Fake News - Kannada
 

2017 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ ರಾಮಾಯಣ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಇತ್ತೀಚಿನದೆಂದು ಹಂಚಿಕೊಳ್ಳಲಾಗಿದೆ

0

‘ರಾಮಾಯಣ’ ಅಂಚೆ ಚೀಟಿಗಳ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ಮುಂಚಿತವಾಗಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳುತ್ತ ಹಂಚಿಕೊಳ್ಳಲಾಗುತ್ತಿದೆ. ರಾಮ ಮಂದಿರ ಶಿಲಾನ್ಯಾಸಕ್ಕೆ ಪ್ರಧಾನಿ ಮೋದಿ ಅವರು ಆಗಸ್ಟ್ 5, 2020 ರಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆಯ ಸತ್ಯಾಸತ್ಯತೆಯನ್ನು.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಪ್ರತಿಪಾದನೆ: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಡುಗಡೆ ಮಾಡಿದ ‘ರಾಮಾಯಣ’ ಅಂಚೆ ಚೀಟಿಗಳ ಚಿತ್ರ.

ನಿಜಾಂಶ: ಚಿತ್ರದಲ್ಲಿರುವ ‘ರಾಮಾಯಣ’ ಅಂಚೆ ಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2017 ರಲ್ಲಿ ಬಿಡುಗಡೆ ಮಾಡಿದ್ದರು. ಆದ್ದರಿಂದ ಪೋಸ್ಟ್ ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ರಿವರ್ಸ್ ಇಮೇಜ್ ಹುಡುಕಾಟದ ತಂತ್ರಕ್ಕೆ ನಾವು ಚಿತ್ರವನ್ನು ಒಳಪಡಿಸಿದಾಗ, ಅದೇ ಚಿತ್ರವು ‘ಸಪೋಸ್ಟ್.ಬ್ಲಾಗ್ಸ್ಪಾಟ್.ಕಾಮ್’ ಬ್ಲಾಗ್‌ನ ಲೇಖನದಲ್ಲಿ ಕಂಡುಬಂದಿದೆ. ಬ್ಲಾಗ್ ಲೇಖನವನ್ನು ‘26 ಸೆಪ್ಟೆಂಬರ್ 2017’ ರಂದು ಪ್ರಕಟಿಸಲಾಗಿದೆ ಮತ್ತು ಅದಕ್ಕೆ ‘ಇಂಡಿಯಾ ಪೋಸ್ಟ್ 22.09.2017 ರಂದು ರಾಮಾಯಣದ 11 ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿತು’ ಎಂಬ ಶೀರ್ಷಿಕೆ ನೀಡಿರುವುದು ಕಂಡುಬಂದಿದೆ.

ಮೇಲಿನ ಮಾಹಿತಿಯೊಂದಿಗೆ, ನಾವು ‘ಇಂಡಿಯಾ ಅಂಚೆ ಚೀಟಿಗಳು’ ಜಾಲತಾಣದಲ್ಲಿ ನೋಡಿದಾಗ, ಒಂದು ಲಿಂಕ್ ಕಂಡುಬಂದಿದೆ. ಅದು ಇಂಡಿಯಾ ಪೋಸ್ಟ್ ‘ರಾಮಾಯಣ’ ಕುರಿತು 11 ಸ್ಮರಣಾರ್ಥ ಅಂಚೆ ಚೀಟಿಗಳನ್ನು ‘22 ಸೆಪ್ಟೆಂಬರ್ 2017 ರಂದು ಬಿಡುಗಡೆ ಮಾಡಿದೆ’ಎಂದು ಹೇಳುತ್ತದೆ. ವೈರಲ್ ಚಿತ್ರವನ್ನು ‘ಇಂಡಿಯಾ ಅಂಚೆ ಚೀಟಿಗಳು’ ಜಾಲತಾಣದ ಆ ಲಿಂಕ್‌ನಲ್ಲಿ ಕಾಣಬಹುದು.

‘ರಾಮಾಯಣ’ ಕುರಿತ ಈ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು 2017 ರ ಸೆಪ್ಟೆಂಬರ್‌ನಲ್ಲಿ ವಾರಣಾಸಿಯಲ್ಲಿ ಬಿಡುಗಡೆ ಮಾಡಿದ್ದರು.

2020 ರ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯುವ ‘ಭೂಮಿ ಪೂಜೆ’ ಕಾರ್ಯಕ್ರಮದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ದೇವಾಲಯ ಮತ್ತು ರಾಮಾಯಣದ ಸಾಂಕೇತಿಕ ಮಾದರಿಯ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹಲವಾರು ಸುದ್ದಿ ಲೇಖನಗಳು ಕಂಡುಬಂದಿವೆ. ಆ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿನ ಅಂಚೆ ಚೀಟಿಗಳು ಹೊಸವಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅವರು 2017 ರಲ್ಲಿ ಬಿಡುಗಡೆ ಮಾಡಿದ ‘ರಾಮಾಯಣ’ ಚಿತ್ರಗಳ ಸ್ಮರಣಾರ್ಥ ಅಂಚೆ ಚೀಟಿಗಳ ಚಿತ್ರವನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿರುವಂತೆ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll