Fake News - Kannada
 

ಲಂಡನ್ನಿನಲ್ಲಿ ಪ್ರದರ್ಶನಗೊಂಡ ನಾಟಕದ ವಿಡಿಯೋವನ್ನು ಆಪ್ಘಾನಿಸ್ತಾನದಲ್ಲಿ ಯುವತಿಯರನ್ನು ಹರಾಜು ಹಾಕುತ್ತಿರುವ ವಿಡಿಯೋ ಎಂದು ಹಂಚಿಕೊಳ್ಳುತ್ತಿದ್ದಾರೆ

0

ಆಫ್ಘಾನಿಸ್ತಾನದಲ್ಲಿ ಯುವತಿಯರನ್ನು ಬಹಿರಂಗವಾಗಿ ಹರಾಜು ಇಟ್ಟು ಮಾರುತ್ತಿರುವ ದೃಶ್ಯಗಳು, ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಷೇರ್ ಆಗುತ್ತಿದೆ. ತಾಲಿಬಾನ್ ಉಗ್ರವಾದಿಗಳು ಇತ್ತಿಚಿಗೆ ಆಪ್ಘಾನಿಸ್ತಾನನ್ನು ಸಂಪೂರ್ಣವಾಗಿ ತಮ್ಮ ಅದೀನಕ್ಕೆ ತೆಗೆದುಕೊಂಡಿರುವ ಸಂದರ್ಭದಲ್ಲಿ, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಷೇರ್ ಆಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ

ಪ್ರತಿಪಾದನೆ: ಆಪ್ಘಾನಿಸ್ತಾನದಲ್ಲಿ ಯುವತಿಯರನ್ನು ಸಾರ್ವಜನಿಕವಾಗಿ ಹರಾಜು ಹಾಕಿ ಮಾರುತ್ತಿರುವ ದೃಶ್ಯಗಳು.

ನಿಜಾಂಶ: ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ 2014ರಲ್ಲಿ ಲಂಡನ್‌ ನಗರದಲ್ಲಿ ಪ್ರದರ್ಶನಗೊಂಡ ನಾಟಕದ ದೃಶ್ಯಗಳು ಇರುವುದನ್ನು ಗಮನಿಸಬಹುದು. ಇರಾಕ್ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ( ISIS) ಉಗ್ರವಾದಿಗಳು ನಡೆಸುತ್ತಿರುವ ಸೆಕ್ಸ್ ಸ್ಲೇವ್ ಮಾರುಕಟ್ಟೆಗಳ ಬಗ್ಗೆ ಅರಿವು ಮೂಡಿಸುವ ನಾಟಕ ಇದಾಗಿದೆ. ಈ ವಿಡಿಯೋ ಆಪ್ಘಾನಿಸ್ತಾನಿಗೆ ಸಂಬಂಧಿಸಿದ್ದಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಪೋಸ್ಟ್‌ನಲ್ಲಿ ಷೇರ್ ಮಾಡಿದ ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ರಿವರ್ಸ್‌ ಇಮೇಜ್ ಸರ್ಚ್ ಮಾಡಿ ಹುಡುಕಿದಾಗ, ಈ ದೃಶ್ಯಗಳನ್ನು ಒಳಗೊಂಡ ವಿಡಿಯೋವನ್ನು ಯೂಟ್ಯೂಬ್ ಬಳಕೆದಾರನೊಬ್ಬ 07 ಅಕ್ಟೋಬರ್ 2017 ರಂದು ಅಪ್ಲೋಡ್ ಮಾಡಿರುವುದು ತಿಳಿಯುತ್ತದೆ. ಲಂಡನ್ ನಗರದಲ್ಲಿ ಯುವತಿಯರನ್ನು ಹರಾಜಿನಲ್ಲಿ ಇಟ್ಟು ಮಾರುತ್ತಿದ್ದಾರೆ ಎಂಬದು ಈ ವಿಡಿಯೋ ವಿವರಣೆಯಲ್ಲಿ ತಿಳಿಸಲಾಗಿದೆ. ಈ ವಿವರಗಳ ಆಧಾರದ ಮೇಲೆ ವಿಡಿಯೋದಲ್ಲಿ ಕಾಣಿಸುತ್ತಿರುವ ಘಟನೆಗೆ ಸಂಬಂಧಿಸಿದ ಪೂರ್ಣ ವಿವರಗಳಿಗಾಗಿ ಹುಡುಕಿದಾಗ , ಇದೇ ದೃಶ್ಯಗಳನ್ನು ಒಳಗೊಂಡ ವಿಡಿಯೋವನ್ನು ಷೇರ್ ಮಾಡುತ್ತಾ ‘BBC’ ಸುದ್ದಿ ಸಂಸ್ಥೆ 20 ಅಕ್ಟೋಬರ್ 2014 ರಂದು ತಮ್ಮ ವೆಬ್ಸೈಟ್‌ನಲ್ಲಿ ಲೇಖನ ಪ್ರಕಟಿಸಿರುವುದು ತಿಳಿಯುತ್ತದೆ. ಲಂಡನ್ ನಗರದಲ್ಲಿ ಕುರ್ದಿಷ್ ಪ್ರತಿಭಟನಾಕಾರರು ಇಸ್ಲಾಮಿಕ್‌ ಸ್ಟೇಟ್ (ISIS) ಉಗ್ರವಾದಿಗಳ ಚಟುವಟಿಕೆಗಳನ್ನು ವಿರೋಧಿಸಿ ನಾಟಕ ಪ್ರದರ್ಶನ ಮಾಡುತ್ತಿರುವ ದೃಶ್ಯಗಳನ್ನು ಲೇಖನದಲ್ಲಿ ಸೇರಿಸಲಾಗಿದೆ.

2014 ರಲ್ಲಿ ಲಂಡನ್ ನಗರದಲ್ಲಿ ಮಾಡಿದ ಈ ಪ್ರತಿಭಟನೆಗೆ ಸಂಬಂಧಿಸಿ ‘Neewsweek’ ವೆಬ್ಸೈಟ್ ಲೇಖನ ಪ್ರಕಟಿಸಿದೆ. ಇರಾಕ್ ದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ (ISIS) ಉಗ್ರಗಾಮಿಗಳು ನಡೆಸುತ್ತಿರುವ ಸೆಕ್ಸ್ ಸ್ಲೇವ್ ಮಾರ್ಕೆಟ್‌ಗಳ ಬಗ್ಗೆ ಅರಿವು ಮೂಡಿಸುತ್ತಾ ಕುರ್ದಿಶ್ ಪ್ರತಿಭಟನಾಕಾರರು ಈ ಪ್ರದರ್ಶನ ನೀಡಿರುವುದಾಗಿ ಈ ಲೇಖನದಲ್ಲಿ ಹೇಳಿದೆ. ಡೌನಿಂಗ್ ಸ್ಟ್ರೀಟ್, ಹುಸೇನ್ ಆಫ್ ಪಾರ್ಲಿಮೆಂಟ್ ಸಮೀಪದಲ್ಲಿ ಕುರ್ದಿಶ್ ಪ್ರತಿಭಟನಾಕಾರರು ಈ ಪ್ರದರ್ಶನ ನೀಡಿದ್ದನ್ನು  ಈ ಲೇಖನದಲ್ಲಿ ವರದಿ ಮಾಡಿದ್ದಾರೆ. ಈ ಪರ್ದಶನಕ್ಕೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ತಿಳಿಸುತ್ತಾ ‘ Huffington Post’ ನ್ಯೂಸ್ ಸಂಸ್ಥೆ 16ಅಕ್ಟೋಬರ್ 2014 ರಂದು ಲೇಖನ ಪ್ರಕಟಣೆ ಮಾಡಿದೆ.

ಲಂಡನ್ ನಗರದಲ್ಲಿ ಉಂಟಾದ ಪ್ರತಿಭಟನೆಗೆ ಸಂಬಂಧಿಸಿ ‘Snopes’ ವೆಬ್ಸೈಟ್ 2016ರಲ್ಲಿ ಫ್ಯಾಕ್ಟ್ -ಚೆಕ್ ಲೇಖನ ಪ್ರಕಟಿಸಿದೆ‌. ಈ ವಿವರಗಳ ಆಧಾರದ ಮೇಲೆ ಪೋಸ್ಟ್‌ನಲ್ಲಿ ಷೇರ್ ಮಾಡಿದ ವಿಡಿಯೋ ಲಂಡನ್ ನಗರದಲ್ಲಿ ನೀಡಿದ ಒಂದು ಹಳೆಯ ನಾಟಕ ಪ್ರದರ್ಶನದ ದೃಶ್ಯಗಳೆಂದು ಖಚಿತವಾಗಿ ಹೇಳಬಹುದು.

ಒಟ್ಟಿನಲ್ಲಿ ಲಂಡನ್‌ನಲ್ಲಿ ISIS ಗೆ ವಿರುದ್ಧವಾಗಿ ಮಾಡಿದ ಹಳೆಯ ನಾಟಕ ಪ್ರದರ್ಶನದ ವಿಡಿಯೋವನ್ನು ಆಪ್ಘಾನಿಸ್ತಾನನಲ್ಲಿನ ಯುವತಿಯರನ್ನು ಹರಾಜು ಹಾಕಿ ಮಾರುತ್ತಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ.

Share.

About Author

Comments are closed.

scroll