ಸೌದಿ ಅರೇಬಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರಿಗೆ ಪ್ರಧಾನಿ ಮೋದಿ ನಮಸ್ಕರಿಸುವ ಚಿತ್ರವಿರುವ ಪೋಸ್ಟ್ ಅನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿರುವ ಚಿತ್ರ ಎಷ್ಟು ನಿಜವೆಂದು ತಿಳಿಯೋಣ.
ಕ್ಲೇಮ್ : ಪೋಸ್ಟ್‌ನಲ್ಲಿರುವ ಚಿತ್ರವು ಮೋದಿ ಸೌದಿಯ ಅರಸ ಸಲ್ಮಾನ್ ಅವರ ಪಾದಗಳನ್ನು ಸ್ಪರ್ಶಿಸುತ್ತಿರುವಂತೆ ತೋರಿಸುತ್ತದೆ.
ಫ್ಯಾಕ್ಟ್ : 2013 ರಲ್ಲಿ ಅಡ್ವಾಣಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಿರುವ ಮೋದಿಯವರ ಚಿತ್ರವನ್ನು ಅಡ್ವಾಣಿಯವರ ಸ್ಥಾನದಲ್ಲಿ ಸೌದಿ ರಾಜನ ಫೋಟೋವನ್ನು ಸೇರಿಸಲು ಫೋಟೋಶಾಪ್ ಮಾಡಲಾಗಿದೆ. ಆದ್ದರಿಂದ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಪೋಸ್ಟ್‌ನಲ್ಲಿರುವ ಚಿತ್ರವನ್ನು ಕ್ರಾಪ್ ಮಾಡಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ಈ ಸಮಸ್ಯೆಯ ಕುರಿತು ಪತ್ರಿಕೆಯಲ್ಲಿರುವ ಲೇಖನವನ್ನುನಾವು ಕಂಡುಕೊಂಡಿದ್ದೇವೆ. ಬ್ಯುಸಿನೆಸ್ ಸ್ಟ್ಯಾಂಡರ್ಡ್ ಲೇಖನದ ಪ್ರಕಾರ, 2013 ರಲ್ಲಿ ಭೋಪಾಲ್‌ನಲ್ಲಿ ನಡೆದ ರಾಲಿಯಲ್ಲಿ ಅಡ್ವಾಣಿಯವರಿಗೆ ನಮಸ್ಕರಿಸಿರುವ ಮೋದಿ ಅವರ ಫೋಟೋವನ್ನು ಅಡ್ವಾಣಿ ಬದಲಿಗೆ ಸೌದಿ ರಾಜನ ಫೋಟೋವನ್ನುಇಟ್ಟು ಫೋಟೋಶಾಪ್ ಮಾಡಲಾಗಿದೆ. ನ್ಯೂಸ್ 18 ಪತ್ರಕರ್ತರೊಬ್ಬರು ಮಾರ್ಫ್ ಮಾಡಿದ ಫೋಟೋವನ್ನು ಟ್ವೀಟ್ ಮಾಡಿ ಈ ಫೋಟೋ 2016 ರಲ್ಲಿ ವೈರಲ್ ಆಗಿತ್ತು ಎಂದು ತಿಳಿಸಿದ್ದಾರೆ. ಆಗ ಬಿಜೆಪಿಯು ಪತ್ರಕರ್ತನ ಮೇಲೆ ಔಪಚಾರಿಕವಾಗಿ ದೂರು ದಾಖಲಿಸಿದ್ದು, ಅದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಮೋದಿ ಸೌದಿ ರಾಜನಿಗೆ ನಮಸ್ಕರಿಸುತ್ತಿರುವ ಹಳೆಯ ಫೋಟೋಶಾಪ್ ಚಿತ್ರವನ್ನು ಮತ್ತೆ ಹಂಚಿಕೊಳ್ಳಲಾಗುತ್ತಿದೆ.