Fake News - Kannada
 

ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಬಂಧಿಸಿದ್ದು ಆರ್ಯನ್ ಖಾನ್‌ರನ್ನು ಅಲ್ಲ, ಬದಲಿಗೆ ಟ್ವಿಲೈಟ್ ನಟ ಬ್ರಾನ್ಸನ್ ಪೆಲ್ಲೆಟಿಯರ್ ರನ್ನು

0

ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವ ಯುವಕನೊಬ್ಬ ಅತಿಯಾಗಿ ನಶೆಯಲ್ಲಿದ್ದಂತೆ ಕಾಣುತ್ತಿದ್ದು ಆತ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಎಂದು ಪ್ರತಿಪಾದಿಸಿ ವಿಡಿಯೋವನ್ನು ಒಳಗೊಂಡ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಅಂತಿಮವಾಗಿ, ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವುದನ್ನು ವೀಡಿಯೊ ತೋರಿಸುತ್ತಿದೆ. ಈ ಲೇಖನದ ಮೂಲಕ ಪೋಸ್ಟ್‌ ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಆರ್ಯನ್ ಖಾನ್ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ.

ನಿಜಾಂಶ: ವೈರಲ್ ಆಗಿರುವ ವೀಡಿಯೊ ವಾಸ್ತವವಾಗಿ ಟ್ವಿಲೈಟ್ ನಟ ಬ್ರಾನ್ಸನ್ ಪೆಲ್ಲೆಟಿಯರ್ ಅವರದು. ಅವರು ಡಿಸೆಂಬರ್ 2012 ರಲ್ಲಿ ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು. ನಂತರ, ಅವರು ತಪ್ಪಿತಸ್ಥರೆಂದು ಸಾಬೀತಾಯಿತು ಮತ್ತು ಎರಡು ವರ್ಷಗಳ ಶಿಕ್ಷೆ ವಿಧಿಸಲಾಯಿತು. ಅನೇಕ ಸುದ್ದಿ ಸಂಸ್ಥೆಗಳು ಆಗ ಅದೇ ವರದಿ ಮಾಡಿವೆ. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಅಥವಾ ಹಿಂದೆ ಆರ್ಯನ್ ಖಾನ್ ಅಂತಹ ಘಟನೆಯಲ್ಲಿ ಭಾಗಿಯಾಗಿರುವ ಯಾವುದೇ ವರದಿಗಳಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ  ತಪ್ಪಾಗಿದೆ.

ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋದಲ್ಲಿರುವ ವ್ಯಕ್ತಿ ಆರ್ಯನ್ ಖಾನ್ ಅಲ್ಲ ಅಥವಾ ಇತ್ತೀಚಿನ ಯಾವುದೇ ಘಟನೆಯನ್ನು ವೀಡಿಯೊ ತೋರಿಸುವುದಿಲ್ಲ. ಸಂಬಂಧಿತ ಕೀವರ್ಡ್‌ಗಳೊಂದಿಗೆ Google ಸರ್ಚ್ ನಡೆಸಿದಾಗ 2013ರಲ್ಲಿ  ಸುದ್ದಿ ವರದಿಗಳುಲ ಸಿಕ್ಕಿವೆ. (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಈ ವರದಿಗಳ ಪ್ರಕಾರ, ವೀಡಿಯೊದಲ್ಲಿರುವ ವ್ಯಕ್ತಿ ಟ್ವಿಲೈಟ್ ಚಿತ್ರದ ನಟ ಬ್ರಾನ್ಸನ್ ಪೆಲ್ಲೆಟಿಯರ್ ಎಂದು ತಿಳಿಯುತ್ತದೆ. ಅವರು ಲಾಸ್ ಏಂಜಲೀಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ಘಟನೆಯು ಡಿಸೆಂಬರ್ 2012 ರಲ್ಲಿ ಸಂಭವಿಸಿದ್ದು, ನಟನು  ಆರಂಭದಲ್ಲಿ ಹೆಚ್ಚು ಅಮಲೇರಿದ ಸ್ಥಿತಿಯಲ್ಲಿ ಸಿಕ್ಕಿಬಿದ್ದ ನಂತರ ಆತ ವಿಮಾನದಲ್ಲಿ ತೊಂದರೆ ಉಂಟುಮಾಡಿದ ಕಾರಣ  ಆತನನ್ನು ವಿಮಾನದಿಂದ ಹೊರ ಕಳುಹಿಸಲಾಯಿತು.

ಬ್ರಾನ್ಸನ್ ಪೆಲ್ಲೆಟಿಯರ್ ನಂತರ ತಪ್ಪಿತಸ್ಥರೆಂದು ಸಾಬೀತಾಯಿತು ಮತ್ತು ಎರಡು ವರ್ಷಗಳ ಶಿಕ್ಷೆ ವಿಧಿಸಲಾಯಿತು. ಡಿಸೆಂಬರ್ 2012 ರಲ್ಲಿ ಘಟನೆಯನ್ನು ವರದಿ ಮಾಡಿದ ಸುದ್ದಿ ಲೇಖನಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ಅಥವಾ ಈ ಹಿಂದೆ ಆರ್ಯನ್ ಖಾನ್ ಅಂತಹ ಯಾವುದೇ ಘಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ವರದಿಗಳಿಲ್ಲ. ಅಲ್ಲದೆ, ಮಾದಕವಸ್ತು ಪ್ರಕರಣದಲ್ಲಿ ಅಕ್ಟೋಬರ್ 2021 ರಲ್ಲಿ ಜಾಮೀನು ಪಡೆದ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡ ಬಗ್ಗೆ ಯಾವುದೇ ವರದಿಗಳಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, 2012 ರಲ್ಲಿ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದಿದ್ದು ಆರ್ಯನ್ ಖಾನ್ ಅಲ್ಲ. ಬದಲಗಾಗಿ ಟ್ವಿಲೈಟ್ ನಟ ಬ್ರಾನ್ಸನ್ ಪೆಲ್ಲೆಟಿಯರ್. ಅದಕ್ಕಾಗಿ ಅವರನ್ನು ಬಂಧಿಸಲಾಯಿತು.

Share.

About Author

Comments are closed.

scroll