ಬಾಂಗ್ಲಾದೇಶದಲ್ಲಿ ಬಾಬರಿ ಮಸೀದಿ (ಮಸೀದಿ) ಧ್ವಂಸದ ದೃಶ್ಯಗಳನ್ನು ಬೃಹತ್ ಪರದೆಗಳ ಮೇಲೆ ಪ್ರದರ್ಶಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿವಿಡಿಯೋವೊಂದು ವೈರಲ್ (ಇಲ್ಲಿ) ಆಗುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲು ಇದನ್ನು ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.ಹಾಗಾದರೆ ಈ ಪೋಸ್ಟ್ ನಲ್ಲಿ ಮಾಡಲಾದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಬಾಬರಿ ಮಸೀದಿ ಧ್ವಂಸವನ್ನು ಬಾಂಗ್ಲಾದೇಶದಲ್ಲಿ ಬೃಹತ್ ಪರದೆಗಳ ಮೇಲೆ ಪ್ರದರ್ಶಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಫ್ಯಾಕ್ಟ್: ವೀಡಿಯೊದಲ್ಲಿರುವ ಘಟನೆ ಬಾಂಗ್ಲಾದೇಶದಿಂದಲ್ಲ, ಮಹಾರಾಷ್ಟ್ರದ ಥಾಣೆಯದಾಗಿದೆ. ಬಾಂಗ್ಲಾದೇಶದಲ್ಲಿ ಅಂತಹ ಪ್ರದರ್ಶನಗಳು ನಡೆಯುತ್ತಿರುವ ಬಗ್ಗೆ ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ. ಆದ್ದರಿಂದ, ಈ ಪೋಸ್ಟ್‌ನಲ್ಲಿ ಮಾಡಲಾದ ಕ್ಲೇಮ್ ತಪ್ಪಾಗಿದೆ.
ವೈರಲ್ ಆಗಿರುವ ಕ್ಲೇಮ್ ನ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಬಾಂಗ್ಲಾದೇಶದಲ್ಲಿ ಬಾಬರಿ ಮಸೀದಿ ಧ್ವಂಸದ ಪ್ರದರ್ಶನಗಳನ್ನು ಆಯೋಜಿಸಲಾಗುತ್ತಿದೆ ಎಂಬ ಹೇಳಿಕೆಯನ್ನು ದೃಢೀಕರಿಸಲು ನಮಗೆ ಯಾವುದೇ ವಿಶ್ವಾಸಾರ್ಹ ಮಾಹಿತಿ ಅಥವಾ ಸುದ್ದಿ ವರದಿಗಳನ್ನು ಕಂಡುಬಂದಿಲ್ಲ.
ವೈರಲ್ ಆಗಿರುವ ವೀಡಿಯೊವನ್ನು ಸರಿಯಾಗಿ ಗಮನಿಸಿದಾಗ, ಬಾಬರಿ ಮಸೀದಿ ವೀಡಿಯೊವನ್ನು ಪ್ರದರ್ಶಿಸಲಾಗುತ್ತಿರುವ ಪರದೆಯ ಕೆಳಭಾಗದಲ್ಲಿ ಬರೆಯಲಾದ ಬರಹವನ್ನು ನಾವು ಗಮನಿಸಿದ್ದೇವೆ. ಭಾರತೀಯ ರಾಜಕೀಯ ಪಕ್ಷವಾದ ‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ ಎಂದು ಇದರಲ್ಲಿ ಬರೆಯಲಾಗಿದೆ. ವೀಡಿಯೊದಲ್ಲಿ ಕಂಡುಬರುವ ಸ್ಥಳದಲ್ಲಿ SDPI ಧ್ವಜಗಳನ್ನು ಇರಿಸಿರುವುದನ್ನು ಸಹ ನಾವು ಗಮನಿಸಿದ್ದೇವೆ.

ಇದಲ್ಲದೆ, SDPI ಈ ವೀಡಿಯೊವನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ನಳ್ಳಿ ಅಪ್‌ಲೋಡ್ ಮಾಡಿದೆಯೇ ಎಂದು ನಾವು ಇಂಟರ್ನೆಟ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದು SDPI ಮುಂಬ್ರಾ ಕಲ್ವಾ (ಥಾಣೆಯ ಪ್ರದೇಶಗಳು) ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ನಮ್ಮನ್ನು ಕರೆದೊಯ್ಯಿತು, ಅದರಲ್ಲಿ ಅದೇ ವೀಡಿಯೊವನ್ನು ಕಾಣಬಹುದಾಗಿದೆ.
ಈ ಪೋಸ್ಟ್‌ನ ವಿವರಣೆಯ ಪ್ರಕಾರ, ಇಲ್ಲಿರುವ ದೃಶ್ಯಗಳು ಮುಂಬ್ರಾದ ದಾರುಲ್ ಫಲಾಹ್‌ನಲ್ಲಿ ಪ್ರದರ್ಶಿಸಲಾದ ‘ಬಾಬರಿ ಮಸೀದಿ ಟೈಮ್‌ಲೈನ್ ಪ್ರದರ್ಶನ’ವನ್ನು ತೋರಿಸುತ್ತವೆ. ಹೆಚ್ಚುವರಿಯಾಗಿ, ನಾವು ಅದೇ ವೀಡಿಯೊವನ್ನು SDPI ಮುಂಬ್ರಾದ ಫೇಸ್‌ಬುಕ್ ಪೇಜ್ನಲ್ಲಿ ಸಹ ಕಂಡುಕೊಂಡಿದ್ದೇವೆ. ಅವರ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ.
SDPI ಮಾಡಿದ ಪೋಸ್ಟ್‌ಗಳಲ್ಲಿ ಉಲ್ಲೇಖಿಸಲಾದ ಸ್ಥಳವನ್ನು ಖಚಿತಪಡಿಸಲು, ನಾವು Google ಮ್ಯಾಪ್ನಲ್ಲಿ ದಾರುಲ್ ಫಲಾಹ್, ಮುಂಬ್ರಾವನ್ನು ಹುಡುಕಿದ್ದು, ಅದು ಮುಂಬ್ರಾದಲ್ಲಿರುವ ಮಸೀದಿ ಎಂದು ಕಂಡುಕೊಂಡೆವು. ಈ ಮಸೀದಿಯ ದೃಶ್ಯಗಳನ್ನು ವೈರಲ್ ವೀಡಿಯೊದಲ್ಲಿಯೂ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದ ಥಾಣೆಯಲ್ಲಿ ಪ್ರದರ್ಶಿಸಲಾದ ಬಾಬರಿ ಮಸೀದಿ ಧ್ವಂಸ ಸಮಯದ ವೀಡಿಯೊವನ್ನು ಬಾಂಗ್ಲಾದೇಶದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.