Fake News - Kannada
 

ಪಶ್ಚಿಮ ಬಂಗಾಳದ ಹಳೆಯ ವೀಡಿಯೊವನ್ನು ಮುಂಬೈನ ರಸ್ತೆಯೊಂದರಲ್ಲಿ ಜನರು ಆಜಾನ್ ಪಠಿಸುವ ಇತ್ತೀಚಿನ ವೀಡಿಯೊ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಮುಂಬೈನಲ್ಲಿ ಆಝಾನ್ ಕೂಗಲು  ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡದ ಕಾರಣ ಜನರು ರಸ್ತೆಯಲ್ಲೆ ಆಜಾನ್ ಪಠಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ  ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಆಝಾನ್ ಮತ್ತು ಹನುಮಾನ್ ಚಾಳೀಸ್ ಸಂಘರ್ಷದ  ಸಂದರ್ಭದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಫೇಸ್‌ಬುಕ್‌ನಲ್ಲಿ ಬೇರೆ ಬೇರೆ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಮುಂಬೈನ ರಸ್ತೆಯೊಂದರಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡದ ಕಾರಣ ಜನರು ಆಜಾನ್ ಪಠಿಸುವ ಇತ್ತೀಚಿನ ವೀಡಿಯೊ.

ನಿಜಾಂಶ: ವೀಡಿಯೊ ಹಳೆಯದು. ಇದು ಕನಿಷ್ಠ ಏಪ್ರಿಲ್ 2020 ರಿಂದ ಇಂಟರ್ನೆಟ್‌ನಲ್ಲಿದೆ. ಅಲ್ಲದೆ, ವೀಡಿಯೊದಲ್ಲಿರುವ ಸೈನ್‌ಬೋರ್ಡ್‌ಗಳು ವೀಡಿಯೊವನ್ನು ಹೌರಾದಲ್ಲಿ (ಪಶ್ಚಿಮ ಬಂಗಾಳ) ಚಿತ್ರೀಕರಿಸಲಾಗಿದೆ ಎಂದು ತೋರಿಸುತ್ತದೆ, ಆದರೆ ಮುಂಬೈ (ಮಹಾರಾಷ್ಟ್ರ) ನಲ್ಲಿ ಅಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ, ಇದೇ ರೀತಿಯ ಅನೇಕ ವೀಡಿಯೊಗಳು ಕಂಡುಬಂದಿವೆ. ವೀಡಿಯೊಗಳು ಕನಿಷ್ಠ ಏಪ್ರಿಲ್ 2020 ರಿಂದ ಇಂಟರ್ನೆಟ್‌ನಲ್ಲಿರುವುದು ಕಂಡುಬಂದಿದೆ. ಕೆಲವು ಹಳೆಯ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಫೇಸ್‌ಬುಕ್ ಬಳಕೆದಾರರು 2020 ರಲ್ಲಿ ಅದೇ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಜನರು ರೋಗವನ್ನು ನಿವಾರಿಸಲು ಅಜಾನ್ ಪಠಿಸುವುದನ್ನು ವೀಡಿಯೊ ತೋರಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ. ಹಾಗಾಗಿ, ಪೋಸ್ಟ್ ಮಾಡಿದ ವೀಡಿಯೊ ಹಳೆಯದು.

ವೀಡಿಯೊದಲ್ಲಿನ ಬೋರ್ಡ್‌ಗಳಲ್ಲಿರುವ ಅಂಗಡಿ ವಿಳಾಸಗಳು ವೀಡಿಯೊವನ್ನು ಮುಂಬೈ (ಮಹಾರಾಷ್ಟ್ರ) ನಲ್ಲಿ ಅಲ್ಲ, ಹೌರಾದಲ್ಲಿ (ಪಶ್ಚಿಮ ಬಂಗಾಳ) ಚಿತ್ರೀಕರಿಸಲಾಗಿದೆ ಎಂದು ತೋರಿಸುತ್ತದೆ. ಹಿಂಭಾಗದಲ್ಲಿ ಬೋರ್ಡ್‌ನಲ್ಲಿ ‘ಹೌರಾ’ ಎಂದು ಬರೆಯಲಾಗಿದೆ ಮತ್ತು ಅಂಗಡಿಗಳ ಪಿನ್ ಕೋಡ್ ಸಂಖ್ಯೆ ‘7’ ರಿಂದ ಪ್ರಾರಂಭವಾಗುವುದನ್ನು ನೋಡಬಹುದು. ಎನ್. ರೈ (ಹೋಮಿಯೋಪತಿ) ಹೆಸರಿನ ವೈದ್ಯರೊಬ್ಬರು (ವೀಡಿಯೊದಲ್ಲಿ ಅವರ ಹೆಸರನ್ನು ಬೋರ್ಡ್‌ನಲ್ಲಿ ಕಾಣಬಹುದು) ಹೌರಾದಲ್ಲಿ ಕ್ಲಿನಿಕ್ ಇರುವುದು ಕಂಡುಬಂದಿದೆ.

ಅಲ್ಲದೆ, ‘ಹೊಸ ಶಿಮ್ಲಾ ಬಿರಿಯಾನಿ’ ಅಂಗಡಿ (ಪೋಸ್ಟ್ ಮಾಡಿದ ವೀಡಿಯೊದಲ್ಲಿ ನೋಡಲಾಗಿದೆ) ಹೌರಾದಲ್ಲಿ ಇರುವುದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2020ರ ಕೊರೊನಾ ಸಂದರ್ಭದಲ್ಲಿ ಮುಸ್ಲಿಮರು ವೈರಸ್ ನಿಯಂತ್ರಣಕ್ಕೆ ಬರಲೆಂದು ಪ್ರಾರ್ಥಿಸುತ್ತಿರುವ ಹಳೆಯ ವಿಡಿಯೊವನ್ನು  ಮುಂಬೈನಲ್ಲಿ ದ್ವನಿವರ್ಧಕವನ್ನು ನಿ‍ಷೇದಿಸಿದಕ್ಕೆ ರಸ್ತೆಯಲ್ಲಿ ಜನರು ಆಜಾನ್ ಪಠಿಸುತ್ತಿರುವ ಇತ್ತೀಚಿನ ವಿಡಿಯೊ ಎಂದು  ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll