Fake News - Kannada
 

ಪಿಎಎಫ್‌ಎಫ್‌-16 ಜೆಟ್‌ನ ಕಾಕ್‌ಪಿಟ್‌ನಲ್ಲಿ ಪಾಕಿಸ್ತಾನದ ಪೈಲಟ್‌ ಮೂತ್ರ ವಿಸರ್ಜನೆ ಮಾಡಿದ್ದರು ಎಂದು ಎಡಿಟ್ ಮಾಡಿದ ಸುದ್ದಿಯನ್ನು ಹಂಚಿಕೊಳ್ಳಲಾಗಿದೆ!

0

ಪಾಕಿಸ್ತಾನದ ದಿನಪತ್ರಿಕೆ ‘Dawn’ನಲ್ಲಿ ಪ್ರಕಟವಾದ ಸುದ್ದಿ ಲೇಖನದ ಸ್ಕ್ರೀನ್‌ಶಾಟ್ ಅನ್ನು ಪಿಎಎಫ್‌ ಎಫ್‌-16 ಫೈಟರ್ ಜೆಟ್‌ನ ಕಾಕ್‌ಪಿಟ್‌ನಲ್ಲಿ ಪಾಕಿಸ್ತಾನ ಪೈಲಟ್ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೈಲಟ್ ತನ್ನ ಕನಸಿನಲ್ಲಿ ಅಲ್ಲಾಹು ಈ ಕೃತ್ಯವನ್ನು ಮಾಡುವಂತೆ ಸಲಹೆಯನ್ನು ನೀಡಿದ್ದರು. ಅದನ್ನು ಅನುಸರಿಸಿ ಜೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಈ ಸುದ್ದಿ ವರದಿಯ ಶೀರ್ಷಿಕೆಯು ಹೇಳುತ್ತದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಪ್ರತಿಪಾದನೆ: ಪಿಎಎಫ್ ಎಫ್-16 ಫೈಟರ್ ಜೆಟ್‌ನ ಕಾಕ್‌ಪಿಟ್‌ನಲ್ಲಿ ಪಾಕಿಸ್ತಾನ ಪೈಲಟ್ ಮೂತ್ರ ವಿಸರ್ಜಿಸುವ ಬಗ್ಗೆ ‘Dawn’ ಸುದ್ದಿ ಲೇಖನ.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಲಾದ ಸುದ್ದಿ ಲೇಖನವನ್ನು ಫೋಟೋಶಾಪ್ ಮಾಡಲಾಗಿದೆ. ಪಾಕಿಸ್ತಾನದ ಪೈಲಟ್ ಎಫ್-16 ಫೈಟರ್ ಜೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಬಗ್ಗೆ ಅಂತಹ ಯಾವುದೇ ವರದಿಯನ್ನು ಪಾಕಿಸ್ತಾನದ ಸುದ್ದಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ಗೂಗಲ್‌ನಲ್ಲಿ ಕೀವರ್ಡ್‌ಗಳು ಮತ್ತು ಟೈಮ್ ಫಿಲ್ಟರ್‌ಗಳನ್ನು ಬಳಸಿಕೊಂಡು ಈ ಸುದ್ದಿ ವರದಿಗಾಗಿ ಹುಡುಕಿದಾಗ, ಪಾಕಿಸ್ತಾನ ಮೂಲದ ‘Dawn’ ದಿನಪತ್ರಿಕೆಯು ‘10 ಜೂನ್ 2020’ ರಂದು ಪ್ರಕಟವಾದ ತಮ್ಮ ಪತ್ರಿಕೆಯಲ್ಲಿ ಅಂತಹ ಯಾವುದೇ ಘಟನೆಯನ್ನು ವರದಿ ಮಾಡಿಲ್ಲ ಎಂದು ತಿಳಿದುಬಂದಿದೆ. ‘efficiency’(ದಕ್ಷತೆ) ಬದಲಿಗೆ ‘efficiancy’ಎಂದು ತಪ್ಪಾಗಿ ಬರೆದಿರುವುದು ಮತ್ತು ಶೀರ್ಷಿಕೆಯ ಮಧ್ಯದಲ್ಲಿ ಪದಗಳಿಗೆ ದೊಡ್ಡಕ್ಷರಗಳ ಬಳಕೆ ಮಾಡಿರುವ ಪದಗಳು ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಸುದ್ದಿ ವರದಿಯು ಫೋಟೋಶಾಪ್‌ ಮೂಲಕ ಎಡಿಟ್ ಮಾಡಲಾಗಿರಬಹುದು ಎಂದು ಸೂಚಿಸುತ್ತದೆ.

ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಸುದ್ದಿ ವರದಿಯನ್ನು ‘Dawn’ ಪತ್ರಿಕೆಯಲ್ಲಿ ಪ್ರಕಟವಾದ ನಿರ್ದಿಷ್ಟ ಸುದ್ದಿ ವರದಿಯೊಂದಿಗೆ ಹೋಲಿಸಿದಾಗ, ಅವುಗಳ ನಡುವೆ ಕೆಲವು ವ್ಯತ್ಯಾಸಗಳನ್ನು ನಾವು ಕಾಣಬಹುದು. ಸುದ್ದಿ ವರದಿಯಲ್ಲಿನ ‘Dawn’ ಲೋಗೋದ ಕೆಳಗಿನ ಸಾಮಾನ್ಯ ಹೆಡರ್ ಲೈನ್‌ ಹಂಚಿಕೊಂಡಿರುವ ಪೋಸ್ಟ್‌ನ ಸುದ್ದಿಯಲ್ಲಿ ಕಾಣುವುದಿಲ್ಲ. ಈ ಸುದ್ದಿ ವರದಿ ಶೀರ್ಷಿಕೆಯ ಕೊನೆಯಲ್ಲಿ ಪೂರ್ಣವಿರಾಮ ಚಿಹ್ನೆ ಬಳಸಲಾಗಿದೆ. ಅದು ಪತ್ರಿಕೆಯ ಸಾಮಾನ್ಯ ಸ್ವರೂಪದಲ್ಲಿ (ಹೆಡ್‌ಲೈನ್‌ಗಳಲ್ಲಿ ಪೂರ್ಣವಿರಾಮ ಬಳಸುವುದಿಲ್ಲ) ಕಂಡುಬರುವುದಿಲ್ಲ. ಅಲ್ಲದೆ, ‘DAWN’ ಸುದ್ದಿಗಳಲ್ಲಿ ಪ್ರಕಟವಾದ ನಿರ್ದಿಷ್ಟ ಸುದ್ದಿ ವರದಿಗಳಲ್ಲಿರುವಂತೆ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನ ಸುದ್ದಿಯ ಶೀರ್ಷಿಕೆ ಮತ್ತು ಲೇಖನದ ವಿವರಗಳ ನಡುವೆ ಯಾವುದೇ ಬೈಲೈನ್ ಕೂಡ ಇಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲು ತಮ್ಮ ಸುದ್ದಿ ವೆಬ್‌ಸೈಟ್‌ನ ಸುದ್ದಿಗಳನ್ನು ಎಡಿಟ್ ಮಾಡಿ ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ‘10 ಜೂನ್ 2020 ’ರಂದು, ‘Dawn’ ಸುದ್ದಿ ವೆಬ್‌ಸೈಟ್ ಲೇಖನವೊಂದನ್ನು ಪ್ರಕಟಿಸಿತು. ಲೇಖನದಲ್ಲಿ, ಅವರು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ ಎಂದು ಹೇಳಲಾದ ಇದೇ ರೀತಿಯ ಎಡಿಟ್‌ ಮಾಡಲಾಗಿದ್ದ ಮತ್ತೊಂದು ನಕಲಿ ಸುದ್ದಿ ವರದಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಎಲ್ಲ ಸಾಕ್ಷ್ಯಗಳಿಂದ, ಲೇಖನದಲ್ಲಿ ಹಂಚಿಕೊಂಡ ಸುದ್ದಿ ವರದಿಯ ಸ್ಕ್ರೀನ್‌ಶಾಟ್ ಫೋಟೋಶಾಪ್ ಆಗಿದೆ ಎಂದು ತೀರ್ಮಾನಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅಲ್ಲಾಹನ ಸಲಹೆಯ ಮೇರೆಗೆ ಪಾಕಿಸ್ತಾನ ಪೈಲಟ್ ಎಫ್-16 ಫೈಟರ್ ಜೆಟ್ ಒಳಗೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಎಡಿಟ್ ಮಾಡಲಾದ ಸುದ್ದಿಯ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ.

Share.

About Author

Comments are closed.

scroll