Fake News - Kannada
 

ಕೊಯಮತ್ತೂರಿನ ‘ಮಾಶಾ ಅಲ್ಲಾ’ ಎಂಬ ಮುಸ್ಲಿಂ ಹೋಟೆಲ್ ಹಿಂದೂಗಳಿಗೆ ಆಂಟಿಸ್ಟೆರೈಲ್ ಮಾತ್ರೆಗಳೊಂದಿಗೆ ಬಿರಿಯಾನಿ ಮಾರುತ್ತಿರುವ ಚಿತ್ರಗಳನ್ನು ತಪ್ಪಾಗಿ ಶೇರ್ ಮಾಡಲಾಗಿದ

0

ಕೊಯಮತ್ತೂರಿನಲ್ಲಿ ‘ಮಾಶಾ ಅಲ್ಲಾ’ ಎಂಬ ಮುಸ್ಲಿಮರು ನಡೆಸುತ್ತಿರುವ ಹೋಟೆಲ್ ಹಿಂದುಗಳನ್ನು ದುರ್ಬಲಗೊಳಿಸಿ ಅವರ ಜನಸಂಖ್ಯೆಯನ್ನು ಕಡಿಮೆ ಮಾಡಲು ಆಂಟಿಸ್ಟೆರೈಲ್ ಮಾತ್ರೆಗಳೊಂದಿಗೆ ಬಿರಿಯಾನಿಯನ್ನು ಮಾರಾಟ ಮಾಡುತ್ತಿದ್ದಾರೆ ಎನ್ನುವ ಚಿತ್ರಗಳು (ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ಆಂಟಿಸ್ಟೆರೈಲ್ ಮಾತ್ರೆಗಳನ್ನು ಬೆರೆಸಿ ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದ ಕೊಯಮತ್ತೂರಿನ ‘ಮಾಶಾ ಅಲ್ಲಾ’ ಹೋಟೆಲ್ ಮಾಲೀಕರನ್ನು ಬಂಧಿಸಲಾಗಿದೆ.

ಫ್ಯಾಕ್ಟ್: ಮೇ 2019 ರಲ್ಲಿ ‘ಶ್ರೀಲಂಕಾದ ವಿಶೇಷ ಕಾರ್ಯಪಡೆ’ಯ ದಾಳಿಯ ಸಮಯದಲ್ಲಿ ಈ  ಟ್ಯಾಬ್ಲೆಟ್‌ಗಳನ್ನು ವಶಪಡಿಸಿಕೊಂಡಾಗ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ಈ ಪೋಸ್ಟ್ ನಲ್ಲಿರುವ ಟ್ಯಾಬ್ಲೆಟ್ಗಳು ಭಾರತದಲ್ಲ. ಪೊಲೀಸರೊಂದಿಗೆ ಇರುವ ಪುರುಷರ ಚಿತ್ರಗಳು ಯುಪಿಯ ಮದ್ರಸದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದವರ ಚಿತ್ರಗಳಾಗಿವೆ. ಇದಲ್ಲದೆ ಬಿರಿಯಾನಿ ತಟ್ಟೆಯನ್ನು ಹಿಡಿದಿರುವ ವ್ಯಕ್ತಿಯ ಫೋಟೋ  2016 ರಿಂದ ಇಂಟರ್ನೆಟ್‌ನಲ್ಲಿದೆ. ಆದ್ದರಿಂದ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಸುಳ್ಳಾಗಿದೆ.

ಚಿತ್ರ  1:

ರಿವರ್ಸ್ ಇಮೇಜ್ ಸರ್ಚ್ ಬಳಸಿಕೊಂಡು ಟ್ಯಾಬ್ಲೆಟ್ ಗಳಿರುವ ಚಿತ್ರವನ್ನುಪರಿಶೀಲಿಸಿದಾಗ ಈ ಫೋಟೋ ಶೀಲಂಕಾದ ‘ದಿ ಡೈಲಿ ಮಿರರ್ ಎಂಬ  ಪತ್ರಿಕೆಯಲ್ಲಿ ವರದಿಯಾಗಿದೆ. ಈ ಲೇಖನದ ಪ್ರಕಾರ, ‘ಶ್ರೀಲಂಕಾದ ವಿಶೇಷ ಕಾರ್ಯಪಡೆ’ (STF) ಮೇ 2019 ರಲ್ಲಿ ಕೊಲಂಬೊದಳ್ಳಿ ನಡೆಸಿದ ದಾಳಿಯ ಸಮಯದಲ್ಲಿ ಈ ಟ್ಯಾಬ್ಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.  ಇದರಲ್ಲಿ  ಭಾಗಿಯಾಗಿದ್ದಕ್ಕಾಗಿ ತಂದೆ ಮತ್ತು ಮಗನನ್ನು ಕಸ್ಟಡಿಗೆ ತೆಗೆದುಕೊಂಡಿದೆ. ಪಾಕಿಸ್ತಾನದಲ್ಲಿ ತಯಾರಾಗಿ,  ಶ್ರೀಲಂಕಾದಲ್ಲಿ ಮಾರಾಟಕ್ಕೆ ನಿಷೇಧಿಸಲಾಗಿರುವ ಟ್ರಾಮಾಡೊಲ್ ಮತ್ತು ಇತರ ಹಲವಾರು ಅಕ್ರಮ ಔಷಧಗಳನ್ನು ಎಸ್‌ಟಿಎಫ್ ವಶಪಡಿಸಿಕೊಂಡಿದೆ. ಹಾಗಾಗಿ, ಈ ಚಿತ್ರ ಶ್ರೀಲಂಕಾದ್ದು, ಭಾರತಕ್ಕೆ ಯಾವುದೇ ಸಂಬಂಧವಿಲ್ಲ.

ಚಿತ್ರಗಳು 2 ಮತ್ತು 3:

ಪೊಲೀಸರ ಜೊತೆಗಿರುವ ಈ ಪುರುಷರ ಚಿತ್ರಗಳು 2019 ರಲ್ಲಿ ಯುಪಿಯಲ್ಲಿ ನಡೆದ ಘಟನೆಯಾದಾಗಿದೆ. ಬಿಜ್ನೋರ್ ಪೋಲೀಸ್ (ಯುಪಿ) ಅವರ ಟ್ವೀಟ್ ಪ್ರಕಾರ, ಫೋಟೋದಲ್ಲಿರುವ ಪುರುಷರನ್ನು  2019 ರ  ಜುಲೈ ನಲ್ಲಿ ಮದ್ರಸಾದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಬಳಸಿದ್ದಕ್ಕಾಗಿ ಬಂಧಿಸಲಾಗಿದೆ. ಇದರ ಕುರಿತಾದ  ಹೆಚ್ಚಿನ ಮಾಹಿತಿ ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಹಾಗಾಗಿ, ಈ ಚಿತ್ರಗಳು ಉತ್ತರ ಪ್ರದೇಶಕ್ಕೆ ಸೇರಿದ್ದಾಗಿದೆ.

ಚಿತ್ರ 4:

ಇಂಟರ್ನೆಟ್‌ನಲ್ಲಿ 2016 ರಿಂದ ಬಿರಿಯಾನಿ ತಟ್ಟೆಯನ್ನು ಹಿಡಿದಿರುವ ವ್ಯಕ್ತಿಯ ಫೋಟೋ ಕಂಡುಬಂದಿದೆ.  ಅದೇ ಫೋಟೋವನ್ನು ಬಿರಿಯಾನಿ ಮಾಡಲು ಸಂಬಂಧಿಸಿದ ಅನೇಕ ಯೂಟ್ಯೂಬ್ ವೀಡಿಯೊಗಳಿಗೆ ಥಂಬ್‌ನೇಲ್ ಆಗಿ ಬಳಸಲಾಗಿದೆ ಎಂದು ಕಂಡುಬಂದಿದೆ.

ಇಷ್ಟೇ ಅಲ್ಲದೆ, ‘ಮಾಶಾ ಅಲ್ಲಾ’ ಹೋಟೆಲ್ನ ಈ ಪೋಸ್ಟ್ ವೈರಲ್ ಆಗಿದ್ದು 2020 ರ ಮಾರ್ಚ್ ನಲ್ಲಿ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಇದು ಸುಳ್ಳು ಸುದ್ದಿ ಎಂದು ಕೊಯಮತ್ತೂರಿನ  ನಗರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಟ್ವೀಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದದರೆ, ಕೊಯಮತ್ತೂರಿನ ‘ಮಾಶಾ ಅಲ್ಲಾ’ ಎಂಬ ಮುಸ್ಲಿಂ ಹೋಟೆಲ್  ಹಿಂದೂಗಳಿಗೆ ಆಂಟಿಸ್ಟೆರೈಲ್ ಮಾತ್ರೆಗಳೊಂದಿಗೆ ಬಿರಿಯಾನಿ ಮಾರುತ್ತಿದ್ದಾರೆ ಎನ್ನುವುದನ್ನು ತಪ್ಪಾಗಿ ಶೇರ್ ಮಾಡಲಾಗಿದೆ.

Share.

Comments are closed.

scroll