Fake News - Kannada
 

ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೊಗಳನ್ನು ನಮೀಬಿಯಾದಿಂದ ತರಲಾದ ಚೀತಾಗಳು ಎಂದು ಹಂಚಿಕೊಳ್ಳಲಾಗುತ್ತಿದೆ

0

2022 ರ ಸೆಪ್ಟೆಂಬರ್ 17 ರಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಫ್ರಿಕನ್ ಚೀತಾಗಳನ್ನು ಕಾಡಿಗೆ ಬಿಡುಗಡೆ ಮಾಡುವ ಮೂಲಕ ‘ಪ್ರಾಜೆಕ್ಟ್ ಚೀತಾ’ಕ್ಕೆ ಚಾಲನೆ ನೀಡಿದರು. ಅದೇ ಸಂದರ್ಭದಲ್ಲಿ ಚೀತಾಗಳ ಹಲವು ವೀಡಿಯೊಗಳನ್ನು ಹಂಚಿಕೊಳ್ಳುತ್ತ, ಈ ಚೀತಾಗಳು ಇತ್ತೀಚೆಗೆ ನಮೀಬಿಯಾದಿಂದ ಬಂದ ಚೀತಾದ ದೃಶ್ಯಗಳು ಎಂದು ಹೇಳಿಕೊಂಡು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟ್‌ಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ವಾಸ್ತವವಾಗಿ ಪರಿಶೀಲಿಸೋಣ.

ಪ್ರತಿಪಾದನೆ : “ಪ್ರಾಜೆಕ್ಟ್ ಚೀತಾ” ಅಡಿಯಲ್ಲಿ 17 ಸೆಪ್ಟೆಂಬರ್ 2022 ರಂದು ನಮೀಬಿಯಾದಿಂದ ಭಾರತಕ್ಕೆ ತರಲಾದ ಚಿರತೆಗಳು ಮಿಯಾಂವ್ ಎನ್ನುವ ದೃಶ್ಯಗಳು.

ನಿಜಾಂಶ : ಇದೇ ವೀಡಿಯೋವನ್ನು ಮೊದಲು ಟಿಕ್‌ಟಾಕ್‌ನಲ್ಲಿ 25 ನವೆಂಬರ್ 2021 ರಂದು ಯುಎಸ್‌ಎಯ ಮಿನ್ನೇಸೋಟದಲ್ಲಿರುವ ‘ದಿ ವೈಲ್ಡ್ ಕ್ಯಾಟ್ ಅಭಯಾರಣ್ಯ’ ದ ದೃಶ್ಯಗಳು ಎಂದು ಅಪ್‌ಲೋಡ್ ಮಾಡಿದೆ. ಈ ವಿಡಿಯೋದಲ್ಲಿ 11 ವರ್ಷದ ಕಿಟು ಮತ್ತು ಲಾವಣಿ ಹೆಸರಿನ ಚಿರತಗಳನ್ನು ಮೃಗಾಲಯದಿಂದ ತಂದಿರುವುದನ್ನು ತೋರಿಸುತ್ತದೆ. ಹಾಗಾಗಿ ಅವು ನಮೀಬಿಯಾದಿಂದ ಭಾರತಕ್ಕೆ ತಂದ ಚೀತಾಗಳಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ವೀಡಿಯೊದ ವಿಸ್ತೃತ ಆವೃತ್ತಿಯನ್ನು 26 ನವೆಂಬರ್ 2021 ರಂದು ರೆಡ್ಡಿಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಕಂಡುಬಂದಿದೆ. ವಿಸ್ತೃತ ಆವೃತ್ತಿಯು ಎರಡು ಚಿರತೆಗಳನ್ನು ಸಹೋದರರ ನಡುವಿನ ಬಂಧ, “ಕಿಟು ಮತ್ತು ಲಾವಣಿ ” ಎಂಬ ಶೀರ್ಷಿಕೆಯೊಂದಿಗೆ ತೋರಿಸುತ್ತದೆ.

ಅಲ್ಲದೆ, ವೀಡಿಯೊದಲ್ಲಿನ ವಾಟರ್‌ಮಾರ್ಕ್ ನೋಡಿದಾಗ ಇದು “@Wildcatsanctuary” ಎಂಬ ಬಳಕೆದಾರರ ಟಿಕ್‌ಟಾಕ್ ವೀಡಿಯೊ ಎಂದು ತೋರಿಸುತ್ತದೆ. ಇದರಿಂದ ಕ್ಲೂ ತೆಗೆದುಕೊಂಡು ಟಿಕ್‌ಟಾಕ್‌ನಲ್ಲಿ ಹುಡುಕಿದೆವು 25 ನವೆಂಬರ್ 2021 ರಂದು “ದಿ ವೈಲ್ಡ್‌ಕ್ಯಾಟ್ ಅಭಯಾರಣ್ಯ” ಪೋಸ್ಟ್ ಮಾಡಿದ ಮೂಲ ವೀಡಿಯೊವನ್ನು ಕಂಡುಕೊಂಡಿದ್ದೇವೆ.

ಆ ವಿಡಿಯೋ ವಿವರಣೆಯಲ್ಲಿ “ಕಿಟು ಮತ್ತು ಲಾವಣಿಯ ಮಧುರ ಸಂಬಂಧದಂತೆ ಯಾವುದೂ ‘ಕೃತಜ್ಞತೆ’ಯನ್ನು ಆವರಿಸುವುದಿಲ್ಲ” ಎಂದು ಬರೆಯಲಾಗಿದೆ. ಅವರ ವೆಬ್‌ಸೈಟ್ ಪ್ರಕಾರ, ವೈಲ್ಡ್‌ಕ್ಯಾಟ್ ಅಭಯಾರಣ್ಯವು USA, ಮಿನ್ನೇಸೋಟದಲ್ಲಿರುವ ಲಾಭರಹಿತ ಅಭಯಾರಣ್ಯವಾಗಿದೆ. ಅವರು ಅಗತ್ಯವಿರುವ ಕಾಡು ಬೆಕ್ಕುಗಳಿಗೆ ನೈಸರ್ಗಿಕ ಅಭಯಾರಣ್ಯವನ್ನು ಒದಗಿಸುತ್ತಾರೆ. 11 ವರ್ಷದ ಇಬ್ಬರು ಸಹೋದರರಾದ ಕಿಟು ಮತ್ತು ಲಾವಣಿ ಅವರನ್ನು ಏಪ್ರಿಲ್ 2021 ರಲ್ಲಿ ಮೃಗಾಲಯದಿಂದ ಅವರ ಅಭಯಾರಣ್ಯಕ್ಕೆ ಕರೆತರಲಾಯಿತು ಎಂದು ವೆಬ್‌ಸೈಟ್ ಹೇಳುತ್ತದೆ. ಈ ಚಿರತೆಗಳ ಬಗ್ಗೆ ಹೆಚ್ಚಿನದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಅಮೆರಿಕದ ಅಭಯಾರಣ್ಯದಲ್ಲಿ ಇರುವ ಚಿರತೆಯ ಹಳೆಯ ವೀಡಿಯೊಗಳನ್ನು ನಮೀಬಿಯಾದಿಂದ ತರಲಾದ ಭಾರತೀಯ ಚೀತಾದ ಇತ್ತೀಚಿನ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll