NEET(UG) 2024 ಪರೀಕ್ಷೆಯ ಪೇಪರ್ ಸೋರಿಕೆ ಮತ್ತು ಅಕ್ರಮಗಳ ಬಗೆಗಿರುವ ವಿವಾದವನ್ನು ಗಮನಿಸಿದರೆ, ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಹುಡುಗ- ಹುಡುಗಿಯರ ನೀಟ್ ಯಶಸ್ನನ್ನು ಜಾಹೀರಾತುಗಳಲ್ಲಿ ತೋರಿಸಲಾಗಿದೆ. ಈ ಜಾಹಿರಾತಿನ ಚಿತ್ರ ಇದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ನಲ್ಲಿ ಇದು ಪೇಪರ್ ಸೋರಿಕೆಯ ಪ್ರತಿಫಲ ಎಂದು ಆರೋಪಿಸಲಾಗಿದೆ. ಇದೇ ರೀತಿಯ ಮತ್ತೊಂದು ಪೋಸ್ಟ್ನಲ್ಲಿ ಮುಸ್ಲಿಮರು ತಮ್ಮ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನ ಸರಿಯಾಗಿ ಪರಿಶೀಲಿಸೋಣ.
ಕ್ಲೇಮ್ : 2024 ರ NEET (UG) ಪತ್ರಿಕೆ ಸೋರಿಕೆಯಿಂದ ಪ್ರಯೋಜನ ಪಡೆದ ಮುಸ್ಲಿಂ ವಿದ್ಯಾರ್ಥಿಗಳನ್ನು ಎನ್ನುವ ಪತ್ರಿಕಾ ಜಾಹಿರಾತು.
ಫ್ಯಾಕ್ಟ್ : NEET(UG) 2024 ಪೇಪರ್ ಸೋರಿಕೆಯಲ್ಲಿ ಬಂಧಿತರಾದ ಶಂಕಿತರು ಹಿಂದೂ ಮತ್ತು ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ಒಳಗೊಂಡಿರುತ್ತಾರೆ. ವೈರಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ವಿದ್ಯಾರ್ಥಿಗಳು ಕೇರಳದ ಕೊಟ್ಟಕ್ಕಲ್ ಯೂನಿವರ್ಸಲ್ ಇನ್‌ಸ್ಟಿಟ್ಯೂಟ್‌ನವರು ಅವರಿಗೂ ಪೇಪರ್ ಸೋರಿಕೆ ಘಟನೆಗೂ ಯಾವುದೇ ಸಂಬಂಧವಿಲ್ಲ. ಇನ್ನು ಹೇಳಬೇಕೆಂದರೆ ಕೇರಳಕ್ಕೂ ನೀಟ್ ಪೇಪರ್ ಸೋರಿಕೆಗೂ ಲಿಂಕ್ ಇಲ್ಲ ಎಂದು ಸುದ್ದಿ ವರದಿಗಳು ಸ್ಪಷ್ಟಪಡಿಸಿದೆ. ಕೊಟ್ಟಕ್ಕಲ್ ಮುಸ್ಲಿಂ ಏರಿಯಾ ಆಗಿರುವುದರಿಂದ ಹೆಚ್ಚಿನ ರಾಂಕ್ ಇದೇ ಸಮುದಾಯದವರಿಗೆ ದೊರಕುವುದು ಸಾಮಾನ್ಯ. ಆದ್ದರಿಂದ ಈ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
NEET ವಿವಾದ:
05 ಮೇ, 2024 ರ ಪರೀಕ್ಷೆಯ ನಂತರ, NEET ನ ಆಡಳಿತದಲ್ಲಿ ಉದ್ದೇಶಪೂರ್ವಕ ಅಕ್ರಮಗಳ ಬಗ್ಗೆ ವಿವಾದವುಂಟಾಯಿತು. ವಿಶೇಷವಾಗಿ ಬಿಹಾರದಂತಹ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು ಹೊರಬಿದ್ದಿವೆ. ಹಲವಾರು ಅಭ್ಯರ್ಥಿಗಳು ಪಂಜಾಬ್ ಮತ್ತು ಹರಿಯಾಣ, ದೆಹಲಿ ಮತ್ತು ಛತ್ತೀಸ್‌ಗಢದ ಹೈಕೋರ್ಟ್‌ಗಳಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ, ಛತ್ತೀಸ್‌ಗಢದಲ್ಲಿ ಎರಡು ಮತ್ತು ಮೇಘಾಲಯ, ಸೂರತ್, ಬಹದ್ದೂರ್‌ಗಢ (ಹರಿಯಾಣ), ಮತ್ತು ಚಂಡೀಗಢದಲ್ಲಿ ತಲಾ ಒಂದು ಸೇರಿದಂತೆ ಕೆಲವು ಪರೀಕ್ಷಾ ಕೇಂದ್ರಗಳಳ್ಳಿ ಪರೀಕ್ಷೆ ತಡವಾಗಿ ಆರಂಭಗೊಂಡಿದೆ.
NTA ವಿದ್ಯಾರ್ಥಿಗಳ ಕೊರತೆಗಳನ್ನು ತಿಳಿದ ನಂತರ ಕಳೆದುಹೋದ ಸಮಯಕ್ಕೆ ಪರಿಹಾರವನ್ನು ಶಿಫಾರಸು ಮಾಡಿದೆ. ಇದರ ಪರಿಣಾಮವಾಗಿ, 1563 ಆಯ್ದ ಕೇಂದ್ರಗಳ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗಿದೆ. ಫಲಿತಾಂಶಗಳ ಪ್ರಕಟಣೆಯ ನಂತರ, ಗ್ರೇಸ್ ಅಂಕಗಳನ್ನು ನೀಡಲು ಬಳಸುವ ‘ನೊರ್ಮಲೈಝೇಷನ್ ಫಾರ್ಮುಲಾ’ದ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಹಲವಾರು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಈ ಕಾರಣದಿಂದಾಗಿ ಆರು ವಿದ್ಯಾರ್ಥಿಗಳು 720/720 ರಷ್ಟು ಫುಲ್ ಸ್ಕೋರ್ ಗಳಿಸಿದರು, ಅವರನ್ನು NEET (UG) ಆಲ್ ಇಂಡಿಯಾ ಟಾಪರ್‌ಗಳು ಎಂದು ಪ್ರಕಟಿಸಿದೆ.
ಇದಕ್ಕೆ ಸರಿಯಾಗಿ, ಈ 1563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳ ಹಂಚಿಕೆಯನ್ನು ಮರು ಮೌಲ್ಯಮಾಪನ ಮಾಡಲು NTA ಹೊಸ ಸಮಿತಿಯನ್ನು ರಚಿಸಿತು. ಸಮಿತಿಯು ಈ ವಿದ್ಯಾರ್ಥಿಗಳ ನೊರ್ಮಲೈಸ್ಡ್ ಮಾರ್ಕ್ಸ್ ಅನ್ನು ರದ್ದುಗೊಳಿಸಲು ಮತ್ತು ಮರುಪರೀಕ್ಷೆಯನ್ನು ಆಯೋಜಿಸಲು ಶಿಫಾರಸು ಮಾಡಿದೆ. ಮರುಪರೀಕ್ಷೆಯನ್ನು ತೆಗೆದುಕೊಳ್ಳದಿರುವ ವಿದ್ಯಾರ್ಥಿಗಳು ಮೇ 5 ರ ಪರೀಕ್ಷೆಯಿಂದ ತಮ್ಮ ಮೊದಲಿನ ನಿಜವಾದ ಅಂಕಗಳನ್ನೇ ಪಡೆಯಬೇಕು ಎಂದು ತಿಳಿಸಲಾಗಿದೆ. ಮರುಪರೀಕ್ಷೆಯನ್ನು ಬರೆಯಲು ಆಯ್ಕೆಯಾದವರು ತಮ್ಮ ಹಿಂದಿನ ಮಾರ್ಕ್ ಅನ್ನು ಅಮಾನ್ಯಗೊಳಿಸಲಿದೆ ಎಂದು ಸಮಿತಿ ಸುಪ್ರೀಂ ಕೋರ್ಟ್ ತಿಳಿಸಿದೆ ಇದಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
NTA ಈ ಶಿಫಾರಸುಗಳನ್ನು ಅನುಮೋದಿಸಿದೆ, ಮರುಪರೀಕ್ಷೆಯನ್ನು ಸಹ ನಿರ್ವಹಿಸಿದೆ. ಚಂಡೀಗಢ, ಛತ್ತೀಸ್‌ಗಢ, ಗುಜರಾತ್, ಹರಿಯಾಣ ಮತ್ತು ಮೇಘಾಲಯದ ಕೇಂದ್ರಗಳಲ್ಲಿ ನಡೆದ ಮರುಪರೀಕ್ಷೆಯಲ್ಲಿ ಸರಿಸುಮಾರು 813 ಅಭ್ಯರ್ಥಿಗಳು ಭಾಗವಹಿಸಿಸ್ಸು, ಆ ಪರೀಕ್ಷೆಯ ಫಲಿತಾಂಶ ಸಹ ಬಿಡುಗಡೆಯಾಗಿದೆ.
ಸಿಬಿಐ ಬಂಧಿಸಿದ ಪೇಪರ್ ಸೋರಿಕೆ ಶಂಕಿತರು :
ಪೇಪರ್ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಸಿಬಿಐ ದೇಶಾದ್ಯಂತ ಒಟ್ಟು ಏಳು ಮಂದಿಯನ್ನು ಬಂಧಿಸಿದೆ. ವರದಿಗಳ ಪ್ರಕಾರ, ಪೇಪರ್ ಸೋರಿಕೆಯು ಗುಜರಾತ್, ರಾಜಸ್ಥಾನ, ಬಿಹಾರ, ದೆಹಲಿ ಮತ್ತು ಜಾರ್ಖಂಡ್ ರಾಜ್ಯಗಳಿಗೆ ಸಂಬಂಧಿಸಿದೆ ಎಂದು ಸಿಬಿಐ ಗುರುತಿಸಿದೆ.
ಸೋರಿಕೆಯಲ್ಲಿ ಭಾಗಿಯಾಗಿರುವ ಶಂಕಿತರು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಎರಡು ವ್ಯಕ್ತಿಗಳು ಸಹ ಶಾಮೀಲಾಗಿದ್ದಾರೆ. ಇದರಲ್ಲಿ ಸಂಜೀವ್ ಮುಖಿಯಾ ಗ್ಯಾಂಗ್ ಪ್ರಮುಖ ಪಾತ್ರ ವಹಿಸಿದೆ ಎಂದು ಸಿಬಿಐ ಗುರುತಿಸಿದ್ದು, ಹಿಂದೂಗಳು ಮತ್ತು ಮುಸ್ಲಿಮರು ಭಾಗಿಯಾಗಿರುವುದನ್ನು ದೃಢಪಡಿಸಿದೆ. ವರದಿಗಳ ಪ್ರಕಾರ, ಶಂಕಿತರಿಂದ ವ್ಯವಸ್ಥೆಗೊಳಿಸಲಾದ ಅಭ್ಯರ್ಥಿಗಳು ಮೊದಲು ಒಡಿಶಾ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಿಂದ ಬಂದಿದ್ದಾರೆ ಎಂದು ಸಿಬಿಐ ಕಂಡುಹಿಡಿದಿದೆ.
ವೈರಲ್ Ad:
NEET 2024 ರ ರಾಂಕ್ ಪಡೆದವರನ್ನು ವೈರಲ್ ಕ್ಲಿಪ್ ನಲ್ಲಿ ಕಾಣಬಹುದಾಗಿದೆ, ಆದರೆ Adನಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಗಳು ಯಾವುದೇ ಪೇಪರ್ ಸೋರಿಕೆಯಲ್ಲಿ ಭಾಗಿಯಾಗಿಲ್ಲ. ವೈರಲ್ ಸ್ಕ್ರೀನ್‌ಶಾಟ್‌ನ ರೆವರ್ಸ್ ಇಮೇಜ್ ಹುಡುಕಾಟವು ನಮ್ಮನ್ನು ಕೇರಳದ NEET ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ವೆಬ್‌ಸೈಟ್‌ನಲ್ಲಿನ ಅದೇ ಕ್ಲಿಪ್ಪಿಂಗ್‌ಗೆ ಕರೆದೊಯ್ಯಿತು. 2024 ರ ನೀಟ್ ಪರೀಕ್ಷೆಯಲ್ಲಿ ‘ಯೂನಿವರ್ಸಲ್ ಇನ್‌ಸ್ಟಿಟ್ಯೂಟ್, ಕೊಟ್ಟಕ್ಕಲ್‘ ಸಂಸ್ಥೆಯಿಂದ ರಾಂಕ್ ಪಡೆದವರನ್ನು ಹೈಲೈಟ್ ಮಾಡುವ Ad ಅನ್ನು ಇಲ್ಲಿ ನೀಡಲಾಗಿದೆ.
ಹೆಚ್ಚಿನ ತನಿಖೆ ನಡೆಸಿದಾಗ ಮಾತೃಭೂಮಿ ಪತ್ರಿಕೆಯಲ್ಲಿ ಅದೇ Ad ಪ್ರಕಟವಾಗಿದೆ. ಹೆಚ್ಚುವರಿಯಾಗಿ, ‘ಯೂನಿವರ್ಸಲ್ ಇನ್‌ಸ್ಟಿಟ್ಯೂಟ್, ಕೊಟ್ಟಕ್ಕಲ್’ ಜೊತೆಗಿನ ನಮ್ಮ ಮಾತುಕತೆಯ ಸಮಯದಲ್ಲಿ, ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳು ಕೇರಳದವರು ಮತ್ತು ಅವರ ಸಂಸ್ಥೆಯಲ್ಲಿ ತರಬೇತಿ ಪಡೆದವರು ಎಂದು ಮ್ಯಾನೇಜ್‌ಮೆಂಟ್ ದೃಢಪಡಿಸಿತು. ಪೇಪರ್ ಸೋರಿಕೆಗೂ ಅಲ್ಲಿನ ವಿದ್ಯಾರ್ಥಿಗಳಿಗೂ ಯಾವುದೇ ಸಂಪರ್ಕವಿಲ್ಲ. ಇದರ ಜೊತೆಗೆ ತಪ್ಪು ಮಾಹಿತಿ ಹರಡುವವರ ವಿರುದ್ಧ ಕೇರಳ ಪೊಲೀಸರಿಗೆ ದೂರು ನೀಡಿರುವುದಾಗಿ ಎಂದು ಆಡಳಿತ ಮಂಡಳಿ ತಿಳಿಸಿದೆ.
ಈ ವರದಿಗಳ ಪ್ರಕಾರ, ಗುಜರಾತ್, ರಾಜಸ್ಥಾನ, ಬಿಹಾರ, ದೆಹಲಿ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಪೇಪರ್ ಸೋರಿಕೆಯಾಗಿದೆ ಎಂದು ಶಂಕಿಸಲಾಗಿದ್ದು, ಕೇರಳಕ್ಕೂ ಈ ಘಟನೆಗೂ ಯಾವುದೇ ಸಂಬಂಧ ಹೊಂದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಇನ್ನು, NTA ಪೀಡಿತ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮರುನಿರ್ವಹಿಸಿದ್ದು, ಅದಕ್ಕೆ ಅನುಗುಣವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಫಲಿತಾಂಶಗಳನ್ನು ಪರಿಷ್ಕರಿಸಲಿದೆ.
ಜಾಹೀರಾತಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮುಸ್ಲಿಮರು ಎಂಬ ಹೇಳಿಕೆಗೆ ಸಂಬಂಧಿಸಿದಂತೆ, 2011 ರ ಜನಗಣತಿಯ ಪ್ರಕಾರ ಕೇರಳದ ಕೊಟ್ಟಕ್ಕಲ್ ಪಟ್ಟಣದ ಜನಸಂಖ್ಯೆಯ 72.99% ರಷ್ಟು ಮುಸಲ್ಮಾನರಿದ್ದು, 26.13% ಹಿಂದೂಗಳಿದ್ದಾರೆ. ಹಾಗಾಗಿ ರಾಂಕ್ ಪಡೆದವರಲ್ಲಿ ಬಹುತೇಕರು ಮುಸ್ಲಿಂ ಸಮುದಾಯದವರೇ ಆಗಿರುವ ಸಾಧ್ಯತೆ ಇದೆ. ಮ್ಯಾನೇಜ್‌ಮೆಂಟ್ ಇದನ್ನು ದೃಢಪಡಿಸಿದೆ ಮತ್ತು ಇತರ ಸಮುದಾಯಗಳ ವಿದ್ಯಾರ್ಥಿಗಳು ಕೂಡ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದು ಅದನ್ನು ಅವರ Adನಲ್ಲಿ ಕಾಣಬಹುದಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನೀಟ್ 2024 ಕೇರಳ ಇನ್‌ಸ್ಟಿಟ್ಯೂಟ್‌ನ ಯಶಸ್ಸಿನ ಜಾಹೀರಾತನ್ನು ಪೇಪರ್ ಲೀಕ್ ನ ಪ್ರತಿಫಲ ಎಂದು ತಪ್ಪಾಗಿ ಹೇಳಲಾಗಿದೆ.