ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿದ್ದು ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಹೀಗಾಗಿ NEET (UG) ಪೇಪರ್ ಸೋರಿಕೆಯಲ್ಲಿ ಹಗರಣದಲ್ಲಿ ‘ಎಕ್ಸಾಮ್ ಜಿಹಾದ್’ ಪಿತೂರಿ ಇದೆ ಎಂದು ಪೋಸ್ಟ್ಗಳು ವೈರಲ್ ಆಗುತ್ತಿದೆ. ಹಾಗಾದರೆ ಈ ಲೇಖನದ ಮೂಲಕ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: ವೈರಲ್ ಪೋಸ್ಟ್‌ನಲ್ಲಿರುವ ವ್ಯಕ್ತಿಗಳು NEET-UG ಪೇಪರ್ ಸೋರಿಕೆ ಹಗರಣಕ್ಕೆ ಸಂಬಂಧಿಸಿ ಸಿಬಿಐ ಬಂಧಿಸಿದ ಮೂವರು ಮುಸ್ಲಿಂ ಪುರುಷರು. ಈ ಪ್ರಕರಣದ ಹಿಂದೆ ಪರೀಕ್ಷೆ ಜಿಹಾದ್‌ನ ಪಿತೂರಿ ಇದೆ.
ಫ್ಯಾಕ್ಟ್: ಸಿಬಿಐ, ಈ ವೈರಲ್ ಪೋಸ್ಟ್ ನಲ್ಲಿ ಇರುವ ಮೂವರನ್ನು NEET-UG ಪೇಪರ್ ಸೋರಿಕೆ ಹಗರಣಕ್ಕೆ ಸಂಬಂಧಿಸಿ ಬಂದಿಸಿರುವುದು ನಿಜ. ಆದರೆ. ಅಲ್ಲಿ ಮುಸ್ಲಿಮರು ಮಾತ್ರವಲ್ಲದೆ ಹಿಂದೂಗಳು ಸಹ ಭಾಗಿಯಾಗಿದ್ದಾರೆ. ಇನ್ನು ಯಾವುದೇ ಸುದ್ದಿ ವಾಹಿನಿಯೂ ‘ಎಕ್ಸಾಮ್ ಜಿಹಾದ್’ ಗೆ ಕುರಿತಾದ ವರದಿಗಳು ಎಲ್ಲಿಯೂ ಕಂಡುಬಂದಿಲ್ಲ. ಹಾಗಾಗಿ ಈ ಪೋಸ್ಟ್ ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ವೈರಲ್ ಕ್ಲೈಮ್‌ನಲ್ಲಿರುವ ನಿಜಾಂಶವನ್ನು ಪರಿಶೀಲಿಸಲು, ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ನಲ್ಲಿ ಪರಿಶೀಲಿಸಿದ್ದೇವೆ. ಈ ಮೂರು-ಮುಸ್ಲಿಂ ಪುರುಷರನ್ನು ಸಿಬಿಐ ಬಂಧಿಸಿದ ಕುರಿತು ಹಲವಾರು ಸುದ್ದಿ ವರದಿಗಳನ್ನು (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ನಾವು ಕಂಡುಕೊಂಡಿದ್ದೇವೆ.
ಜಮಾಲುದ್ದೀನ್ ಅನ್ಸಾರಿ ಎಂಬ ಪತ್ರಕರ್ತ ಮೊದಲಿನವನಾದರೆ, ನಂತರದ ಇಬ್ಬರು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಓಯಸಿಸ್ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್ ಹಕ್, ಮತ್ತು ಮೂರನೆಯ ವ್ಯಕ್ತಿ ಅದೇ ಶಾಲೆಯ ಉಪಪ್ರಾಂಶುಪಾಲರಾದ ಇಮ್ತಿಯಾಜ್ ಆಲಂ.
NEET-UG ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವರದಿಗಳ ಮೂಲಕ ನಮಗೆ ತಿಳಿದು ಬಂದ ವಿಷಯವೇನೆಂದರೆ ಗುಜರಾತ್ ನಲ್ಲಿ ಕೇವಲ ಮುಸ್ಲಿಂರನ್ನು ಮಾತ್ರವಲ್ಲದೆ ಮಸಲ್ಮಾನೇತರರನ್ನು ಸಹ ಸಿಬಿಐ ಬಂಧಿಸಿದ್ದು, ಇದರಲ್ಲಿ ಶಾಲೆಯ ಪ್ರಾಂಶುಪಾಲರು ಜೈ ಜಲರಾಮ್, ಪುರುಷೋತ್ತಮ ಶರ್ಮಾ, ಶಿಕ್ಷಕ ತುಷಾರ್ ಭಟ್ ಮತ್ತು ಮಿಡಲ್ ಮ್ಯಾನ್ ವಿಭೋರ್ ಆನಂದ್ ವ್ಯಕ್ತಿಗಳ ಹೆಸರುಗಳು ಸಹ ಕೇಳಿಬಂದಿದೆ.
ಈ ಶಾಲೆಯ ಮಾಲೀಕ ದೀಕ್ಷಿತ್ ಪಟೇಲ್ ನನ್ನು ಸಹ ಸಿಬಿಐ (ಇಲ್ಲಿ ಮತ್ತು ಇಲ್ಲಿ) ಬಂಧಿಸಿದೆ.
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಈ ಪ್ರಕರಣಕ್ಕೆ ಸಂಬಂದಿಸಿದ ಎಲ್ಲಾ ಆರೋಪಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದು ಇಲ್ಲಿದೆ. ಇದರ ಪ್ರಕಾರ NEET-UG ಪೇಪರ್ ಸೋರಿಕೆ ಪ್ರಕರಣದ ಆರೋಪಿಗಳನ್ನು ಸಿಬಿಐ ಬಂಧಿಸಿದ್ದು, ಇಲ್ಲಿ ಕೇವಲ ಮುಸ್ಲಿಮರು ಮಾತ್ರವಲ್ಲದೇ ಹಿಂದೂಗಳು ಸಹ ಇದ್ದಾರೆ ಎಂಬುವುದು ಇಲ್ಲಿ ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ನೀಟ್-ಯುಜಿ ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ಮುಸ್ಲಿಂರನ್ನು ಮಾತ್ರವಲ್ಲದೆ ಹಿಂದೂಗಳು ಸಹ ಇಲ್ಲಿ ಶಾಮೀಲಾಗಿದ್ದಾರೆ.