Fake News - Kannada
 

ಆಗಿನ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳ ನಡುವೆ ಕಾರಿಡಾರ್‌ಗಾಗಿ ಜಿನ್ನಾ ಅವರ ಪ್ರಸ್ತಾಪವನ್ನು ಗಾಂಧಿ ಒಪ್ಪಿಕೊಂಡರು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ

0

ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ನಡುವೆ ಕಾರಿಡಾರ್‌ಗಾಗಿ ಜಿನ್ನಾ ಅವರ ಪ್ರಸ್ತಾಪವನ್ನುಗಾಂಧೀಜಿ ಒಪ್ಪಿಕೊಂಡಿದ್ದೇ, ಗೋಡ್ಸೆ  ಗಾಂಧಿಯನ್ನು ಕೊಲ್ಲಲು ಕಾರಣ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಜಾಡ್ ಆಡಮ್ಸ್ ಅವರ ‘ನೇಕೆಡ್ ಆಂಬಿಷನ್’ ಪುಸ್ತಕವು ಕಾರಿಡಾರ್ ಕುರಿತು ಹೆಚ್ಚಿನ ವಿವರಗಳನ್ನು ನೀಡುತ್ತದೆ ಎಂದು ಪೋಸ್ಟ್ ಹೇಳುತ್ತದೆ. ಪೋಸ್ಟ್‌ನಲ್ಲಿ ಮಾಡಿದ ಕ್ಲೈಮ್ ನ  ಸತ್ಯ-ಪರಿಶೀಲಿಸೋಣ.

ಕ್ಲೇಮ್ : ಆಗಿನ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ನಡುವೆ ಕಾರಿಡಾರ್‌ಗಾಗಿ ಜಿನ್ನಾ ಅವರ ಪ್ರಸ್ತಾಪವನ್ನು ಗಾಂಧಿ ಒಪ್ಪಿಕೊಂಡರು.

ಫ್ಯಾಕ್ಟ್ : ಆಗಿನ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ನಡುವಿನ ಕಾರಿಡಾರ್‌ಗಾಗಿ ಜಿನ್ನಾ ಅವರ ಪ್ರಸ್ತಾಪವನ್ನು ಗಾಂಧಿಯವರು ಒಪ್ಪಿಕೊಂಡರು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಜಿನ್ನಾ ಅಂತಹ ಬೇಡಿಕೆಯನ್ನು ಮುಂದಿಟ್ಟಾಗ ಅದನ್ನು ಸರ್ದಾರ್ ಪಟೇಲ್ ಮತ್ತು ಜವಾಹರಲಾಲ್ ನೆಹರು ಸಾರಾಸಗಟಾಗಿ ತಿರಸ್ಕರಿಸಿದರು. ಪಟೇಲರು ಅದನ್ನು ”ಅದ್ಭುತ ಅಸಂಬದ್ಧ” ಎಂದು ಕರೆ್ದರೆ,  ನೆಹರು  ‘ಕಾರಿಡಾರ್‌ನ ಬೇಡಿಕೆ ”ಬುದ್ದಿಗೇಡಿತನದ ಪರಮಾವಧಿ’ ಎಂದರು.  ಗಾಂಧಿಯವರು ಈ ಕಾರಿಡಾರ್‌ನ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಯನ್ನು ನೀಡಲಿಲ್ಲ. ಆದ್ದರಿಂದ, ಪೋಸ್ಟ್‌ನಲ್ಲಿ ಮಾಡಿದ ಕ್ಲೇಮ್ ತಪ್ಪಾಗಿದೆ.

ಬಾಂಗ್ಲಾದೇಶ (ಹಿಂದಿನ ಪೂರ್ವ ಪಾಕಿಸ್ತಾನ) ಮತ್ತು ಪಾಕಿಸ್ತಾನ (ಹಿಂದಿನ ಪಶ್ಚಿಮ ಪಾಕಿಸ್ತಾನ) ನಡುವಿನ ಕಾರಿಡಾರ್‌ಗಾಗಿ ಜಿನ್ನಾ ಅವರ ಪ್ರಸ್ತಾವನೆಯನ್ನು ಗಾಂಧಿ ಒಪ್ಪಿಕೊಂಡಿದ್ದಾರೆ ಎಂದು ಖಚಿತಪಡಿಸುವ ಯಾವುದೇ ವಿಶ್ವಾಸಾರ್ಹ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮಗೆ ಕಂಡುಹಿಡಿಯಲಾಗಲಿಲ್ಲ.

ಮೇ 1947 ರಲ್ಲಿ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಜಿನ್ನಾ ಅವರು ಭಾರತದ ಮೂಲಕ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳನ್ನು ಸಂಪರ್ಕಿಸುವ ಕಾರಿಡಾರ್  ಮಾಡಲು ಮನವಿ ಮಾಡಿದ್ದರು. ಯುಪಿ ಮತ್ತು ಬಿಹಾರ ಮೂಲಕ ಕಾರಿಡಾರ್‌ಗೆ ನಿರ್ಮಾಣಿಸಲು ಜಿನ್ನಾ ಅವರು 05 ಆಗಸ್ಟ್ 1947 ರಂದು ವಿನ್‌ಸ್ಟನ್ ಚರ್ಚಿಲ್‌ಗೆ ಪತ್ರ ಬರೆದರು ಎಂದು ವರದಿಯಾಗಿದೆ.

ಜಿನ್ನಾ ಅಂತಹ ಬೇಡಿಕೆಯನ್ನು ಮುಂದಿಟ್ಟಾಗ ಅದನ್ನು ಸರ್ದಾರ್ ಪಟೇಲ್ ಮತ್ತು ಜವಾಹರಲಾಲ್ ನೆಹರು ಸಾರಾಸಗಟಾಗಿ ತಿರಸ್ಕರಿಸಿದರು. ಪಟೇಲರು ಅದನ್ನು ”ಅದ್ಭುತ ಅಸಂಬದ್ಧ” ಎಂದು ಕರೆ್ದರೆ,  ನೆಹರು  ‘ಕಾರಿಡಾರ್‌ನ ಬೇಡಿಕೆ ”ಬುದ್ದಿಗೇಡಿತನದ ಪರಮಾವಧಿ’ ಎಂದರು. ಗಾಂಧಿಯವರು ಈ ಕಾರಿಡಾರ್‌ನ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಹೇಳಿಕೆಯನ್ನು ನೀಡಲಿಲ್ಲ.

ನಾಥೂರಾಮ್ ಗೋಡ್ಸೆ 30 ಜನವರಿ 1948 ರಂದು ಗಾಂಧಿಯನ್ನು ಹತ್ಯೆ ಮಾಡಿದನು. ಗೋಡ್ಸೆ 05 ಮೇ 1949 ರಂದು ಪಂಜಾಬ್ ಹೈಕೋರ್ಟ್‌ನಲ್ಲಿ ತನ್ನ ಕೊನೆಯ ಹೇಳಿಕೆಯನ್ನು ನೀಡಿದನು, ಅಲ್ಲಿ ಅವನು ಗಾಂಧಿಯನ್ನು ಕೊಂದ ಕಾರಣವನ್ನು ನೀಡಿದನು. ಗೋಡ್ಸೆ ಈ ಹೇಳಿಕೆಯಲ್ಲಿ ಕಾರಿಡಾರ್ ಬೇಡಿಕೆಯನ್ನು ಉಲ್ಲೇಖಿಸಿಲ್ಲ. ಜಾಡ್ ಆಡಮ್ಸ್ ಅವರ ‘ಗಾಂಧಿ: ನೇಕೆಡ್ ಆಂಬಿಷನ್’ ಪುಸ್ತಕದಲ್ಲಿ ಜಿನ್ನಾ ಅವರು ಭಾರತದ ಮೂಲಕ ಪ್ರಸ್ತಾವಿತ ಕಾರಿಡಾರ್‌ಗೆ ಗಾಂಧಿಯವರು ಒಪ್ಪಿಗೆ ನೀಡಿರುವುದನ್ನು ಉಲ್ಲೇಖಿಸಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಆಗಿನ ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದ ನಡುವಿನ ಕಾರಿಡಾರ್‌ಗಾಗಿ ಜಿನ್ನಾ ಅವರ ಪ್ರಸ್ತಾಪವನ್ನು ಗಾಂಧಿ ಒಪ್ಪಿಕೊಂಡರು ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ.

Share.

Comments are closed.

scroll