“ಎಲೋನ್ ಮಸ್ಕ್ ಅವರು 2024 ರ ಕೊನೆಯಲ್ಲಿ ಟೆಸ್ಲಾ ಪೈ ಮೊಬೈಲ್ ಫೋನ್ ಅನ್ನು ಪ್ರಾರಂಭಿಸುತ್ತಿದ್ದಾರೆ” ಎಂದು ಹೇಳುವ ಕ್ಲೇಮ್ನಲ್ಲಿ “ಟೆಸ್ಲಾ ಮಾಡೆಲ್ ಪೈ” (ಇಲ್ಲಿ)ಹೆಸರಿನ ಮೊಬೈಲ್ ಫೋನ್‌ನ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಫೋನ್‌ಗಳು ಸೂರ್ಯನ ಬೆಳಕಿನಿಂದ ಚಾರ್ಜ್ ಆಗುತ್ತವೆ ಮತ್ತು ಮೊಬೈಲ್ ಫೋನ್‌ನ ಇಂಟರ್ನೆಟ್ ಟೆಸ್ಲಾದ ಸ್ಟಾರ್ ಲಿಂಕ್ ಉಪಗ್ರಹದೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಉಸೆರ್ಸ್ಗಳು ಈ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾದರೆ ಈ ಲೇಖನದ ಮೂಲಕ ಕ್ಲೇಮ್ ಅನ್ನು ಪರಿಶೀಲಿಸೋಣ.
ಕ್ಲೇಮ್: 2024 ರ ಕೊನೆಯಲ್ಲಿ ಎಲೋನ್ ಮಸ್ಕ್ ಟೆಸ್ಲಾ ಪೈ ಮೊಬೈಲ್ ಫೋನ್‌ಗಳನ್ನು ಲಾಂಚ್ ಮಾಡಲಿದ್ದಾರೆ.
ಫ್ಯಾಕ್ಟ್: ಟೆಸ್ಲಾದವರು 2024 ರ ಕೊನೆಯಲ್ಲಿ ಮೊಬೈಲ್ ಫೋನ್/ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದ್ದಾರೆ ಎಂದು ಟೆಸ್ಲಾ ಯಾವುದೇ ಅಫೀಷಿಯಲ್ ಪ್ರಕಟಣೆಯನ್ನು ಮಾಡಿಲ್ಲ. ಟೆಸ್ಲಾ ಮೊಬೈಲ್ ಫೋನ್ ಅನ್ನು ಬಿಡುಗಡೆ ಮಾಡುತ್ತಿಲ್ಲ, ಜೋ ರೋಗನ್ ಅವರ ಪಾಡ್‌ಕ್ಯಾಸ್ಟ್ ಕುರಿತು ಸ್ವಯಾನಾ ಎಲೋನ್ ಮಸ್ಕ್ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.
ಮೊದಲಿಗೆ, 2024 ರ ವೇಳೆಗೆ ಟೆಸ್ಲಾ “ಪೈ” ಫೋನ್‌ಗಳನ್ನು ಪ್ರಾರಂಭಿಸುತ್ತದೆ ಎಂಬ ಹೇಳಿಕೆಯ ಹಿಂದಿನ ಸತ್ಯವನ್ನು ಕಂಡುಹಿಡಿಯಲು ನಾವು ಸೂಕ್ತವಾದ ಕೀವರ್ಡ್‌ಗಳನ್ನು ಬಳಸಿಕೊಂಡು ಇಂಟರ್ನೆಟ್ ಅನ್ನು ಹುಡುಕಿದೆವು. ಆದರೆ ಇದನ್ನು ಪುಷ್ಟಿಕರಿಸುವ ಯಾವುದೇ ನ್ಯೂಸ್ ಆರ್ಟಿಕಲ್ಸ್ ನಮಗೆ ಕಂಡುಬಂದಿಲ್ಲ. ಟೆಸ್ಲಾ ಅವರ ಅಧಿಕೃತ/ಅಫೀಷಿಯಲ್ “X” ಖಾತೆಯಲ್ಲಾಗಲೀ, ವೆಬ್‌ಸೈಟ್‌ನಲ್ಲಾಗಲೀ ಅಥವಾ ಎಲೋನ್ ಮಸ್ಕ್ ಅವರ “X” ಖಾತೆಯಲ್ಲಾಗಲೀ, ಟೆಸ್ಲಾ ಕಂಪನಿಯು ಮೊಬೈಲ್ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ ಎಂಬ ಯಾವುದೇ ರೆಪೋರ್ಟ್ಗಳು ನಮಗೆ ಕಂಡುಬಂದಿಲ್ಲ. ಅಲ್ಲದೆ, ಈ ಕ್ರಮದಲ್ಲಿ, ಇತ್ತೀಚೆಗೆ ಎಲೋನ್ ಮಸ್ಕ್ ಈ ವಿಷಯದ ಕುರಿತು ಜೋ ರೋಗನ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ್ದಾರೆ ಎಂದು ನಮಗೆ ತಿಳಿದುಬಂದಿದೆ.
ಯೂಟ್ಯೂಬ್‌ನಲ್ಲಿ ಎಲೋನ್ ಮಸ್ಕ್ ಟೆಸ್ಲಾ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎನ್ನುವ ವಿಡಿಯೋಗಳು ಬರುತಿದ್ದು, ಇದು ನಿಜವೇ ಎಂದು ಜೋ ಮಸ್ಕ್‌ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ “ನಾವು ಫೋನ್ (ಬಿಡುಗಡೆ) ಮಾಡುವುದಿಲ್ಲ” ಎಂದು ಹೇಳಿದರು. ಅಗತ್ಯವಿದ್ದಲ್ಲಿ ಮಾಡಬಹುದು (ಇಲ್ಲಿ, ಇಲ್ಲಿ) ಆದರೆ ಈಗ ಮೊಬೈಲ್ ಫೋನ್ ತಯಾರಿಸುವ ಬಗ್ಗೆ ಟೆಸ್ಲಾ ಯೋಚಿಸುತ್ತಿಲ್ಲ ಎಂದು ಎಲೋನ್ ಈ ಪಾಡ್‌ಕ್ಯಾಸ್ಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದೇ ವಿಷಯದ ಕುರಿತು, ಜೂನ್ 2024 ರಲ್ಲಿ ಲೈವ್ ಸ್ಟ್ರೀಮ್ ಸಮಯದಲ್ಲಿ ಮಸ್ಕ್, ಟೆಸ್ಲಾ ಫೋನ್‌ಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಎಂದು ಡೆಕ್ಕನ್ ಕ್ರಾನಿಕಲ್ ನ್ಯೂಸ್ ಆರ್ಟಿಕಲ್ ನಲ್ಲಿ ವರದಿ ಮಾಡಿದೆ. ಈ ಹಿಂದೆ, ಎಲೋನ್ ಮಸ್ಕ್ ಇದನ್ನು “X” ಮೂಲಕ ಕೆಲವರಿಗೆ ಸ್ಪಷ್ಟಪಡಿಸಿದ್ದರು. ಟೆಸ್ಲಾ ಮೊಬೈಲ್ ಫೋನ್‌ಗಳನ್ನು ತಯಾರಿಸುವುದಿಲ್ಲ ಎಂದು ಅವರು 14 ಸೆಪ್ಟೆಂಬರ್ 2020 ರಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ, ನವೆಂಬರ್ 2022 ರಲ್ಲಿ ಆಪಲ್ ಮತ್ತು ಗೂಗಲ್ ತಮ್ಮ ಆಪ್ ಸ್ಟೋರ್‌ಗಳಿಂದ ಟ್ವಿಟರ್ ಅನ್ನು ತೆಗೆದುಹಾಕಿದರೆ, ಮಸ್ಕ್ ಆಲ್ಟರ್ನೇಟಿವ್/ ಇನ್ನೊಂದು ಫೋನ್ ಮಾಡಬೇಕು ಎಂದು ಲಿಜ್ ವೀಲರ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಅಂತಹ ಸಂದರ್ಭ ಬಂದರೆ ಖಂಡಿತಾ ಪರ್ಯಾಯ ಫೋನ್ ಮಾಡುತ್ತೇನೆ ಎಂದು ಮಸ್ಕ್ ತಿಳಿಸಿದ್ದಾರೆ.
ಕೊನೆಯದಾಗಿ ಹೇಳುವುದಾದರೆ, 2024 ರ ಕೊನೆಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಟೆಸ್ಲಾ ಅಧಿಕೃತವಾಗಿ/ಅಫೀಷಿಯಲಾಗಿ ಎಲ್ಲಿಯೂ ಘೋಷಿಸಿಲ್ಲ. ಹಾಗಾಗಿ ವೈರಲ್ ಆಗುತ್ತಿರುವ ಕ್ಲೇಮ್ ಕೇವಲ ವದಂತಿಯಾಗಿದೆ.