Fake News - Kannada
 

ಈ ಪೋಟೋದಲ್ಲಿ ಇರುವ ವ್ಯಕ್ತಿ ಉತ್ತರಪ್ರದೇಶ ಬಿಜೆಪಿ ಮುಖಂಡ, ಹತ್ರಾಸ್‌ ಅತ್ಯಾಚಾರ ಘಟನೆಯ ಆರೋಪಿಯ ತಂದೆ ಅಲ್ಲ

0

ಇತ್ತೀಚಿಗೆ ಉತ್ತರಪ್ರದೇಶದಲ್ಲಿ ದಲಿತ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬನಾದ ಸಂದೀಪ್‌ ಠಾಕೂರ್‌ ತಂದೆಗೆ ಬಿಜೆಪಿ ಮುಖಂಡರ ಜೊತೆ ಸಂಬಂಧವಿದೆ ಎಂದು ಹೇಳುತ್ತಾ ಇದಕ್ಕೆ ಸಂಬಂಧಿಸಿದಂತೆ ಕೆಲವು ಪೋಟೋಗಳನ್ನು ಹಂಚಿಕೊಂಡ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅದು ನಿಜವೇ ಪರಿಶೀಲಿಸೋಣ. 

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಪ್ರತಿಪಾದನೆ : ಉತ್ತರ ಪ್ರದೇಶದಲ್ಲಿ ನಡೆದ ದಲಿತ ಮಹಿಳೆಯ ಅತ್ಯಾಚಾರದ ಕೇಸಿನಲ್ಲಿ ಆರೋಪಿಯಾಗಿರುವ ಸಂದೀಪ್‌ ಠಾಕೂರ್‌ ತಂದೆಗೆ ಬಿಜೆಪಿ ಮುಖಂಡರ ಜೊತೆ ಸಂಬಂಧವಿದೆ. ಇವು ಇದಕ್ಕೆ ಸಂಬಂಧಿಸಿದ ಕೆಲವು ಪೋಟೋಗಳು  

ನಿಜಾಂಶ:  ಪೋಸ್ಟ್‌ ನಲ್ಲಿ ಇರುವ ವ್ಯಕ್ತಿ ಪ್ರಯಾಗ್‌ ರಾಜ್‌ಗೆ ಸೇರಿದ ಬಿಜೆಪಿ ಮುಖಂಡ ಇವರ ಮೇಲೂ ಕೂಡ ಅತ್ಯಾಚಾರದ ಪ್ರಕರಣ ದಾಖಲಾಗಿದೆ. ಆದರೂ ಇವನಿಗೂ ಹತ್ರಾಸ್‌ ಅತ್ಯಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಪೋಸ್ಟ್‌ನಲ್ಲಿನ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಇರುವ ಪೋಟೊ ಸ್ಕ್ರೀನ್‌ ಶಾಟ್ ಗಳ ರಿವರ್ಸ್‌ ಇಮೇಜ್‌ ಸರ್ಚ್‌  ಮಾಡಿದಾಗ, ಪೋಸ್ಟ್‌ನಲ್ಲಿನ ವ್ಯಕ್ತಿ ಮೋದಿ ಜೊತೆಗಿರುವ ಪೋಟೋವನ್ನು ಹಾಕಿದ ಒಂದು ಸುದ್ದಿ ಕಂಡುಬಂದಿದೆ. ಈ ಸುದ್ದಿಯ ಪ್ರಕಾರ ಪೋಟೋದಲ್ಲಿ ಇರುವ ವ್ಯಕ್ತಿ ಪ್ರಯಾಗ್‌ ರಾಜ್‌ಗೆ ಸೇರಿದ ಬಿಜೆಪಿ ಮುಖಂಡ ಶ್ಯಾಮ್‌ ಪ್ರಕಾಶ್‌ ದ್ವೀವೇದಿ ಆಗಿದ್ದಾರೆ. ಈತನ ಮೇಲೆ ಸಹ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂಬುದು ಈ ಸುದ್ದಿಯ ಸಾರಾಂಶ.  ಆದರೆ ಈತ ಹತ್ರಾಸ್‌ ಘಟನೆಯ ಆರೋಪಿಯ ತಂದೆ ಅಲ್ಲ. ಹತ್ರಾಸ್‌ ಘಟನೆಗೂ ಈತನಿಗೆ ಯಾವುದೇ ಸಂಬಂದವಿಲ್ಲ.

ಅವರ ಹೆಸರಿನಲ್ಲಿರುವ ಸಾಮಾಜಿಕ ಜಾಲತಾಣದ ಖಾತೆಗಳನ್ನು ಹುಡುಕಿದಾಗ , ಈತನ ಫೇಸ್‌ಬುಕ್‌ ಖಾತೆಯಲ್ಲಿ ಯೋಗಿ ಆದಿತ್ಯನಾಥ್‌, ರಾಜ್‌ ನಾಥ್‌ ಸಿಂಗ್‌ ರಂತಹ ಬಿಜೆಪಿ ಮುಖಂಡರೊಂದಿಗಿನ ಪೋಟೋಗಳು ಕಾಣಿಸುತ್ತವೆ. ಅದೇ ಖಾತೆಯಲ್ಲಿ ಈತ ಪ್ರಯಾಗ್‌ ರಾಜ್‌ ಬಿಜೆಪಿ ಮುಖಂಡ ಎಂದಿದೆ. ಈತನ ಟ್ವಿಟ್ಟರ್ ಖಾತೆಯನ್ನು ಇಲ್ಲಿ ನೋಡಬಹುದು.

ಇನ್ನು  ಹತ್ರಾಸ್‌ ಘಟನೆಯ ಆರೋಪಿ ಸಂದೀಪ್‌ ಠಾಕೂರ್‌ ತಂದೆ ಮಾಧ್ಯಮಗಳ ಜೊತೆ ಮಾತನಾಡಿದ ವಿಡಿಯೋ ಇಲ್ಲಿ ನೋಡಬಹದು

ಇತ್ತೀಚಿಗೆ ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ 19 ವರ್ಷದ ಯುವತಿಯ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ವಾಸ್ತವ ಸುದ್ದಿಗಳಂತ ತಪ್ಪುದಾರಿಗೆಳೆಯುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾಕವಾಗಿ ಹಂಚಲಾಗುತ್ತಿದೆ.

ಒಟ್ಟಿನಲ್ಲಿ ಪೋಸ್ಟ್‌ನಲ್ಲಿ ಇರುವ ಪೋಟೋದಲ್ಲಿನ ವ್ಯಕ್ತಿ ಪ್ರಯಾಜ್‌ ರಾಜ್‌ನ ಬಿಜಪಿ ಮುಖಂಡ ಶ್ಯಾಮ್‌ ಪ್ರಕಾಶ್‌ ದ್ವಿವೇದಿ. ಈತನಿಗೂ ಹತ್ರಾಸ್‌ನಲ್ಲಿ ಜರುಗಿದ ಘಟನೆಗೂ ಸಂಬಂಧವಿಲ್ಲ.

Share.

About Author

Comments are closed.

scroll