ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಸ್ಕ್ ಧರಿಸಿ ಗುರುದ್ವಾರದಲ್ಲಿ ಊಟ ಮಾಡುತ್ತಿದ್ದಾರೆ ಎಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ರಾಹುಲ್ ಗಾಂಧಿ ನಿಜವಾಗಿ ಅಲ್ಲಿ ಊಟ ಮಾಡಿಲ್ಲ, ಕೇವಲ ಫೋಟೋಗೆ ಪೋಸ್ ನೀಡಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.
![](https://factly.in/wp-content/uploads//2022/02/Rahul-Gandhi-eating-with-mask-1024x930.jpg)
ಪ್ರತಿಪಾದನೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಸ್ಕ್ ಧರಿಸಿ ಗುರುದ್ವಾರದಲ್ಲಿ ಊಟ ಮಾಡುತ್ತಿರುವ ದೃಶ್ಯಗಳು
ನಿಜಾಂಶ: ಪಂಜಾಬ್ ಚುನಾವಣೆಯ ಹಿನ್ನೆಲೆಯಲ್ಲಿ ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್ (ಗೋಲ್ಡನ್ ಟೆಂಪಲ್) ಗೆ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ವೀಡಿಯೊ ಇದು. ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಊಟ ಮಾಡುವ ಮುನ್ನ ತೆಗೆದ ದೃಶ್ಯಗಳನ್ನು ತೋರಿಸಲಾಗಿದೆ. ರಾಹುಲ್ ಗಾಂಧಿ ಊಟ ಮಾಡುವಾಗ ಮಾಸ್ಕ್ ಧರಿಸಿರಲಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದ ಸ್ಕ್ರೀನ್ ಶಾಟ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಪಂಜಾಬ್ ಚುನಾವಣೆಯ ಹಿನ್ನೆಲೆಯಲ್ಲಿ ಅಮೃತಸರದ ಹರ್ಮಂದಿರ್ ಸಾಹಿಬ್ (ಗೋಲ್ಡನ್ ಟೆಂಪಲ್) ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ವೀಡಿಯೊವ ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಅವರು ಶ್ರೀ ಹರ್ಮಂದಿರ್ ಸಾಹಿಬ್ (ಗೋಲ್ಡನ್ ಟೆಂಪಲ್) ನಲ್ಲಿ ಊಟ ಮಾಡುತ್ತಿರುವ ವೀಡಿಯೊವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಮುಖಕ್ಕೆ ಹಾಕಿಕೊಂಡಿದ್ದ ಮಾಸ್ಕ್ ತೆಗೆದು ಊಟ ಮಾಡುತ್ತಿರುವುದು ಸ್ಪಷ್ಟವಾಗಿ ವಿಡಿಯೋದಲ್ಲಿದೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ರಾಹುಲ್ ಗಾಂಧಿ ಆಹಾರ ಸೇವಿಸುವ ಮುನ್ನ ತೆಗೆದ ದೃಶ್ಯಗಳನ್ನು ತೋರಿಸಲಾಗಿದೆ.
ಗುರುದ್ವಾರದಲ್ಲಿ ರಾಹುಲ್ ಗಾಂಧಿಯವರು ತಮ್ಮ ಮಾಸ್ಕ್ ತೆಗೆದು ಊಟ ಮಾಡುತ್ತಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ಹಲವಾರು ಸುದ್ದಿ ಸಂಸ್ಥೆಗಳು ಪ್ರಕಟಿಸಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರದಲ್ಲಿ ರಾಹುಲ್ ಗಾಂಧಿ ಊಟ ಮಾಡಲು ಪ್ರಾರಂಭಿಸುವ ಮೊದಲು ತೆಗೆದ ದೃಶ್ಯಗಳೆಂದು ಖಚಿತವಾಗಿದೆ.
![](https://factly.in/wp-content/uploads//2022/02/Rahul-Gandhi-eating-langar-with-a-mask-on-face-Image-2.jpg)
ತಮಿಳುನಾಡಿನ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಊಟದ ನಂತರ ಮಾಸ್ಕ್ ಧರಿಸಿ ಅವರ ಪಕ್ಕದಲ್ಲಿ ಕುಳಿತಿರುವ ಜನರೊಂದಿಗೆ ಮಾತನಾಡುತ್ತಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಇದೇ ರೀತಿ ಪ್ರತಿಪಾದಿಸಲಾಗಿತ್ತು. ಅದರ ಕುರಿತು ಫ್ಯಾಕ್ಟ್‌ಚೆಕ್ ಲೇಖನವನ್ನು ಈ ಹಿಂದೆ ಫ್ಯಾಕ್ಟ್ಲಿ ವರದಿ ಮಾಡಿತ್ತು .
ಒಟ್ಟಾರೆ ಹೇಳುವುದಾದರೆ, ರಾಹುಲ್ ಗಾಂಧಿ ಅವರು ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರದಲ್ಲಿ ಊಟ ಸೇವಿಸುವ ಮುನ್ನ ತೆಗೆದ ಫೋಟೋವನ್ನು ರಾಹುಲ್ ಗಾಂಧಿ ಮಾಸ್ಕ್ ಧರಿಸಿ ಊಟ ಮಾಡುತ್ತಿರುವ ಫೋಟೋಗಳೆಂದು ತಪ್ಪಾಗಿ ಹಂಚಿಕೊಳ್ಳುತ್ತಿದ್ದಾರೆ.