Fake News - Kannada
 

ಕೇರಳದ ವಾಜಪಲ್ಲಿ ಮಹಾದೇವ್ ದೇವಾಲಯದಲ್ಲಿ ಅರಳಿರುವ ‘Zhinzun Qianban ‘ ಕಮಲ ಅಪರೂಪದ ಹೂವೇನಲ್ಲ

0

ಕೇರಳದ ವಾಜಪಲ್ಲಿ ಮಹಾದೇವ್ ದೇವಸ್ಥಾನದಲ್ಲಿ ಅಪರೂಪದ ಸಾವಿರ ದಳಗಳ ಸಹಸ್ರ ಪದ್ಮ ಕಮಲ ಅರಳಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅತ್ಯಂತ ಅಪರೂಪದ ಈ ಸಹಸ್ರ ಪದ್ಮ ಕಮಲವನ್ನು ಲಲಿತಾ ಸಹಸ್ರನಾಮದಲ್ಲಿ ವಿವರಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಈ ಪೋಸ್ಟ್‍ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಪ್ರತಿಪಾದನೆ : ಕೇರಳದ ವಾಜಪಲ್ಲಿ ಮಹಾದೇವ ದೇವಸ್ಥಾನದಲ್ಲಿ ಅಪರೂಪದ ಸಾವಿರ ದಳಗಳ ಸಹಸ್ರ ಪದ್ಮ ಕಮಲ ಅರಳಿದೆ.

ನಿಜಾಂಶ : ಈ ವಿಡಿಯೋದಲ್ಲಿ ಕಾಣುವ ಸಾವಿರ ದಳಗಳ ಕಮಲ ವಾಜಪಲ್ಲಿ ಮಹಾದೇವ ದೇವಸ್ಥಾನದಲ್ಲಿ ಅರಳಿದ್ದು ನಿಜ. ಆದರೆ Zhinzun Qianban  ಎಂಬ ಈ ಕಮಲವು ಚೀನಾ, ವಿಯೆಟ್ನಾಂ ಮತ್ತು ಉತ್ತರ ಭಾರತದಲ್ಲಿ ನೈಸರ್ಗಿಕವಾಗಿ ಅರಳುತ್ತದೆ. ಚೀನೀ ಸಂಶೋಧಕ ಡಾಯಿಕ್ ಟಿಯಾನ್ 2009 ರಲ್ಲಿ ದಕ್ಷಿಣ ಚೀನಾ ಬೊಟಾನಿಕಲ್ ಗಾರ್ಡನ್ (SCBG) ನಲ್ಲಿ ಈ ಸಾವಿರ ದಳಗಳ ಹೂವನ್ನು ಕಂಡುಹಿಡಿದರು ಮತ್ತು ಅದಕ್ಕೆ Zhinzun Qianban ಎಂದು ಹೆಸರಿಸಿದರು. ಪಿ.ಎಸ್.ಪ್ರಮೋದ್ ಎಂಬ ವ್ಯಕ್ತಿ ಕೋಲ್ಕತ್ತಾದಿಂದ ಈ ಸಾವಿರ ದಳದ ಕಮಲದ ಬೀಜಗಳನ್ನು ಸಂಗ್ರಹಿಸಿ ವಾಜಪಲ್ಲಿ ಮಹಾದೇವ ದೇವಸ್ಥಾನಕ್ಕೆ ಕೊಟ್ಟರು. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ದಿಕ್ಕು ತಪ್ಪಿಸುವಂತಿದೆ.

ಪೋಸ್ಟ್‌ನಲ್ಲಿ ಹೇಳಲಾದ ವಿಷಯಕ್ಕೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಸರ್ಚ್ ಮಾಡಿದಾಗ, ಮನೋರಮಾ ಸುದ್ದಿ ಸಂಸ್ಥೆ ಜುಲೈ 2021 ರಲ್ಲಿ ಈ ದೃಶ್ಯಗಳಿರುವ ವೀಡಿಯೊ ಲಭ್ಯವಾಗಿದೆ. ಈ ವಿಡಿಯೋದ ವಿವರಣೆಯಲ್ಲಿ ಕೇರಳದ ವಾಜಪಲ್ಲಿ ಮಹಾದೇವ ದೇವಸ್ಥಾನದಲ್ಲಿ ಸಹಸ್ರ ಪದ್ಮ ಕಮಲ ಅರಳುತ್ತಿರುವ ದೃಶ್ಯಗಳನ್ನು ಹೇಳಲಾಗಿದೆ.

ವಾಜಪಲ್ಲಿ ಮಹಾದೇವ ದೇಗುಲದಲ್ಲಿರುವ ಈ ವಿಶೇಷ ಕಮಲದ ಸಂಪೂರ್ಣ ವಿವರಗಳನ್ನು ಮನೋರಮಾ ಸುದ್ದಿ ಸಂಸ್ಥೆ ಲೇಖನ ಪ್ರಕಟಿಸಿದೆ. Zhinzun Qianban ‘ ಎಂದು ಕರೆಯಲ್ಪಡುವ ಈ ನಿರ್ದಿಷ್ಟ ಕಮಲದ ಬೀಜವನ್ನು ಕೋಲ್ಕತ್ತಾದಿಂದ ಪಿಎಸ್ ಪ್ರಮೋದ್ ಎಂಬ ವ್ಯಕ್ತಿ ಸಂಗ್ರಹಿಸಿ ವಾಜಪಲ್ಲಿ ಮಹಾದೇವ ದೇವಸ್ಥಾನಕ್ಕೆ ನೀಡಲಾಯಿತು ಎಂದು ಹೇಳಲಾಗುತ್ತದೆ. ಚೀನಾ, ವಿಯೆಟ್ನಾಂ ಮತ್ತು ಉತ್ತರ ಭಾರತದ ಹಲವು ಭಾಗಗಳಲ್ಲಿ ಈ ಕಮಲ ಅರಳುತ್ತದೆ ಎಂದು ಈ ಲೇಖನ ಹೇಳುತ್ತದೆ.

ಚೀನೀ ಸಂಶೋಧಕ ಡೈಕ್ ಟಿಯಾನ್ ಈ ಸಾವಿರ ದಳಗಳ ಹೂವನ್ನು 2009 ರಲ್ಲಿ ದಕ್ಷಿಣ ಚೀನಾ ಬೊಟಾನಿಕಲ್ ಗಾರ್ಡನ್ (SCBG) ನಲ್ಲಿ ಕಂಡುಹಿಡಿದಿದ್ದನು. ಡೈಕ್ ಟಿಯಾನ್ ಈ ಹೂವಿಗೆ Zhinzun Qianban ‘ ಎಂದು ಹೆಸರಿಸಿದ್ದಾರೆ. ಈ  Zhinzun Qianban ‘ ಕಮಲವನ್ನು ಡೈಕ್ ಟಿಯೆನ್ ಅವರು 2010 ರಲ್ಲಿ ಇಂಟರ್ನ್ಯಾಷನಲ್ ವಾಟರ್ಲಿಲಿ ಮತ್ತು ವಾಟರ್ ಗಾರ್ಡನ್ ಸೊಸೈಟಿಯೊಂದಿಗೆ ನೋಂದಾಯಿಸಿದ್ದಾರೆ. ಈ ಕಮಲಗಳು ಚೀನಾದ ಅನೇಕ ಭಾಗಗಳಲ್ಲಿ ಈ ಹೂಗಳು ಕಂಡುಬರುತ್ತವೆ ಎಂದು ತಿಳಿದುಬಂದಿದೆ.

ಈ ‘Zhinzun Qianban ಕಮಲವನ್ನು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕೊಚ್ಚಿಯ ಗಣೇಶ್ ಕುಮಾರ್ ಎಂಬುವವರು ಬೆಳೆಸಿದ್ದರು. ದೈಕ್ ಟಿಯೆನ್‌ನಿಂದ Zhinzun Qianban ‘ ಕಮಲದ ಬೀಜವನ್ನು ನಾನೇ ತೆಗೆದುಕೊಂಡಿದ್ದೇನೆ ಎಂದು ಗಣೇಶ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು. ಈ ಸಾವಿರ ದಳಗಳ Zhinzun Qianban  ಹೂವನ್ನು ಭಾರತದ ಅನೇಕ ಭಾಗಗಳಲ್ಲಿ ಅನೇಕ ಜನರು ಬೆಳೆಯುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇರಳದ ವಾಜಪಲ್ಲಿ ಮಹಾದೇವ್ ದೇವಾಲಯದಲ್ಲಿ ಅರಳುತ್ತಿರುವ Zhinzun Qianban ‘ ಕಮಲವು ಅಪರೂಪದ ಹೂವಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

Share.

Comments are closed.

scroll