ವಿಮಾನಗಳಿಗೆ ಆಕಾಶಮಾರ್ಗ ಮಧ್ಯದಲ್ಲೇ ಇಂಧನ ತುಂಬುವ ದೃಶ್ಯ ತುಣುಕನ್ನು ಭಾರತವು ಖರೀದಿಸಿದ ರಫೇಲ್ ಜೆಟ್ ಗಳ ಇಂಧನ ತುಂಬಿಸುವ ವಿಡಿಯೋ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘29 ಜುಲೈ 2020’ರಂದು, ಫ್ರಾನ್ಸ್ ನೊಂದಿಗೆ ಭಾರತ ಸರ್ಕಾರ ಮಾಡಿಕೊಂಡು 36 ರಫೇಲ್ ಫೈಟರ್ ಜೆಟ್ ಗಳ ಖರೀದಿ ಒಪ್ಪಂದದ ಭಾಗವಾಗಿ ಐದು ರಫೇಲ್ ಫೈಟರ್ ಜೆಟ್ ಗಳ ಒಂದು ಗುಂಪು ಹರ್ಯಾಣದ ಅಂಬಾಲಾ ಮಿಲಿಟರಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದವು. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಭಾರತಕ್ಕೆ ಹೋಗುವಾಗ ಹಾರಾಟದ ಮಧ್ಯದಲ್ಲೇ ರಫೇಲ್ ಫೈಟರ್ ಜೆಟ್‌ಗಳಿಗೆ ಇಂಧನ ತುಂಬುವ ವಿಡಿಯೋ.
ನಿಜಾಂಶ: ಪೋಸ್ಟ್ ನಲ್ಲಿ ಹಂಚಲಾದ ವೀಡಿಯೊ ಬ್ರೆಜಿಲ್ ನೌಕಾಪಡೆಯ ಎ -5 ಫೈಟರ್ ಜೆಟ್ ಗಳಿಗೆ ಆಕಾಶಮಾರ್ಗ ಮಧ್ಯದಲ್ಲಿ ಇಂಧನ ತುಂಬುವ ಕಾರ್ಯ ನಿರ್ವಹಿಸುವ ಬ್ರೆಜಿಲ್ ವಾಯುಪಡೆಯ ಎಫ್ -5 ಫೈಟರ್ ಜೆಟ್‌ಗೆ ಸಂಬಂಧಿಸಿದೆ. ಭಾರತಕ್ಕೆ ಆಗಮಿಸಿದ ರಫೇಲ್ ಫೈಟರ್ ಜೆಟ್ ಗಳಿಗೂ ಕೂಡ ಆಕಾಶಮಾರ್ಗ ಮಧ್ಯದಲ್ಲಿಯೇ ಇಂಧನ ತುಂಬುವ ಸೌಲಭ್ಯವನ್ನು ಒದಗಿಸಲಾಗಿದೆ. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಹೇಳಿಕೆ ತಪ್ಪಾಗಿದೆ.
ಪೋಸ್ಟ್ ಮಾಡಿದ ವೀಡಿಯೊದಲ್ಲಿನ ಸ್ಕ್ರೀನ್ ಶಾಟ್ ಗಳ ರಿವರ್ಸ್ ಇಮೇಜ್ ಹುಡುಕಾಟದಲ್ಲಿ, ಬ್ರೆಜಿಲಿಯನ್ ವಾಯುಪಡೆ ಪ್ರಾಧಿಕಾರವು ಪೋಸ್ಟ್ ಮಾಡಿದ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಈ ವಿಡಿಯೋ ದೃಶ್ಯ ತುಣುಕು ಬ್ರೆಜಿಲಿಯನ್ ಏರ್ಫೋರ್ಸ್ ಎಫ್ -5 ಫೈಟರ್ ಜೆಟ್ ಗೆ ಸಂಬಂಧಿಸಿದೆ ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ. ಇದು ಬ್ರೆಜಿಲ್ ನೇವಿ ಎ -4 ಫೈಟರ್ ಜೆಟ್ ವಿಮಾನಗಳಿಗೆ ಇಂಧನ ತುಂಬುವ ಕೆಲಸವನ್ನು ನಿರ್ವಹಿಸುತ್ತದೆ. ಈ ವೀಡಿಯೊ ತುಣುಕನ್ನು ಯುಟ್ಯೂಬ್ ಮತ್ತು ಇತರ ಜಾಲತಾಣಗಳಲ್ಲಿ 2018 ಮತ್ತು 2019 ರ ನಡುವೆ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಇವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸೆಪ್ಟೆಂಬರ್ 2016 ರಲ್ಲಿ, 36 ರಫೇಲ್ ಬಹು-ಅವತಾರಿ ಫೈಟರ್ ಜೆಟ್‌ಗಳನ್ನು ಖರೀದಿಸಲು ಭಾರತ ಸರ್ಕಾರ ಫ್ರಾನ್ಸ್ ನೊಂದಿಗೆ 7.87 ಬಿಲಿಯನ್ ಯುರೋಗಳ (59000 ಕೋಟಿ ರೂ) ಒಪ್ಪಂದಕ್ಕೆ ಸಹಿ ಹಾಕಿತು. ಐದು ರಫೇಲ್ ಫೈಟರ್ ಜೆಟ್‌ಗಳ ಮೊದಲ ಗುಂಪು 29 ಜುಲೈ 2020 ರಂದು ಅಂಬಾಲಾ ಮಿಲಿಟರಿ ವಿಮಾನ ನಿಲ್ದಾಣಕ್ಕೆ ಬಂದವು. ಭಾರತ ಸರ್ಕಾರವು ಖರೀದಿಸಿದ ರಫೇಲ್ ಜೆಟ್ ವಿಮಾನಗಳಿಗೆ ಸಹ ಅಕಾಶಮಾರ್ಗ ಮಧ್ಯದಲ್ಲೇ ಇಂಧನ ತುಂಬುವ ಸೌಲಭ್ಯವನ್ನು ಒದಗಿಸಲಾಗಿದೆ.
ಭಾರತಕ್ಕೆ ಹೋಗುವ ಮಾರ್ಗದಲ್ಲಿ ಮಧ್ಯ ಹಾರಾಟದಲ್ಲಿಯೇ ಇಂಧನ ತುಂಬಿಸುವ ರಫೇಲ್ ಫೈಟರ್ ಜೆಟ್‌ಗಳ ಚಿತ್ರಗಳನ್ನು ಭಾರತೀಯ ವಾಯುಪಡೆ ಮಾಡಿದ ಟ್ವೀಟ್‌ನಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಬ್ರೆಜಿಲಿಯನ್ ಏರ್ಫೋರ್ಸ್ ಎಫ್ -5 ಫೈಟರ್ ಜೆಟ್ ಗಳು ಅಕಾಶ ಮಾರ್ಗ ಮಧ್ಯ ಇಂಧನ ತುಂಬುವ ದೃಶ್ಯತುಣುಕನ್ನು ಭಾರತವು ಖರೀದಿಸಿದ ರಫೇಲ್ ಫೈಟರ್ ಜೆಟ್‌ಗಳ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.