Fake News - Kannada
 

ಮುಸ್ಲಿಂರ ಮನೆಗಳನ್ನು ಒಡೆದು ಹಾಕಿದಾಗ ಪ್ರಾಚೀನ ದೇವಾಲಯಗಳು ಕಂಡಿವೆ ಎನ್ನುವ ಹಳೆಯ ಸುಳ್ಳು ಸುದ್ದಿಗಳನ್ನ ಮತ್ತೆ ಹಂಚಿಕೊಳ್ಳಲಾಗುತ್ತಿದೆ

0

ಇದು ಕಾಶಿ ವಿಶ್ವನಾಥ ಮಂದಿರದಿಂದ ಗಂಗಾನದಿಯವರೆಗೂ ನಿರ್ಮಿಸಿದ ದಾರಿ, ಮಂದಿರದ ಪಕ್ಕದಲ್ಲಿ ಇರುವ 80 ಮುಸ್ಲಿಂ ಕುಟುಂಬಗಳಿಗೆ ಅವರ ಮನೆಗಳನ್ನು ಖಾಲಿ ಮಾಡುವುದಕ್ಕಾಗಿ ಸರ್ಕಾರಿ ಬೃಹತ್ ಪರಿಹಾರ ನೀಡಿದೆ. ಆಶ್ಚರ್ಯಕರವಾದ ವಿಷಯವೇನೆಂದರೆ ‘ಅವರ ಮನೆಗಳನ್ನು ಒಡೆದು ಹಾಕುವ ಸಮಯದಲ್ಲಿ ಮನೆಯ ಕೆಳಗ 45 ಚಿಕ್ಕ ದೇವಸ್ಥಾನಗಳು ಕಂಡುಬಂದಿವೆ’ ಎಂದು ಹೇಳುವ ಒಂದು ವಿಡಿಯೋ ಇರುವ  ಪೋಸ್ಟ್‌ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಪ್ರತಿಪಾದನೆ: ಕಾಶಿ ವಿಶ್ವನಾಥ್ ಮಂದಿರದಿಂದ ಗಂಗಾನದಿಯವರೆಗೂ ನಿರ್ಮಿಸಿದ ದಾರಿಗಾಗಿ 80  ಮುಸ್ಲಿಂ ಮನೆಗಳನ್ನು ಒಡೆದು ಹಾಕಿದಾಗ 45 ದೇವಸ್ಥಾನಗಳು ಕಂಡಿವೆ.

ಸತ್ಯಾಂಶ: ಕಾಶಿ ವಿಶ್ವನಾಥ್ ದೇವಾಲಯ ಕಾರಿಡಾರ್ ಪ್ರಾಜೆಕ್ಟ್‌ಗಾಗಿ ಅಸಲಿಗೆ ಮುಸ್ಲಿಂ ಮನೆಗಳನ್ನು ಒಡೆದು ಹಾಕಿಲ್ಲ. ಆ ಪ್ರದೇಶದಲ್ಲಿ ಕೇವಲ ಹಿಂದುಗಳ ಮನೆಗಳು ಮಾತ್ರ ಇವೆ. ಅವರ ಮನೆಗಳು ಹೊಡೆದುಹಾಕಿದಾಗ ಪ್ರಾಚೀನ ದೇವಾಲಯಗಳು ಕಂಡುಬಂದಿವೆ. ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ಪ್ರಾಜೆಕ್ಟ್ ಕೊರೊನಾ ಎರಡನೆ ಅಲೆಯ ಕಾರಣದಿಂದ ವಿಳಂಬವಾಗಿದೆ. ಇನ್ನೂ ಪೂರ್ಣ ನಿರ್ಮಾಣ ಆಗಿಲ್ಲ. ನವೆಂಬರ್ ಒಳಗೆ ಪೂರ್ತಿ ಆಗಬಹದು ಎಂದು ಪತ್ರಿಕೆಗಳು ವರದಿ ಮಾಡಿವೆ. ಆದ್ದರಿಂದ ಪೋಸ್ಟ್ ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್ ನಲ್ಲಿನ ವಿಷಯದ ಬಗ್ಗೆ ಗೂಗಲ್‌ನಲ್ಲಿ ಹುಡುಕಿದಾಗ, “ಟೈಮ್ಸ್ ಆಫ್ ಇಂಡಿಯಾ’ದ ಲೇಖನವೊಂದು ಕಂಡುಬಂದಿದೆ. ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್ ಯೋಜನೆಗಾಗಿ ಕೆಲ ಮನೆಗಳನ್ನು ಒಡೆದಾಗ,  ಪ್ರಾಚೀನ ದೇವಸ್ಥಾನಗಳು ಕಂಡಿವೆ ಎಂದು ಎಲ್ಲ ಲೇಖನಗಳಲ್ಲಿ ವರದಿಯಾಗಿದೆ. ಆದರೆ ಪೋಸ್ಟ್‌ನಲ್ಲಿ ಹೇಳಿರುವ ಹಾಗೆ ಮುಸ್ಲಿಮರ ಮನೆಗಳನ್ನು ಒಡೆದುಹಾಕಿಲ್ಲ. ಏಕೆಂದರೆ ಅಲ್ಲಿ ಮುಸ್ಲಿಂ ಮನೆಗಳೇ ಇಲ್ಲ!. ಪೋಸ್ಟ್‌ನಲ್ಲಿ ಇರುವ ಒಂದು ವಿಡಿಯೋದಲ್ಲಿಯೂ ಸಹ 38 ಸೆಕೆಂಡ್‌ಗಳ ಹತ್ತಿರ ಹಿಂದೂ ಮನೆಗಳು ಎಂದು ಹೇಳಿರುವುದನ್ನು ಕೇಳಬಹದು.

2019 ವರ್ಷದಲ್ಲಿ ಮೇ ತಿಂಗಳಲ್ಲಿ ‘ಸಂಡೆ ಗಾರ್ಡಿಯನ್ ಲೈವ್’ ನವರೊಂದಿಗೆ ಆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿರುವ ವಿಶಾಲ್ ಸಿಂಗ್ (ಸಿಈಓ – ಶ್ರೀ ಕಾಶಿ ವಿಶ್ವನಾಥ್ ದೇವಾಲಯ ಟ್ರಸ್ಟ್) ಮಾತನಾಡುತ್ತಾ, ಅಲ್ಲಿ ಆ ಕಾರಿಡಾರ್ ಪ್ರದೆಶದಲ್ಲಿ ಇರುವವರು ಎಲ್ಲರೂ ಹಿಂದೂಗಳೆ ಎಂದು ಹೇಳಿದರು.

2019 ರಲ್ಲಿಯೂ ಸಹ ಇದೆ ಪ್ರತಿಪಾದನೆಯೊಂದಿಗೆ ವಿಡಿಯೋಗಳು ವೈರಲ್ ಆದಾಗ.’ ಆಲ್ಟ್ ನ್ಯೂಸ್’ ನವರೊಂದಿಗೆ. ವಿಶಾಲ್‌ಸಿಂಗ್ ಮಾತನಾಡುತ್ತಾ ಒಂದು ಮುಸ್ಲಿಂ ಮನೆಯನ್ನೂ ಸಹ ಕಾರಿಡಾರ್‌ಗಾಗಿ ಒಡೆದು ಹಾಕಿಲ್ಲವೆಂದು ಹೇಳಿದರೆಂದು ಅವರ ಲೇಖನದಲ್ಲಿ ಓದಬಹದು. ಅಷ್ಟೇ ಅಲ್ಲ, ಕಾರಿಡಾರ್ ಗಾಗಿ ತೆಗೆದುಕೊಂಡ ಮನೆಗಳ ವಿವರಗಳನ್ನು ‘‘Shri Kashi Vishwanath Special Area Development Board’ನವರ ವೆಬ್‌ಸೈಟ್‌ನಲ್ಲಿ ನೋಡಬಹುದು. ಅದರಲ್ಲಿಯೂ ಸಹ ಯಾವುದೇ ಮುಸ್ಲಿಂ ಮನೆಗಳು ಇಲ್ಲದೆ ಇರುವುದನ್ನು ನೋಡಬಹದು. ಈ ಕುರಿತ ಹೆಚ್ಚಿನ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಪ್ರಸ್ತುತ ಕಾಶಿ ವಿಶ್ವನಾಥ ಕಾರಿಡಾರ್ ಪ್ರಾಜೆಕ್ಟ್ ಕರೋನಾ ಎರಡನೆ ಅಲೆಯ ಕಾರಣದಿಂದ ವಿಳಂಬವಾಗಬಹುದು ಎಂದು ಹೇಳಲಾಗಿದೆ. ಯೋಜನೆ ಆಗಸ್ಟ್‌ನೊಳಗೆ ಪೂರ್ಣಗೊಳ್ಳಬೇಕಿತ್ತು, ಆದರೆ ನವೆಂಬರ್ ವರೆಗೂ ಸಹ ಸಮಯ ಹಿಡಿಯುತ್ತದೆ. ಹೊಸದಾಗಿ ಫೀಚರ್ಸ್ ಆಡ್ ಮಾಡಿದ ಗಂಗಾ ವ್ಯೂ ಪಾಯಿಂಟ್ ಪ್ರಾಜೆಕ್ಟ್‌ಗೆ ರಾಜ್ಯ ಸರ್ಕಾರದ ಮೂಲಕ ಇನ್ನು ಅನುಮೋದನೆ ಬರಬೇಕಿರುವುದರಿಂದ ಮತ್ತಷ್ಟು ವಿಳಂಬವಾಗುತ್ತದೆ ಎಂದು ಈ ಲೇಖನದ ಮೂಲಕ ತಿಳಿಯುತ್ತದೆ.

ಒಟ್ಟಾರೆಯಾಗಿ, ಮುಸ್ಲಿಂ ಮನೆಗಳನ್ನು ಒಡೆದು ಹಾಕಿದಾಗ ಕಾಶಿ ವಿಶ್ವನಾಥ ದೇವಾಲಯಗಳು ಕಂಡಿವೆ ಎಂದ ಹಳೆಯ ಸುಳ್ಳು ಸುದ್ದಿ ಈಗ ಮತ್ತೆ ಹಂಚಿಕೊಳ್ಳುತ್ತಿದ್ದಾರೆ.

Share.

About Author

Comments are closed.

scroll