ಪ್ರಧಾನಿ ಮೋದಿ ಕುಡಿದ ಅಮಲಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾರೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕಾಮೆಂಟ್‌ಗಳಲ್ಲಿ, ಪ್ರಧಾನಿ ಮೋದಿ ಕುಡಿದಿದ್ದಾರೆ ಎಂದು ಅನೇಕ ಬಳಕೆದಾರರು ಸೂಚಿಸುವುದನ್ನು ಕಾಣಬಹುದು. ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಕುಡಿದ ಅಮಲಿನಲ್ಲಿ ಪ್ರಧಾನಿ ಮೋದಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವ ವಿಡಿಯೋ.
ನಿಜಾಂಶ: ಪೋಸ್ಟ್ ಮಾಡಿದ ವೀಡಿಯೊವು ‘ದಿ ಲಾಲನ್‌ಟಾಪ್’ ಪೋಸ್ಟ್ ಮಾಡಿದ ಮೂಲ ವೀಡಿಯೊದ ಟ್ವೀಕ್ ಮಾಡಿದ ಆವೃತ್ತಿಯಾಗಿದೆ. ಪ್ರಧಾನಿ ಮೋದಿ ಕುಡಿದಿದ್ದಾರೆ ಎಂದು ತಪ್ಪಾಗಿ ಬಿಂಬಿಸಲು ಮೂಲ ಆವೃತ್ತಿಯನ್ನು ನಿಧಾನಗೊಳಿಸಲಾಗಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಾವು ಅಂತರ್ಜಾಲದಲ್ಲಿ ವೀಡಿಯೊವನ್ನು ಹುಡುಕಿದಾಗ, ಇದೇ ರೀತಿಯ ವೀಡಿಯೊಗಳನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ವಿರೋಧ ಪಕ್ಷದ ಸದಸ್ಯರು ಪಿಎಂ ಮೋದಿ ಅವರ ‘ಓ ಮೈ ಗಾಡ್’ ಹೇಳಿಕೆಗೆ ಅಪಹಾಸ್ಯ ಮಾಡುವ ಮೂಲಕ ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ಜರ್ಮನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಡಿಯೋವನ್ನು ತೆಗೆಯಲಾಗಿದೆ. ಆದರೆ ಪೋಸ್ಟ್ ಮಾಡಿದ ವೀಡಿಯೊವು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ‘ದಿ ಲಾಲನ್‌ಟಾಪ್’ ಪೋಸ್ಟ್ ಮಾಡಿದ ಮೂಲ ವೀಡಿಯೊದ ಟ್ವೀಕ್(ನಿಧಾನಗೊಳಿಸಿದ) ಮಾಡಿದ ಆವೃತ್ತಿಯಾಗಿದೆ ಎಂದು ಕಂಡುಬಂದಿದೆ. ಪ್ರಧಾನಿ ಮೋದಿ ಕುಡಿದಿದ್ದಾರೆ ಎಂದು ತಪ್ಪಾಗಿ ಬಿಂಬಿಸಲು ಮೂಲ ಆವೃತ್ತಿಯನ್ನು ನಿಧಾನಗೊಳಿಸಿ ಪ್ಲೇ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಮೂಲ ಕ್ಲಿಪ್ ಸುಮಾರು 19 ಸೆಕೆಂಡುಗಳಿದ್ದರೆ ಪೋಸ್ಟ್ ಮಾಡಿದ ವೀಡಿಯೊ 26 ಸೆಕೆಂಡುಗಳಿದೆ ಎಂದು ನೋಡಬಹುದು. ಆದ್ದರಿಂದ, ಪೋಸ್ಟ್ ಮಾಡಿದ ವೀಡಿಯೊವನ್ನು ನಿದಾಗತಿಯಲ್ಲಿ ಪ್ಲೇ ಮಾಡಿ ಮೋದಿ ಪಾನಮತ್ತರಾಗಿದ್ದಾರೆ ಎಂದು ಬಿಂಬಿಸಲಾಗಿದೆ ಎಂದು ತೀರ್ಮಾನಿಸಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿ ಕುಡಿದಿದ್ದಾರೆ ಎಂದು ತಪ್ಪಾಗಿ ಚಿತ್ರಿಸಲು ಮೂಲ ವೀಡಿಯೊವನ್ನು ನಿಧಾನಗೊಳಿಸಲಾಗಿದೆ. ಹಾಗಾಗಿ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.