Fake News - Kannada
 

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆಯುಧ ಪೂಜೆಗೆ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ಅಡ್ಡಿಪಡಿಸುತ್ತಿವೆ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ

0

ತಮಿಳುನಾಡಿನ ಡಿಎಂಕೆ ಸರ್ಕಾರ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರಗಳು ಆಯುಧ  ಪೂಜೆಯ ವೇಳೆ ಸರ್ಕಾರಿ ಕಚೇರಿಗಳಲ್ಲಿ ಪೂಜೆಗೆ ಅಗತ್ಯವಾದ ಹೂವು, ಕುಂಕುಮ, ಅರಿಶಿನ ಮತ್ತು ಇತರ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿ ಜಿಒ ಹೊರಡಿಸಿವೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ನಲ್ಲಿ ಮಡಿದ ಕ್ಲೇಮ್ ಅನ್ನು ಪರಿಶೀಲಿಸೋಣ.

ಕ್ಲೇಮ್: ತಮಿಳುನಾಡಿನ ಡಿಎಂಕೆ ಸರ್ಕಾರ ಮತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಆಯುಧಪೂಜೆಯಲ್ಲಿ ಹೂವು, ಕುಂಕುಮ, ಅರಿಶಿನ ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಬಳಸುವುದನ್ನು ನಿಷೇಧಿಸಿ ಜಿಒಗಳನ್ನು ಹೊರಡಿಸಿದೆ.

ಫ್ಯಾಕ್ಟ್:  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೋಟೀಸ್ ನಕಲಿಯಾಗಿದ್ದು, ತಾವು ಅದನ್ನು ನೀಡಿಲ್ಲ ಎಂದು ತಮಿಳುನಾಡಿನ ತಿರುಪ್ಪೂರ್ ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ವಿಧಾನಸೌಧ, ವಿಕಾಸಸೌಧದಂತಹ ಐತಿಹಾಸಿಕ ಕಟ್ಟಡಗಳಲ್ಲಿ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಪೂಜಾ ಸಾಮಗ್ರಿಗಳನ್ನು ಬಳಸಬಾರದು ಎಂದು ಕರ್ನಾಟಕ ಸರ್ಕಾರ ಹೊರಡಿಸಿರುವ ನೋಟಿಸ್‌ನಲ್ಲಿ ಮಾತ್ರ ಹೇಳಲಾಗಿದೆ. ಇದಲ್ಲದೆ, ಈ ಹಿಂದೆ ಬಿಜೆಪಿ ಸರ್ಕಾರವೂ ಇದೇ ರೀತಿಯ ನಿಬಂಧನೆಗಳೊಂದಿಗೆ ನೋಟಿಸ್ ನೀಡಿತ್ತು. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪುದಾರಿಗೆಳೆಯುವಂತಿದೆ.

ಈ ಹಿಂದೆ ವೈರಲ್ ಪೋಸ್ಟ್‌ನಲ್ಲಿ ತಮಿಳುನಾಡು ಸರ್ಕಾರ ಹೊರಡಿಸಿದ ನೋಟಿಸ್ ಅನ್ನು ತಿರುಪ್ಪೂರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ಸಿಬ್ಬಂದಿಗೆ ನೀಡಿರುವುದು ಗಮನಕ್ಕೆ ಬಂದಿತ್ತು. ಆಯುಧ  ಪೂಜೆ ಮತ್ತು ಸರಸ್ವತಿ ಪೂಜೆಯ ಸಮಯದಲ್ಲಿ ಆಸ್ಪತ್ರೆ ಅಥವಾ ಕಾಲೇಜಿನ ಇತರ ಕಚೇರಿಗಳಲ್ಲಿ ಯಾವುದೇ ದೇವರ ಫೋಟೋ ಅಥವಾ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಎಂದು ಅದು ಹೇಳಿದೆ. ಆದರೆ ಈ ಸೂಚನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ. ಈ ನೋಟಿಸ್ ಅವರು ಹೊರಡಿಸಿದ್ದಲ್ಲ ಮತ್ತು ಅದು ನಕಲಿ ಎಂದು ಸ್ಪಷ್ಟಪಡಿಸಿದೆ. ಸಂಬಂಧಿತ ಮಾಧ್ಯಮ ಲೇಖನಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಎಂದು ಬಹಳಷ್ಟು ಕಡೆ  ಕಾಣಬಹುದು. ಮೇಲಾಗಿ, ಸರ್ಕಾರಿ ಕಚೇರಿಗಳಲ್ಲಿ ಆಯುಧ ಪೂಜೆ ನಡೆಸಬಾರದು ಎಂದು ತಮಿಳುನಾಡು ಸರ್ಕಾರ ಎಲ್ಲಿಯೂ ಘೋಷಿಸಿಲ್ಲ.

ಆಯುಧಪೂಜೆ ಸಂದರ್ಭದಲ್ಲಿ ವಿಧಾನಸೌಧ, ವಿಕಾಸಸೌಧದಂತಹ ಕಟ್ಟಡಗಳಲ್ಲಿ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಬಣ್ಣ, ಅರಿಶಿನ, ಕುಂಕುಮ ಮುಂತಾದ ಪೂಜಾ ಸಾಮಗ್ರಿಗಳನ್ನು ಬಳಸಬಾರದು ಎಂದು ಕರ್ನಾಟಕ ಸರ್ಕಾರ ಹೊರಡಿಸಿರುವ ನೋಟಿಸ್ ನಲ್ಲಿ ತಿಳಿಸಲಾಗಿದೆ. ವಿಧಾನಸೌಧ ಮತ್ತು ವಿಕಾಸಸೌಧ ಐತಿಹಾಸಿಕ ಕಟ್ಟಡಗಳಾಗಿರುವುದರಿಂದ ಇವುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ರಾಸಾಯನಿಕ ಪದಾರ್ಥಗಳಿಂದ ಈ ಕಟ್ಟಡಗಳು ಹಾಳಾಗುತ್ತವೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಅದರಲ್ಲಿ ಎಲ್ಲಿಯೂ ಆಯುಧ ಪೂಜೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಿಲ್ಲ, ಆದರೆ ನೈಸರ್ಗಿಕ ಪೂಜಾ ಸಾಮಗ್ರಿಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ವಿಚಾರವಾಗಿ ಪ್ರತಿಪಕ್ಷಗಳು ಆರೋಪ ಮಾಡಿದಾಗ 2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇಂತಹ ಸೂಚನೆ ನೀಡಲಾಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

2020 ಮತ್ತು 2022 ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ ನೋಟೀಸ್‌ಗೆ ಸಂಬಂಧಿಸಿದ ಮಾಧ್ಯಮ ಲೇಖನಗಳನ್ನು  ಸಹ ಇಲ್ಲಿ, ಇಲ್ಲಿ ಕಾಣಬಹುದು.

ಅಂತಿಮವಾಗಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆಯುಧಪೂಜೆಗೆ I.N.D.I.A ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಡಿಎಂಕೆ ಅಡ್ಡಿಪಡಿಸುತ್ತಿವೆ ಎಂಬ ಪ್ರಚಾರದಲ್ಲಿ ಸತ್ಯಾಂಶವಿಲ್ಲ.

Share.

Comments are closed.

scroll