Fake News - Kannada
 

ಮುಸ್ಲಿಮರು ರಾಸಾಯನಿಕ ಬಳಸಿ ಆಹಾರವನ್ನು ಮಾರಾಟ ಮಾಡಿ ಎಂದು ದಾರುಲ್-ಉಲೂಮ್ ದಿಯೋಬಂದ್ ‘ಫತ್ವಾ’ ಹೊರಡಿಸಿಲ್ಲ

0

ಹಿಂದೂಗಳನ್ನು ರೋಗಿಗಳಾಗಿಸಲು ರಾಸಾಯನಿಕಗಳನ್ನು ಹೊಂದಿರುವ ಆಹಾರವನ್ನು ಮುಸ್ಲಿಮರು ಮಾರಾಟ ಮಾಡುವಂತೆ ದಾರುಲ್ ಉಲೂಮ್ ದೇವ್‌ಬಂದ್, ‘ಫತ್ವಾ’ ಹೊರಡಿಸಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮೌಲಾನಾ ಸುದ್ದಿಯನ್ನು ಖಚಿತಪಡಿಸುವ ಉದ್ದೇಶಿತ ಟ್ವೀಟ್‌ನ ಫೋಟೋವನ್ನು ಪೋಸ್ಟ್ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ: ಹಿಂದೂಗಳನ್ನು ರೋಗಿಗಳಾಗಿಸಲು ರಾಸಾಯನಿಕಗಳನ್ನು ಹೊಂದಿರುವ ಆಹಾರವನ್ನು ಮುಸ್ಲಿಮರು ಮಾರಾಟ ಮಾಡುವಂತೆ ದಾರುಲ್ ಉಲೂಮ್ ದೇವ್‌ಬಂದ್, ‘ಫತ್ವಾ’ ಹೊರಡಿಸಿತು.

ನಿಜಾಂಶ: ದಾರುಲ್ ಉಲೂಮ್ ದೇವ್‌ಬಂದ್, ಮುಸ್ಲಿಮರು ರಾಸಾಯನಿಕ ಬಳಸಿ ಆಹಾರವನ್ನು ಮಾರಾಟ ಮಾಡಲು, ಹಿಂದೂ ಜನರನ್ನು ರೋಗಿಗಳಾಗಿಸಲು ‘ಫತ್ವಾ’ ಹೊರಡಿಸಿಲ್ಲ. ವಾಸ್ತವವಾಗಿ, 2020 ರಲ್ಲಿ ಇದೇ ರೀತಿಯ ಪೋಸ್ಟ್‍ಗಳು ವೈರಲ್ ಆದಾಗ, ದಾರುಲ್-ಉಲೂಮ್ ದಿಯೋಬಂದ್ ತಮ್ಮ ಹೆಸರಿನಲ್ಲಿ ಹೊರಡಿಸಲಾದ ನಕಲಿ ಫತ್ವಾ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ದಾರುಲ್ ಉಲೂಮ್ ದೇವ್‌ಬಂದ್ ಹೊರಡಿಸಿದ ಇಂತಹ ‘ಫತ್ವಾ’ದ ಬಗ್ಗೆ ನಾವು ಅಂತರ್ಜಾಲದಲ್ಲಿ ಹುಡುಕಿದಾಗ, ಹಿಂದೂಗಳನ್ನು ಅನಾರೋಗ್ಯಕ್ಕೆ ಒಳಗಾಗಲು ರಾಸಾಯನಿಕಗಳನ್ನು ಹೊಂದಿರುವ ಆಹಾರವನ್ನು ಮುಸ್ಲಿಮರು ಮಾರಾಟ ಮಾಡುವಂತೆ ಕೇಳುವಂತಹ ಯಾವುದೇ ಮಾಹಿತಿ ಸಿಗಲಿಲ್ಲ. ದಾರುಲ್ ಉಲೂಮ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ‘ಫತ್ವಾ’ ಹೊರಡಿಸಿಲ್ಲ. ಅಂತಹ ‘ಫತ್ವಾ’ ಇದ್ದಿದ್ದರೆ ಅದನ್ನು ಪ್ರಮುಖ ಸುದ್ದಿವಾಹಿನಿಗಳು ವರದಿ ಮಾಡುತ್ತಿದ್ದವು.

2020 ರಲ್ಲಿ ಇದೇ ರೀತಿಯ ಪ್ರತಿಪಾದನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವಾಗ, ದಾರುಲ್ ಉಲೂಮ್ ದೇವ್‌ಬಂದ್ ತಮ್ಮ ಹೆಸರಿನಲ್ಲಿ ಹೊರಡಿಸಲಾದ ನಕಲಿ ಫತ್ವಾ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಉಲ್ಲೇಖಿಸಲಾದ ಕೆಲವು ಲೇಖನಗಳನ್ನು (ಇಲ್ಲಿ ಮತ್ತು ಇಲ್ಲಿ) ನಾವು ಕಂಡುಕೊಂಡಿದ್ದೇವೆ. ನಾವು ಅಂತಹ ‘ಫತ್ವಾ’ ಹೊರಡಿಸಿಲ್ಲ ಎಂದು ದಾರುಲ್ ಉಲೂಮ್ ದೇವಬಂದ್ ಪ್ರತಿನಿಧಿ ಹೇಳಿದ್ದಾರೆ.

ಪೋಸ್ಟ್‌ನಲ್ಲಿನ ಸ್ಕ್ರೀನ್‌ಶಾಟ್ ಅನ್ನು ಸ್ಪಷ್ಟವಾಗಿ ನೋಡಿದಾಗ, ‘@gayur_sheikh’ ಖಾತೆಯು ದಾರುಲ್ ಉಲೂಮ್ ದಿಯೋಬಂದ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲ ಎಂದು ತಿಳಿಯಬಹುದು. ವಾಸ್ತವವಾಗಿ, ಆ ಟ್ವಿಟರ್ ಹ್ಯಾಂಡಲ್ ಅನ್ನು ತೆರೆಯಲು ಪ್ರಯತ್ನಿಸಿದಾಗ, ಖಾತೆಯು ‘ಅಸ್ತಿತ್ವದಲ್ಲಿಲ್ಲ’ ಎಂದು ತೋರಿಸಲಾಗುತ್ತದೆ.

ದಾರುಲ್ ಉಲೂಮ್ ದಿಯೋಬಂದ್ ಭಾರತದ ಅತಿದೊಡ್ಡ ಮುಸ್ಲಿಂ ಸೆಮಿನರಿಗಳಲ್ಲಿ ಒಂದಾಗಿದೆ. ಇದು ವಿವಾದಾತ್ಮಕ ಫತ್ವಾಗಳನ್ನು ಹೊರಡಿಸುವುದಕ್ಕೆ ಹೆಸರುವಾಸಿಯಾಗಿದೆ. ದಾರುಲ್ ಉಲೂಮ್ ದಿಯೋಬಂದ್ ಒಮ್ಮೆ ಫತ್ವಾ ಹೊರಡಿಸಿ, ಮಹಿಳೆಯರು ಕೆಲಸ ಮಾಡುವುದು, ಕುಟುಂಬವನ್ನು ಪೋಷಿಸುವುದು ಕಾನೂನುಬಾಹಿರವಾಗಿದೆ ಎಂದು ಹೇಳುತ್ತದೆ. ಅಲ್ಲದೆ ವಿಡಿಯೊ, ಫೊಟೋಗ್ರಫಿಯನ್ನು ಇಸ್ಲಾಮಿಕ್ ಒಪ್ಪುವುದಿಲ್ಲ ಎಂದು ನಿಷೇಧಿಸುವ ಫತ್ವಾವನ್ನು ಹೊರಡಿಸಿತು.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರು ರಾಸಾಯನಿಕಗಳೊಂದಿಗೆ ಆಹಾರವನ್ನು ಮಾರಾಟ ಮಾಡಿ ಹಿಂದೂ ಜನರನ್ನು ರೋಗಿಗಳಾಗಿಸಲು ದಾರುಲ್ ಉಲೂಮ್ ದೇವ್‌ಬಂದ್ ‘ಫತ್ವಾ’ ಹೊರಡಿಸಲಿಲ್ಲ.

Share.

Comments are closed.

scroll