Fake News - Kannada
 

ಕುದುರೆ ಕೂದಲು ಹುಳುವಿನ ವೀಡಿಯೋವನ್ನು ಶಿವ ನಾಗ ಮರದ ಬೇರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

0

ಶಿವ ನಾಗಂ ಎಂಬ ಮರದ ಬೇರುಗಳನ್ನು ಕಡಿದ ನಂತರ 15 ದಿನಗಳವರೆಗೆ ಉಳಿಯುತ್ತದೆ ಎಂಬ ವಿಡಿಯೋ ಸಹಿತ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾವಿನಂತೆ ನುಲಿಯುತ್ತಿವೆ ಎಂದು ಪೋಸ್ಟ್ ಮೂಲಕ ಹೇಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ

ಪ್ರತಿಪಾದನೆ: ಬೇರು ಕತ್ತರಿಸಿದರೂ 15 ದಿನಗಳವರೆಗೆ ಬದುಕಬಲ್ಲ ಶಿವ ನಾಗ ಮರದ ವಿಡಿಯೋ.

ನಿಜಾಂಶ: ಶಿವ ನಾಗ ಮರ ಮತ್ತು ಅದರ ಬೇರುಗಳನ್ನು ಹುಡುಕಿದಾಗ ಅಂತಹ ಮರ ಇರುವುದರ ಕುರಿತು ಯಾವುದೇ ಪುರಾವೆಗಳು ಎಲ್ಲಿಯೂ ಕಂಡುಬಂದಿಲ್ಲ. ಕುದುರೆ ಕೂದಲಿನ ವರ್ಮ್ ಎಂಬ ಪರಾವಲಂಬಿಯನ್ನು ವೀಡಿಯೊ ತೋರಿಸುತ್ತದೆ. ಈ ಪರಾವಲಂಬಿಗಳು ಇತರ ಕೀಟಗಳ ಮೇಲೆ ದಾಳಿ ಮಾಡಿ ಅವುಗಳೊಳಗೆ ಬೆಳೆಯುತ್ತವೆ. ಅವು ಸಂಪೂರ್ಣವಾಗಿ ಬೆಳೆದಾಗ, ಕೀಟವನ್ನು ನೀರಿನಲ್ಲಿ ಜಿಗಿಯಲು ಮತ್ತು ದೇಹದಿಂದ ನಿರ್ಗಮಿಸಲು ಅವಕಾಶ ಮಾಡಿಕೊಡುತ್ತದೆ. ಮಲಯಾಳಂ ಟೈಮ್’ ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಡಾ.ಸುಜನಪಾಲನ್ ಅವರು ವೀಡಿಯೊ ಕುರಿತು ಬರೆದ ಲೇಖನದಲ್ಲಿ ಇದು ಮರದ ಬೇರುಗಳಲ್ಲ ಬದಲಾಗಿ ಕುದುರೆ ಕೂದಲಿನ ಹುಳು ಎಂದು ಸ್ಪಷ್ಟಪಡಿಸಿದ್ದರೆ. ಆದ್ದರಿಂದ, ಪೋಸ್ಟ್ ಮೂಲಕ ಪ್ರತಿಪಾದಿಸಿರುವುದು ತಪ್ಪಾಗಿದೆ.

ಶಿವ ನಾಗಂ ಮರ ಮತ್ತು ಅದರ ಬೇರುಗಳ ಕುರಿತು ಅಂತರ್ಜಾಲದಲ್ಲಿ ಹುಡುಕಿದಾಗ ಅಂತಹ ಮರದ ಅಸ್ತಿತ್ವದ ಬಗ್ಗೆ ಎಲ್ಲಿಯೂ ಯಾವುದೇ ಮಾಹಿತಿ ಕಂಡುಬಂದಿಲ್ಲ.

ವೀಡಿಯೊದ ಸ್ಕ್ರೀನ್‌ಶಾಟ್ ತೆಗೆದುಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅದೇ ದೃಶ್ಯಗಳಿರುವ YouTube ವೀಡಿಯೊ ಒಂದು ಕಂಡುಬಂದಿದೆ. ಆದರೆ ವಿಡಿಯೋದಲ್ಲಿ ಇರುವುದು ಕುದುರೆ ಕೂದಲಿನ ವರ್ಮ್ ಎಂಬ ಪರಾವಲಂಬಿ. ಈ ಪರಾವಲಂಬಿಗಳು ಇತರ ಕೀಟಗಳ ಮೇಲೆ ದಾಳಿ ಮಾಡಿ ಅವುಗಳೊಳಗೆ ಬೆಳೆಯುತ್ತವೆ. ಅದು ಸಂಪೂರ್ಣವಾಗಿ ಬೆಳೆದಾಗ,  ಕೀಟವನ್ನು ನೀರಿನಲ್ಲಿ ಜಿಗಿಯಲು ಮತ್ತು ದೇಹದಿಂದ ನಿರ್ಗಮಿಸಲು ಅವಕಾಶ ಮಾಡಿಕೊಡುತ್ತದೆ. ಈ ಯೂಟ್ಯೂಬ್ ವೀಡಿಯೋ ನೀರಿನಿಂದ ಹೇಗೆ ಹೊರಬರುವುದು ಎಂಬುದನ್ನು ತೋರಿಸುತ್ತದೆ.

ಹಾರ್ಸ್‌ ಹೇರ್ ವರ್ಮ್‌ಗಳನ್ನು ಗೋರ್ಡಿಯನ್ ವರ್ಮ್‌ಗಳು ಎಂದೂ ಕರೆಯುತ್ತಾರೆ, ಇದು ನೆಮಟೊಮಾರ್ಫಿಕ್ ಗುಂಪಿಗೆ ಸೇರಿದೆ. ಅವು ನೆಮಟೋಡ್‌ಗಳನ್ನು ಹೋಲುತ್ತವೆ, ಆದರೆ ಹೆಚ್ಚು ಉದ್ದ (4 ಇಂಚುಗಳು ಅಥವಾ ಹೆಚ್ಚು) ಮತ್ತು ಹೆಚ್ಚು ತೆಳ್ಳಗಿರುತ್ತವೆ (1/80 ರಿಂದ 1/10 ಇಂಚು ವ್ಯಾಸ). ಇವು ನೀರು ಅಥವಾ ತೇವಾಂಶದ ಪ್ರದೇಶಗಳಲ್ಲಿ ಉತ್ತಮವಾಗಿ ಕಾಣುತ್ತವೆ.

ಮಲಯಾಳಂ ಟೈಮ್ ಅವರು ಈ ವಿಡಿಯೋ ಕುರಿತು ಬರೆದ ಲೇಖನದಲ್ಲಿ ಕೇರಳ ಅರಣ್ಯ ಸಂಶೋಧನಾ ಸಂಸ್ಥೆಯ ಡಾ.ಸುಜನಪಾಲನ್ ಗಾರಿಗೆ ಈ ಬಗ್ಗೆ ಕೇಳಿದ್ದಾರೆ. ಇದು ಮರದ ಬೇರುಗಳಲ್ಲ, ಕುದುರೆಯ ಹುಳು ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಒಟ್ಟಾರೆಯಾಗಿ ಕುದುರೆ ಕೂದಲು ಹುಳುವಿನ ವೀಡಿಯೋವನ್ನು ಶಿವ ನಾಗ ಮರದ ಬೇರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Share.

About Author

Comments are closed.

scroll