Fake News - Kannada
 

2022 ರಲ್ಲಿ ಗುಜರಾತಿನಲ್ಲಿ ನಡೆದ ಗಾರ್ಬಾ ಕಾರ್ಯಕ್ರಮವೊಂದರಲ್ಲಿ ಪೊಲೀಸರು ಕಲ್ಲು ತೂರಾಟದಲ್ಲಿ ಥಳಿಸುವ ಹಳೆಯ ವೀಡಿಯೊವನ್ನು ಇತ್ತೀಚೆನ ವಿಡಿಯೋ ಎಂದು ಹಂಚಿಕೊಳ್ಳಲಾಗುತ್ತಿದೆ

0

ಗುಜರಾತ್‌ನ ಖೇಡಾ ಪ್ರದೇಶದ ಮಸೀದಿಯೊಂದರ ಬಳಿ ನಡೆದ ಗರ್ಬಾ ಕಾರ್ಯಕ್ರಮಕ್ಕೆ ಮುಸ್ಲಿಂ ಯುವಕರು ಕಲ್ಲು ತೂರಾಟ ನಡೆಸಿ ಕೆಲವರು ಗಾಯಗೊಂಡ ಘಟನೆಯನ್ನು ತೋರಿಸು ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊ. ಪೊಲೀಸರು ಯುವಕರನ್ನು ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸಿರುವುದು ವರದಿಯಾಗಿದೆ. ಈ ಘಟನೆಯು 2024 ರಲ್ಲಿ ಸಂಭವಿಸಿದೆ ಎಂದು ಪೋಸ್ಟ್ ಹೇಳುತ್ತದೆ. ಹಾಗಾದರೆ ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಗುಜರಾತ್‌ನ ಮಸೀದಿಯೊಂದರ ಬಳಿ ನಡೆದ ಗಾರ್ಬಾ ಕಾರ್ಯಕ್ರಮಕ್ಕೆ ಕಲ್ಲು ತೂರಾಟ ನಡೆಸಿದ ಯುವಕರನ್ನು ಪೊಲೀಸರು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ 2024ರಲ್ಲಿ ನಡೆದಿದೆ.

ಫ್ಯಾಕ್ಟ್: ವೀಡಿಯೊದಲ್ಲಿನ ಘಟನೆಯು 03 ಅಕ್ಟೋಬರ್ 2022 ರಂದು ಗುಜರಾತ್‌ನ ಖೇಡಾದ ಉಂಧೇಲಾ ಗ್ರಾಮದಲ್ಲಿ ನಡೆದಿದೆ. ನವರಾತ್ರಿ ಹಬ್ಬದ ನಿಮಿತ್ತ ಗ್ರಾಮದಲ್ಲಿ ಗರ್ಬಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಮಸೀದಿ ಬಳಿ ಗರ್ಬಾ ನಡೆಸುವುದಕ್ಕೆ ಅಲ್ಲಿನ ಮುಸ್ಲಿಂ ಬಾಂಧವರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಲವರು ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಪೊಲೀಸರು 04 ಅಕ್ಟೋಬರ್ 2022 ರಂದು ಒಂಬತ್ತು ಜನರನ್ನು ಬಂಧಿಸಿ ಸಾರ್ವಜನಿಕವಾಗಿ ಥಳಿಸಿದರು. ಆ ಸಮಯದಲ್ಲಿ ನಡೆದ ಗಲಭೆಯಿಂದಾಗಿ ಪೊಲೀಸರ ಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸಲಾಯಿತು. ಆದರೆ, ಇದು ಇತ್ತೀಚಿನ ಘಟನೆಯಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪುದಾರಿಗೆಳೆಯುವಂತಿದೆ.

ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳ ಹಿಮ್ಮುಖ ಚಿತ್ರ ಹುಡುಕಾಟವು ನಮನ್ನು 04 ಅಕ್ಟೋಬರ್ 2022 ರಂದು NDTV ಪ್ರಕಟಿಸಿದ ಸುದ್ದಿ ವರದಿಯ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ಈ ವರದಿಯ ಪ್ರಕಾರ, ಪೊಲೀಸ್ ಸಿಬ್ಬಂದಿ ಕೆಲವು ಮುಸ್ಲಿಂ ಪುರುಷರನ್ನು ಕಂಬಕ್ಕೆ ಕಟ್ಟಿಹಾಕಿ ಬಂಧಿಸಲ್ಪಟ್ಟ ನಂತರ ಅವರನ್ನು ಹೊಡೆದಿದ್ದಾರೆ. ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ನವರಾತ್ರಿ ಗರ್ಬಾ ಸಂದರ್ಭದಲ್ಲಿ ಈ ಕಲ್ಲು ತೂರಾಟ ನಡೆದಿದೆ.

ಈ ಸುಳಿವನ್ನು ತೆಗೆದುಕೊಂಡು, ಗೂಗಲ್ ಕೀವರ್ಡ್ ಹುಡುಕಾಟವು ಅಕ್ಟೋಬರ್ 2022 ರಿಂದ (ಇಲ್ಲಿ, ಇಲ್ಲಿ) ಘಟನೆಯನ್ನು ವಿವರಿಸುವ ಮೀಡಿಯಾ ರಿಪೋರ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಈ ವರದಿಗಳ ಪ್ರಕಾರ, 03 ಅಕ್ಟೋಬರ್ 2022 ರಂದು, ಖೇಡಾದ ಉಂಧೇಲಾ ಗ್ರಾಮದಲ್ಲಿ ಗರ್ಬಾ ಕಾರ್ಯಕ್ರಮವೊಂದರಲ್ಲಿ ಕಲ್ಲು ತೂರಾಟ ನಡೆಡಿದ್ದು, ಘಟನೆಯಲ್ಲಿ ಆರು ಜನರು ಗಾಯಗೊಂದಿದ್ದಾರೆ. ಗ್ರಾಮದ ಸರಹದ್ದಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು, ಆದರೆ ಕೆಲವು ಮುಸ್ಲಿಂ ಗ್ರಾಮಸ್ಥರು ಇದನ್ನು ಮಸೀದಿ ಬಳಿ ನಡೆಸುವುದನ್ನು ವಿರೋಧಿಸಿದರು. ಇದರ ಫಲವಾಗಿ ಅಲ್ಲಿ ಕಲ್ಲು ತೂರಾಟ ನಡೆದಿದೆ. 04 ಅಕ್ಟೋಬರ್ 2022 ರಂದು, ಪೊಲೀಸರು ಒಂಬತ್ತು ಜನರನ್ನು ಬಂಧಿಸಿ ಸಾರ್ವಜನಿಕವಾಗಿ ಲಾಠಿಗಳಿಂದ ಹೊಡೆದಿದ್ದಾರೆ. ಗ್ರಾಮಸ್ಥರು ‘ಗುಜರಾತ್ ಪೊಲೀಸ್ ಜಿಂದಾಬಾದ್’ ಎಂದು ಸಂಭ್ರಮಪಟ್ಟಿದ್ದರು. ಆ ಸಮಯದಲ್ಲಿ ನಡೆದ ಗದ್ದಲದಲ್ಲಿ, ಪೊಲೀಸರ ಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸಲಾಯಿತು.

ಒಟ್ಟಾರೆಯಾಗಿ ಹೇಳುವುದಾದರೆ,  2022 ರಲ್ಲಿ ಗುಜರಾತ್‌ನ ಗರ್ಬಾ ಕಾರ್ಯಕ್ರಮವೊಂದರಲ್ಲಿ ಪೊಲೀಸರು ಕಲ್ಲು ತೂರಾಟಗಾರರನ್ನು ಥಳಿಸುವ ಹಳೆಯ ವೀಡಿಯೊವನ್ನು ಇತ್ತೀಚೆನ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

Share.

Comments are closed.

scroll