ಉಕ್ರೇನ್ ಸೈನಿಕರು ಅಮೇರಿಕನ್ FGM-148 ಜಾವೆಲಿನ್ ಕ್ಷಿಪಣಿಗಳೊಂದಿಗೆ ರಷ್ಯನ್ ಮಿಲಿಟರಿ ಟ್ಯಾಂಕರ್‌ಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯಗಳೆಂದು ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ರಷ್ಯಾ-ಉಕ್ರೇನ್ ಮಧ್ಯ ಭೀಕರ ಯುದ್ದದ ದೃಶ್ಯಾವಳಿಗಳು ಎಂದು ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಉಕ್ರೇನ್ ಸೈನಿಕರು ಅಮೇರಿಕನ್ FGM-148 ಜಾವೆಲಿನ್ ಕ್ಷಿಪಣಿಗಳೊಂದಿಗೆ ರಷ್ಯನ್ ಮಿಲಿಟರಿ ಟ್ಯಾಂಕುಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯಗಳು.
ನಿಜಾಂಶ: ಈ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ದೃಶ್ಯಾವಳಿಗಳು ಅರ್ಮಾ 3 ಎಂಬ ವಿಡಿಯೋ ಗೇಮ್ ಸಾಫ್ಟ್‌ವೇರ್ ಮೂಲಕ ವಿನ್ಯಾಸಗೊಳಿಸಿದ ಒಂದು ಸಿಮ್ಯುಲೇಶನ್ ವೀಡಿಯೊ. ಈ ವೀಡಿಯೋದಲ್ಲಿ ಕಾಣುತ್ತಿರುವುದು ನಿಜವಾದ ಯುದ್ದದ ದೃಶ್ಯಗಳಲ್ಲ. ರಷ್ಯಾ-ಉಕ್ರೆನ್ ನಡುವೆ ಪ್ರಸ್ತುತ ನಡೆಯುತ್ತಿರುವ ಯುದ್ದಕ್ಕೂ ಈ ವಿಡಿಯೋ ದೃಶ್ಯಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಶೇರ್ ಮಾಡಿದ ವೀಡಿಯೊದ ಸ್ಕ್ರೀನ್ ಶಾಟ್ ಅನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಇದೇ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ಇತ್ತೀಚೆಗೆ ಒಬ್ಬರು ಟ್ವೀಟ್ ಮಾಡಿದ್ದಾರೆ. “ಈ ವೀಡಿಯೊ ಆರ್ಮಾ 3 ಗೇಮಿಂಗ್ ಸಾಫ್ಟ್‌ವೇರ್ ಅನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ, ಈ ವೀಡಿಯೊ ರಷ್ಯಾ-ಉಕ್ರೆನ್ ಮಧ್ಯದಲ್ಲಿ ನಡೆಯುತ್ತಿರುವ ಯುದ್ದಕ್ಕೆ ಸಂಬಂಧಿಸಿಲ್ಲ ಎಂದು ಟ್ವೀಟ್‌ನಲ್ಲಿ ವಿವರಿಸಲಾಗಿದೆ.
ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊಗಾಗಿ ಹುಡುಕಿದಾಗ ಇದೇ ದೃಶ್ಯಗಳನ್ನು ಹೊಂದಿರುವ ವೀಡಿಯೊವನ್ನು ‘MILMAN’ ಎಂಬ ಯೂಟ್ಯೂಬ್ ಚಾನಲ್ 20 ಜುಲೈ 2022 ರಂದು ಪ್ರಕಟಿಸಿದೆ. ಈ ವೀಡಿಯೊವನ್ನು “ಅರ್ಮಾ 3 ಗೇಮ್ (ಮಿಲಿಟರಿ ಸಿಮುಲ್ಟೇಶನ್)”, ಎಂಬ ಶೀರ್ಷಿಕೆಯೊಂದಿಗೆ ಈ ಯೂಟ್ಯೂಬ್ ಚಾನೆಲ್ ಪಬ್ಲಿಷ್ ಮಾಡಿದೆ. ಈ ವೀಡಿಯೊದಲ್ಲಿ ಗೋಚರಿಸುವ ದೃಶ್ಯಗಳು ಕೇವಲ ಆರ್ಮಾ 3 ಎಂಬ ವೀಡಿಯೊ ಗೇಮ್ ಸಾಫ್ಟ್‌ವೇರ್ ಮೂಲಕ ರೂಪುಗೊಂಡ ಒಂದು ಸಿಮ್ಯುಲೇಶನ್ ವೀಡಿಯೊ ಎಂದು ವಿವರಣೆಯಲ್ಲಿ ಸ್ಪಷ್ಟವಾಗಿ ಸೂಚಿಸುತ್ತದೆ. ಆರ್ಮಾ 3 ಎಂಬುದು ವರ್ಚ್ಯುವಲ್ ರಿಯಾಲಿಟಿನಿ ಬಳಸಿ ವಿನ್ಯಾಸಗೊಳಿಸಿದ ಒಂದು ಮಿಲಿಟರಿ ವಿಡಿಯೋ ಗೇಮ್. ‘MILMAN’ ಯೂಟ್ಯೂಬ್ ಚಾನೆಲ್‌ನಲ್ಲಿ ಪಬ್ಲಿಷ್ ಮಾಡಿದ Arma 3 ಗೇಮಿಂಗ್ ವೀಡಿಯೊಗಳನ್ನು ಇಲ್ಲಿ, ಇಲ್ಲಿ ಕಾಣಬಹುದು.
ಇದುವರೆಗೆ, ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆಯೊಂದಿಗೆ ಇಂತಹ ಆರ್ಮಾ 3 ಸಿಮ್ಯುಲೇಶನಂತಹ ವೀಡಿಯೊಗಳನ್ನು ಹಂಚಿಕೊಂಡಾಗ, ಇವುಗಳಿಗೆ ಸಂಬಂಧಿಸಿದಂತೆ ಫ್ಯಾಕ್ಟ್‌ಲಿ ಫ್ಯಾಕ್ಟ್-ಚೆಕ್ ಲೇಖನಗಳನ್ನು ಪ್ರಕಟಿಸಿದೆ. ಅವುಗಳನ್ನು ಇಲ್ಲಿ, ಇಲ್ಲಿ ಕಾಣಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ವಿಡಿಯೋ ಗೇಮ್ ದೃಶ್ಯಗಳನ್ನು ತೋರಿಸುತ್ತಾ ಉಕ್ರೇನ್ ಕ್ಷಿಪಣಿಗಳೊಂದಿಗೆ ರಷ್ಯನ್ ಮಿಲಿಟರಿ ಟ್ಯಾಂಕುಗಳನ್ನು ದ್ವಂಸ ಮಾಡುತ್ತಿರುವ ದೃಶ್ಯಗಳು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.