

Share.

About Author

Comments are closed.

scroll