Fake News - Kannada
 

ಬಾಲಿವುಡ್ ನಟಿ ಶ್ರೀದೇವಿ ಅವರದ್ದು ಅನ್ನಲಾದ ಈ ಮರಣೋತ್ತರ ವರದಿ ನಿಜವಲ್ಲ

0

ನಟಿ ಶ್ರೀದೇವಿ ಅವರ ಮರಣೋತ್ತರ ವರದಿಯೆಂದು ಪ್ರತಿಪಾದಿಸಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವರದಿಯು ನಟಿ ಶ್ರೀದೇವಿಗೆ ಬಲವಂತವಾಗಿ ಕೊಕೇನ್ ನೀಡಲಾಗಿದೆ, ಮೂರು ಗಾಯಗಳಾಗಿವೆ ಮತ್ತು ಅವರ ಸಾವು ಸ್ವಾಭಾವಿಕವಲ್ಲ ಎಂದು ಹೇಳುತ್ತದೆ. ಈ ಲೇಖನದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌‌ನ ಸತ್ಯಾಂಶವನ್ನು ಪರಿಶೀಲಿಸೋಣ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಪ್ರತಿಪಾದನೆ: ನಟಿ ಶ್ರೀದೇವಿ ಅವರಿಗೆ ಬಲವಂತವಾಗಿ ಮಾದಕ ದ್ರವ್ಯ ನೀಡಲಾಗಿತ್ತು. ಅವರ ಸಾವು ಸ್ವಾಭಾವಿಕವಲ್ಲ ಎಂದು ಹೇಳಿದ ಮರಣೋತ್ತರ ವರದಿ.

ಸತ್ಯ: ನಟಿ ಶ್ರೀದೇವಿ ಪ್ರಜ್ಞೆ ಕಳೆದುಕೊಂಡು ನಂತರ ಸ್ನಾನದ ತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ದುಬೈ ಮೀಡಿಯಾ ಆಫಿಸ್ ಟ್ವೀಟ್ ಮಾಡಿ ದೃಢಪಡಿಸಿದೆ. ಸಂಬಂಧಿತ ದಾಖಲೆಗಳೊಂದಿಗೆ ಹಲವಾರು ಸುದ್ದಿಸಂಸ್ಥೆಗಳು ಕೂಡಾ ಇದನ್ನೇ ದೃಢಪಟಿಸಿದೆ. ಇದಲ್ಲದೆ, ನಾವು ವೈರಲ್ ಡಾಕ್ಯುಮೆಂಟ್ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಡಾಕ್ಯುಮೆಂಟ್ ಅಧಿಕೃತವಲ್ಲ ಎಂದು ಸ್ಪಷ್ಟಪಡಿಸುವ ಅನೇಕ ಕಾಗುಣಿತ ಮತ್ತು ವ್ಯಾಕರಣ ತಪ್ಪುಗಳು ಇದರಲ್ಲಿ ಕಂಡುಕೊಳ್ಳಬಹುದು. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ಪೋಸ್ಟ್‌ನ ಪ್ರತಿಪಾದನೆ ತಪ್ಪಾಗಿದೆ.

‘Sridevi death UAE’ ಎಂಬ ಕೀವರ್ಡ್‌ ಮೂಲಕ ಗೂಗಲ್‌ನಲ್ಲಿ ಹುಡುಕಾಟ ನಡೆಸಿದರೆ ದುಬೈ ಮೀಡಿಯಾ ಆಫಿಸ್‌ ಎಂಬ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಇದರ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರಲ್ಲಿ ನಟಿಯು ಪ್ರಜ್ಞೆ ತಪ್ಪಿ, ನಂತರ ಸ್ನಾನದ ತೊಟ್ಟಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ. ಈ ವರದಿಯಲ್ಲಿ ಯಾವುದೇ ಗಾಯಗಳ ಬಗ್ಗೆ ಉಲ್ಲೇಖವಿಲ್ಲ.

ಅಷ್ಟೇ ಅಲ್ಲದೆ, ನಾವು ಇನ್ನಷ್ಟು ದಾಖಲೆಗಾಗಿ ಹುಡುಕಾಡಿದಾಗ ನಟಿಯ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರಕಟಿಸಿರುವ ಲೇಖನವೊಂದನ್ನು ಕಂಡುಕೊಂಡಿದ್ದೇವೆ. ಇದರಲ್ಲಿ ಆಕಸ್ಮಿಕವಾಗಿ ಮುಳುಗಿರುವುದು ಸಾವಿಗೆ ಕಾರಣ ಎಂದು ದಾಖಲೆ ಖಚಿತಪಡಿಸುತ್ತದೆ.

ನಾವು ಇನ್ನಷ್ಟು ಹುಡುಕಾಡಿದಾಗ ವೈರಲ್ ವರದಿಯು ಯುಎಇ ಸರ್ಕಾರದ ಯಾವುದೆ ಅಧಿಕೃತ ಮೂಲದ್ದಲ್ಲ ಎಂದು ಕಂಡುಕೊಂಡಿದ್ದೇವೆ. ಅಲ್ಲದೆ, ಈ ವೈರಲ್ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಅಧಿಕೃತವಲ್ಲ ಎಂದು ಸ್ಪಷ್ಟವಾಗುವ ಅನೇಕ ಕಾಗುಣಿತ ಮತ್ತು ವ್ಯಾಕರಣದ ತಪ್ಪುಗಳನ್ನು ಕಾಣಬಹುದಾಗಿದೆ. ಯುಎಇ ಆರೋಗ್ಯ ಸಚಿವಾಲಯದ ಲಾಂಛನವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿರುವುದರಿಂದ, ಡಿಜಿಟಲ್ ಪರಿಕರಗಳನ್ನು ಬಳಸಿಕೊಂಡು ಪೋಸ್ಟ್‌ನಲ್ಲಿರುವಂತಹ ಡಾಕ್ಯುಮೆಂಟ್ಅನ್ನು ಸುಲಭವಾಗಿ ರಚಿಸಬಹುದಾಗಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ ಬಾಲಿವುಡ್‌ನಲ್ಲಿ ಡ್ರಗ್ಸ್‌ ಜಾಲದ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ, ನಟಿ ಶ್ರೀದೇವಿಯ ಸಾವಿಗೆ ಸಂಬಂಧಿಸಿದ ಪೋಸ್ಟ್‌ಗಳು ಕೂಡ ಮತ್ತೆ ಹರಿದಾಡುತ್ತಿದೆ. ಅಲ್ಲದೆ ವಿಭಿನ್ನವಾಗಿ ದಾರಿ ತಪ್ಪಿಸುವ ಪ್ರತಿಪಾದನೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿವೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಶ್ರೀದೇವಿಯವರ ಮರಣೋತ್ತರ ವರದಿಯು ನಿಜವಾದದ್ದಲ್ಲ.

Share.

About Author

Comments are closed.

scroll