ಫ್ರಾನ್ಸ್‌ನ ಬೀದಿಗಳಲ್ಲಿ ಸಾವಿರಾರು ಮುಸ್ಲಿಮರು ನಮಾಜ್ ಮಾಡುತ್ತಿರುವ ಇತ್ತೀಚಿನ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಪ್ರತಿಪಾದನೆ: ಫ್ರಾನ್ಸ್‌ನ ಬೀದಿಗಳಲ್ಲಿ ಮುಸ್ಲಿಮರು ನಮಾಜ್ ಮಾಡುವ ವಿಡಿಯೋ.
ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊವು ರಷ್ಯಾದ ಮಾಸ್ಕೋ ಕ್ಯಾಥೆಡ್ರಲ್ ಮಸೀದಿಯ ಹೊರಗೆ ಸಾವಿರಾರು ಮುಸ್ಲಿಮರು ನಮಾಜ್ ಮಾಡುವುದನ್ನು ತೋರಿಸುತ್ತದೆ. ಪ್ರತಿ ವರ್ಷ, ಮಾಸ್ಕೋದಲ್ಲಿ ಮುಸ್ಲಿಮರು ರಂಜಾನ್ ತಿಂಗಳಲ್ಲಿ ಕ್ಯಾಥೆಡ್ರಲ್ ಮಸೀದಿಯ ಹೊರಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ವಿಡಿಯೋಗೂ ಫ್ರಾನ್ಸ್‌ಗೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ಸ್ಕ್ರೀನ್‌ಶಾಟ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು ಅದೇ ವೀಡಿಯೊವನ್ನು ಪತ್ರಕರ್ತ ಮತ್ತು ಅಲ್-ವಾಹಾ ಮ್ಯಾಗಜೀನ್‌ನ ಮುಖ್ಯ ಸಂಪಾದಕರಾದ ಹಮ್ಮೌದ್ ಅಲ್-ತುಕಿ ಅವರು 03 ಮೇ 2022 ರಂದು ಟ್ವೀಟ್ ಮಾಡಿರುವುದು ಲಭ್ಯವಾಗಿದೆ. ರಷ್ಯಾದ ಮಾಸ್ಕೋದಲ್ಲಿ ಈದ್ ಅಲ್-ಫಿತರ್ ಪ್ರಾರ್ಥನೆಯ ದೃಶ್ಯಗಳು ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ನಾವು ಹೆಚ್ಚು ವಿಶ್ವಾಸಾರ್ಹ ಮೂಲಗಳನ್ನು ಹುಡುಕಿದಾಗ, ‘ಯೆನಿ ಸಫಕ್’ ಮತ್ತು ಇತರ ಟರ್ಕಿಶ್ ಸುದ್ದಿ ವೆಬ್‌ಸೈಟ್‌ಗಳ ಲೇಖನಗಳಲ್ಲಿ ಪ್ರಕಟವಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ವೀಡಿಯೊವನ್ನು ಹಂಚಿಕೊಳ್ಳುವ ಈ ಸುದ್ದಿ ವೆಬ್‌ಸೈಟ್‌ಗಳು ಮಾಸ್ಕೋದ ಬೀದಿಗಳಲ್ಲಿ ಸಾವಿರಾರು ಮುಸ್ಲಿಮರು ಈದ್ ಪ್ರಾರ್ಥನೆಗಳನ್ನು ಸಲ್ಲಿಸುತ್ತಿರುವ ದೃಶ್ಯಗಳು ಎಂದು ವರದಿ ಮಾಡಿದೆ. ಮಸೀದಿಗಳಲ್ಲಿ ಜಾಗ ಸಿಗದ ಕಾರಣ ಮುಸ್ಲಿಮರು ತಮ್ಮ ಪ್ರಾರ್ಥನಾ ಮ್ಯಾಟ್‌ಗಳನ್ನು ಬಳಸಿ ಹೊರಗೆ ಪ್ರಾರ್ಥನೆ ಮಾಡಿದ್ದಾರೆ ಎಂದು ಅವರು ವರದಿ ಮಾಡಿದ್ದಾರೆ.
ವೀಡಿಯೋವನ್ನು ಕೂಲಂಕುಷವಾಗಿ ಅವಲೋಕಿಸಿದಾಗ ಚಿನ್ನದ ಗೋರಿ ಇರುವ ಮಸೀದಿಯನ್ನು ಗಮನಿಸಬಹುದು. ಮಾಹಿತಿ ಸಂಪರ್ಕ ಕೇಂದ್ರದ ನಿರ್ದೇಶಕ ಬೆಂಜಮಿನ್ ಸ್ಟ್ರೈಕ್ ಅವರು ವೀಡಿಯೊದಲ್ಲಿ ಕಂಡುಬರುವ ಮಸೀದಿ ರಷ್ಯಾದ ಮಾಸ್ಕೋ ಕ್ಯಾಥೆಡ್ರಲ್ ಮಸೀದಿ ಎಂದು ಖಚಿತಪಡಿಸಿದ್ದಾರೆ. ನಾವು ಮಾಸ್ಕೋ ಕ್ಯಾಥೆಡ್ರಲ್ ಮಸೀದಿಯ ಚಿತ್ರಗಳನ್ನು ವೀಡಿಯೊದಲ್ಲಿ ಕಂಡುಬರುವ ರಚನೆಯೊಂದಿಗೆ ಹೋಲಿಸಿದಾಗ, ವೀಡಿಯೊವು ರಷ್ಯಾದ ಮಾಸ್ಕೋ ಕ್ಯಾಥೆಡ್ರಲ್ ಮಸೀದಿಯಲ್ಲಿ ಪ್ರಾರ್ಥನೆಗಳನ್ನು ತೋರಿಸುತ್ತದೆ ಎಂದು ದೃಢಪಡಿಸಲಾಗಿದೆ.
2013 ರಲ್ಲಿ, ‘ಬಿಬಿಸಿ ವರ್ಲ್ಡ್’ ವರದಿಗಾರ ಓಲ್ಗಾ ಇವ್ಶಿನಾ ಮಾಸ್ಕೋದ ಬೀದಿಗಳಲ್ಲಿ ಮುಸ್ಲಿಮರ ಪ್ರಾರ್ಥನೆಯ ಚಿತ್ರವನ್ನು ಟ್ವೀಟ್ ಮಾಡಿದ್ದು. ಮಾಸ್ಕೋ ಕ್ಯಾಥೆಡ್ರಲ್ ಮಸೀದಿಯ ಬಳಿ ಈದ್ ಪ್ರಾರ್ಥನೆಗಳನ್ನು ತೋರಿಸುವ ಕೆಲವು ಇತರ ವೀಡಿಯೊಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ವೀಡಿಯೊವನ್ನು ತೆಗೆದ ನಿಖರವಾದ ದಿನಾಂಕ ಮತ್ತು ಸಮಯವನ್ನು ನಾವು ಖಚಿತಪಡಿಸಲು ಸಾಧ್ಯವಾಗದಿದ್ದರೂ, ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊ ರಷ್ಯಾದ ಮಾಸ್ಕೋದಲ್ಲಿ ನಡೆದ ಘಟನೆಯನ್ನು ತೋರಿಸುತ್ತದೆ ಎಂದು ಖಚಿತ ಪಡಿಸಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ರಷ್ಯಾದ ಮಾಸ್ಕೋದಲ್ಲಿ ತೆಗೆದ ವೀಡಿಯೊವನ್ನು ಫ್ರಾನ್ಸ್‌ನ ಬೀದಿಗಳಲ್ಲಿ ಮುಸ್ಲಿಮರು ನಮಾಜ್ ಮಾಡುವ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ.